ನಾಪೋಕ್ಲು, ಜು. ೧ : ನಾಪೋಕ್ಲು ಸಮುದಾಯ ಆಸ್ಪತ್ರೆಯಲ್ಲಿ ಇದುವರೆಗೆ ಸುಮಾರು ೬೦೬೧ ಜನರಿಗೆ ಕೋವಿಡ್ ಪರೀಕ್ಷೆ ಮಾಡ ಲಾಗಿದೆ. ನಾಪೋಕ್ಲು ಹೋಬಳಿಯು ದೊಡ್ಡದಾಗಿದ್ದು, ಈ ವಿಭಾಗಕ್ಕೆ ೨೭ ಗ್ರಾಮಗಳು ಒಳಪಡಲಿದ್ದು, ೪೦ ಸಾವಿರಕ್ಕೂ ಅಧಿಕ ಜನಸಂಖ್ಯೆ ಹೊಂದಿದ್ದರೂ ಇದುವರೆಗೆ ಕೇವಲ ಆರು ಸಾವಿರ ಮಂದಿ ಮಾತ್ರ ಕೋವಿಡ್ ಪರೀಕ್ಷೆ ಮಾಡಿಸಿಕೊಂಡಿದ್ದಾರೆ. ಸರಕಾರ ಈಗಾಗಲೇ ಪ್ರತಿಯೊಬ್ಬರೂ ಪರೀಕ್ಷೆಯನ್ನು ಮಾಡಿಸಬೇಕೆಂದು ಸೂಚಿಸಿದರೂ, ಜನರು ಯಾರೂ ಮುಂದೆ ಬಾರದೆ ಇರುವುದರಿಂದ ಗ್ರಾಮೀಣ ಪ್ರದೇಶದಲ್ಲಿ ರೋಗದ ಲಕ್ಷಣಗಳು ಕಂಡು ಬರುತ್ತಿವೆ. ಕೊರೊನಾ ರೋಗ ಹರಡದಂತೆ ನಾಡಿನ ಜನರು ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಬೇಕೆಂದು ಆರೋಗ್ಯ ಇಲಾಖೆಯವರು ಮನವಿ ಮಾಡಿದ್ದಾರೆ.