ಸಿ.ಪಿ.ಐ.ಎಂ. ಆರೋಪ

ಸಿದ್ದಾಪುರ, ಜು. ೧: ಸಿದ್ದಾಪುರದ ಮಾರುಕಟ್ಟೆ ಹಾಗೂ ಎಂ.ಜಿ ರಸ್ತೆಯನ್ನು ನಿರ್ಬಂಧಿತ ವಲಯ ಎಂದು ಘೋಷಿಸಿದ್ದು, ಅಲ್ಲಿನ ನಿವಾಸಿಗಳಿಗೆ ಅಗತ್ಯ ಸಾಮಗ್ರಿಗಳನ್ನು ತಲುಪಿಸುವಲ್ಲಿ ಗ್ರಾ.ಪಂ. ವಿಫಲವಾಗಿದೆ ಎಂದು ಸಿ.ಪಿ.ಐ.ಎಂ. ಪಕ್ಷದ ಮುಖಂಡ ಎನ್.ಡಿ ಕುಟ್ಟಪ್ಪ ಆರೋಪಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದಾಪುರದ ಮಾರುಕಟ್ಟೆ ವ್ಯಾಪ್ತಿಯಲ್ಲಿ ಸಾವಿರಾರು ಮಂದಿ ವಾಸ ಮಾಡಿಕೊಂಡಿದ್ದಾರೆ. ಆ ಭಾಗದಲ್ಲಿ ಬಡ ಕೂಲಿ ಕಾರ್ಮಿಕರೇ ಇದ್ದು, ಪ್ರತಿದಿನ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಇದೀಗ ಸೀಲ್‌ಡೌನ್‌ನಿಂದಾಗಿ ಜನರು ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದರೂ.ಯಾರೂ ಅವರ ನೆರವಿಗೆ ಬರುವುದಿಲ್ಲವೆಂದು ಆರೋಪಿಸಿದರು. ಗ್ರಾ.ಪಂ ಮಾಡುತ್ತಿರುವ ನಿರ್ಲಕ್ಷö್ಯದ ಬಗ್ಗೆ ಪ್ರಶ್ನಿಸಬೇಕಾದ ಸದಸ್ಯರು ಕೂಡ ಯಾವುದೇ ಚಕಾರವೆತ್ತದೇ ದುರಾಡಳಿತಕ್ಕೆ ಪರೋಕ್ಷವಾಗಿ ಬೆಂಬಲ ನೀಡುತ್ತಿದ್ದಾರೆ ಎಂದರು.

ಪಕ್ಷದ ಮುಖಂಡ ವೈಜು ಮಾತನಾಡಿ, ಸಮೀಪದ ನೆಲ್ಯಹುದಿಕೇರಿ ಗ್ರಾ.ಪಂ. ಸೋಂಕನ್ನು ತಡೆಗಟ್ಟುವಲ್ಲಿ ಯಶಸ್ವಿಯಾಗಿದ್ದು, ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಆದರೆ ಸಿದ್ದಾಪುರ ಗ್ರಾ.ಪಂ ಯಾವುದೇ ಮುಂಜಾಗೃತಾ ಕ್ರಮ ಕೈಗೊಳ್ಳದೆ, ನಿರ್ಲಕ್ಷö್ಯ ವಹಿಸಿದೆ. ಗ್ರಾ.ಪಂ ದುರಾಡಳಿತ ಹಾಗೂ ನಿರ್ಲಕ್ಷö್ಯ ಖಂಡಿಸಿ ಪಕ್ಷದ ವತಿಯಿಂದ ಪ್ರತಿಭಟನೆ ನಡೆಸಲಾಗುವುದು ಎಂದರು.

ಹೆಚ್.ಬಿ. ರಮೇಶ್ ಮಾತನಾಡಿ, ಸಿದ್ದಾಪುರ ವ್ಯಾಪ್ತಿಯಲ್ಲಿ ಕೋವಿಡ್ ನಿಯಂತ್ರಣಕ್ಕೆ ಸಂಬAಧಿಸಿದAತೆ ಟಾಸ್ಕ್ ಫೋರ್ಸ್ ಸಮಿತಿ ರಚಿಸುವ ಸಂದರ್ಭ ಸ್ಥಳೀಯ ಸಂಘಟನೆಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ, ಅರಿವಿಲ್ಲದವರನ್ನು ಸಮಿತಿಗೆ ಆಯ್ಕೆ ಮಾಡಲಾಗಿದೆ ಎಂದು ಆರೋಪಿಸಿದರು.

ಗೋಷ್ಠಿಯಲ್ಲಿ ಪಕ್ಷದ ಪ್ರಮುಖರಾದ ಸಿ.ಎ ಮುಸ್ತಫ, ಸಾಲಿ ಪೌಲೋಸ್ ಇದ್ದರು.