ಗ್ರಾ.ಪಂ. ಸದಸ್ಯೆ ಅಸಮಾಧಾನ
ಸಿದ್ದಾಪುರ ಜು.೧ : ವಾಟ್ಸಪ್ನಲ್ಲಿ ನಿಂದಿಸಿದ ಪ್ರಕರಣಕ್ಕೆ ಸಂಬAಧಿಸಿದAತೆ ಮಡಿಕೇರಿ ಸೈಬರ್ ಠಾಣೆಯಲ್ಲಿ ದೂರು ನೀಡಲಾಗಿದ್ದು, ಬಿ.ಜೆ.ಪಿ ಶಕ್ತಿ ಕೇಂದ್ರದ ಪ್ರಮುಖ್ ಪ್ರವೀಣ್ ನೀಡಿರುವ ಹೇಳಿಕೆ ಸತ್ಯಕ್ಕೆ ದೂರವಾಗಿದೆ ಎಂದು ಸಿದ್ದಾಪುರ ಗ್ರಾ.ಪಂ ಸದಸ್ಯೆ ಅಭಿತಾ ಗಿರೀಶ್ ತಿಳಿಸಿದ್ದಾರೆ.
ಇತ್ತೀಚೆಗೆ ಬಿ.ಜೆ.ಪಿ ಶಕ್ತಿ ಕೆಂದ್ರದ ಅಧ್ಯಕ್ಷ ಪ್ರವೀಣ್ ಹೇಳಿಕೆ ನೀಡಿ, ಪಕ್ಷದ ಕಾರ್ಯಕರ್ತರ ಪೋಸ್ಟ್ ಬಗ್ಗೆ ಯಾವ ಮುಖಂಡರಿಗೂ ಮಾಹಿತಿ ನೀಡದೆ ತಾನು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದೆÉ ಎಂದು ತಿಳಿಸಿದ್ದರು. ಆದರೇ ತಾನು ಮಹಾಶಕ್ತಿ ಕೇಂದ್ರದ ಪ್ರಮುಖ್, ತಾಲೂಕು ಅಧ್ಯಕ್ಷರಿಗೆ ಮಾಹಿತಿ ನೀಡಿದ್ದೆನು; ಕಳೆದ ಹಲವು ದಿನಗಳಿಂದ ತನ್ನ ವಿರುದ್ಧ ಇಲ್ಲಸಲ್ಲದ ಆರೋಪವನ್ನು ಮಾಡಿ, ಆಗಿಂದಾಗ್ಗೆ ಪಕ್ಷದ ವಾಟ್ಸಪ್ ಗ್ರೂಪ್ನಲ್ಲಿ ಸುಳ್ಳು ಹಾಗೂ ನಿಂದನೆಯ ಪೋಸ್ಟರ್ ಹಾಕಿದ್ದು, ಈ ಬಗ್ಗೆ ಸೈಬರ್ ಠಾಣೆಯಲ್ಲಿ ದೂರು ನೀಡಿದ್ದೇನೆ ಎಂದು ಅಭಿತಾ ತಿಳಿಸಿದ್ದಾರೆ. ಆದರೆ ಪ್ರವೀಣ್ ನೀಡಿರುವ ಹೇಳಿಕೆಯಲ್ಲಿ ಪ್ರಕರಣವನ್ನು ಇತ್ಯರ್ಥಪಡಿಸಿರುವುದಾಗಿ ಹೇಳಿದ್ದು, ಇನ್ನೂ ಕೂಡ ಯಾವುದೇ ಸಂಧಾನ ಆಗಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.