ಕೋವಿಡ್ ಪಾಸಿಟಿವಿಟಿ ಪ್ರಮಾಣ ಹೆಚ್ಚಿರುವ ಜಿಲ್ಲೆಗಳಲ್ಲಿ ಕಟ್ಟುನಿಟ್ಟಿನ ಕ್ರಮ
ನವದೆಹಲಿ, ಜೂ. ೩೦: ರಾಜಸ್ಥಾನ, ತ್ರಿಪುರ, ಅಸ್ಸಾಂ, ಪಶ್ಚಿಮ ಬಂಗಾಳ ಮತ್ತು ಕೇರಳ ಸೇರಿದಂತೆ ೧೪ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರವು ಪತ್ರ ಬರೆದಿದ್ದು, ಜೂನ್ ೨೧-೨೭ರ ನಡುವೆ ಕೊರೊನಾ ಸಾಂಕ್ರಾಮಿಕ ಪಾಸಿಟಿವಿಟಿ ದರ ಶೇ. ೧೦ ಕ್ಕಿಂತ ಹೆಚ್ಚಿರುವ ಜಿಲ್ಲೆಗಳಲ್ಲಿ ಕಂಟೆನ್ಮೆAಟ್ ಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ನೋಡಿಕೊಳ್ಳಲು ಹೇಳಿದೆ. ದೇಶಾದ್ಯಂತ ಇತ್ತೀಚಿನ ದಿನದಲ್ಲಿ ಕೊರೊನಾ ಪ್ರಕರಣಗಳು ನಿರಂತರವಾಗಿ ಕುಸಿಯುತ್ತಿರುವ ಪ್ರವೃತ್ತಿಯೊಂದಿಗೆ, ಕೇಂದ್ರೀಕೃತ ಜಿಲ್ಲಾ ಮಟ್ಟ ಮತ್ತು ಉಪ-ಜಿಲ್ಲಾ ಮಟ್ಟದಲ್ಲಿ ಪರಿಸ್ಥಿತಿಯ ಬಗ್ಗೆ ಕಟ್ಟುನಿಟ್ಟಿನ ಕಣ್ಗಾವಲು ಕಡ್ಡಾಯವಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಪತ್ರದಲ್ಲಿ ತಿಳಿಸಿದೆ. ರಾಜ್ಯದಾದ್ಯಂತ ಅನುಮತಿಸುವ ಚಟುವಟಿಕೆಗಳನ್ನು ಮಾಪನಾಂಕ ನಿರ್ಣಯ ಮತ್ತು ಎಚ್ಚರಿಕೆಯಿಂದ ಮಾಡಬೇಕು ಎಂದು ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಜೂನ್ ೨೯ ರಂದು ಬರೆದ ಪತ್ರದಲ್ಲಿ ತಿಳಿಸಿದ್ದಾರೆ. ರಾಜಸ್ಥಾನ, ಮಣಿಪುರ, ಸಿಕ್ಕಿಂ, ತ್ರಿಪುರ, ಪಶ್ಚಿಮ ಬಂಗಾಳ, ಪುದುಚೇರಿ, ಒಡಿಶಾ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, ಕೇರಳ, ಅರುಣಾಚಲ ಪ್ರದೇಶ, ಹಿಮಾಚಲ ಪ್ರದೇಶ ಮತ್ತು ಅಸ್ಸಾಂಗಳಿಗೆ ಈ ಬಗೆಯಲ್ಲಿ ಪತ್ರ ಬರೆಯಲಾಗಿದೆ. ವಸ್ತುನಿಷ್ಠ, ಪಾರದರ್ಶಕ ಮತ್ತು ಸಾಂಕ್ರಾಮಿಕ ರೋಗಶಾಸ್ತಿçÃಯವಾಗಿ ನಿರ್ಧಾರ ತೆಗೆದುಕೊಳ್ಳಲು ಅನುಕೂಲವಾಗುವಂತೆ, ೨೦೨೧ ರ ಏಪ್ರಿಲ್ ೨೫ ರಂದು ಆರೋಗ್ಯ ಸಚಿವಾಲಯದ ಪತ್ರದ ಪ್ರಕಾರ ರಾಜ್ಯಗಳಿಗೆ ಪರೀಕ್ಷಾ ಒಆಸಿಟಿವಿಟಿ ದರ ಮತ್ತು ಬೆಡ್ಗಳ ಸಂಖ್ಯೆಯನ್ನು ಆಧರಿಸಿದ ವಿಶಾಲ ಮಾನದಂಡ ಒದಗಿಸಲಾಗಿದೆ ಎಂದು ಭೂಷಣ್ ಹೇಳಿದರು. ಎಲ್ಲಾ ರಾಜ್ಯಗಳ ಜಾರಿಗಾಗಿ ಏಪ್ರಿಲ್ ೨೯ ರ ಗೃಹ ಸಚಿವಾಲಯದ (ಎಂಹೆಚ್ಎ) ಆದೇಶಕ್ಕೆ ಒತ್ತು ನೀಡಲಾಗಿದೆ. ಆರೋಗ್ಯ ಸಚಿವಾಲಯವು ಜೂನ್ ೨೮ ರಂದು ತನ್ನ ಪತ್ರದ ಮೂಲಕ ಶ್ರೇಣೀಕೃತ ನಿರ್ಬಂಧ / ವಿಶ್ರಾಂತಿ ಕ್ರಮಗಳ ಅನುಷ್ಠಾನಕ್ಕೆ ಒತ್ತಿಹೇಳಿದೆ ಮತ್ತು ಟೆಸ್ಟ್, ಟ್ರಾö್ಯಕ್, ಟ್ರೀಟ್, ಕೋವಿಡ್ ಸೂಕ್ತ ವರ್ತನೆ ಮತ್ತು ಲಸಿಕಾಕರಣ ಐದು ಪಟ್ಟು ಕಾರ್ಯತಂತ್ರದ ಬಗ್ಗೆ ಗಮನ ಹರಿಸಿದೆ. "ಆದ್ದರಿಂದ, ಈ ಜಿಲ್ಲೆಗಳಲ್ಲಿ ಪ್ರಸರಣವನ್ನು ನಿಯಂತ್ರಿಸಲು ಮತ್ತು ಪಾಸಿಟಿವಿಟಿ ದರ ತಗ್ಗಿಸಲು ಮೇಲಿನ ಕ್ರಮಗಳ ಕಟ್ಟುನಿಟ್ಟಿನ ಜಾರಿಗೊಳಿಸುವಿಕೆಯನ್ನು ಖಚಿತಪಡಿಸಿಕೊಳ್ಳಲು ನಿಮ್ಮನ್ನು ಕೋರಲಾಗಿದೆ. ಜಿಲ್ಲಾ ಕ್ರಿಯಾ ಯೋಜನೆಯ ಅಂಶಗಳು, ಪ್ರಕರಣಗಳ ಮ್ಯಾಪಿಂಗ್, ವಾರ್ಡ್ ಮತ್ತು ಬ್ಲಾಕ್- ಸೂಚಕಗಳನ್ನು ಪರಿಶೀಲಿಸುವುದು, ಗಮನಹರಿಸುವುದು ಪರಿಣಾಮಕಾರಿ ಕಣ್ಗಾವಲು ಮತ್ತು ತ್ವರಿತ ಆಸ್ಪತ್ರೆ ದಾಖಲೀಕರಣ ಪ್ರಕ್ರಿಯೆ ಸಕಾರಾತ್ಮಕ ಪ್ರಕರಣಗಳ ಪ್ರತ್ಯೇಕತೆ, ದಿನದ ಎಲ್ಲಾ ಸಮಯದಲ್ಲಿ ತುರ್ತು ಕಾರ್ಯಾಚರಣೆ ಕೇಂದ್ರ ಮತ್ತುನಿಯಂತ್ರಣ ವಲಯದ ಕಾರ್ಯತಂತ್ರದಲ್ಲಿ ಎಸ್ಒಪಿಗಳ ಕಟ್ಟುನಿಟ್ಟಿನ ಅನುಸರಣೆ ಸಹ ಸಮಗ್ರವಾಗಿ ಮತ್ತು ಕಟ್ಟುನಿಟ್ಟಾಗಿ ಕಾರ್ಯಗತಗೊಳಿಸಬೇಕು ಎಂದು ಭೂಷಣ್ ಪತ್ರದಲ್ಲಿ ತಿಳಿಸಿದ್ದಾರೆ.
ಡ್ರೋನ್ ದಾಳಿ ಎದುರಿಸಲು ಇಸ್ರೇಲ್ ಮಾದರಿಯ ‘ಐರನ್ ಡೋಮ್' ನಿರ್ಮಿಸಬೇಕು
ನವದೆಹಲಿ, ಜೂ. ೩೦: ಭವಿಷ್ಯದಲ್ಲಿ ಎದುರಾಗಬಹುದಾದ ಡ್ರೋನ್ ದಾಳಿಗಳನ್ನು ಎದುರಿಸಲು ಭಾರತ ಕೂಡ ಇಸ್ರೇಲ್ನಂತೆ ಗಡಿಗಳಲ್ಲಿ ಐರನ್ ಡೋಮ್ ನಿರ್ಮಿಸಬೇಕು ಎಂದು ಉದ್ಯಮಿ ಹಾಗೂ ಮಹೀಂದ್ರಾ ಗುಂಪಿನ ಅಧ್ಯಕ್ಷ ಆನಂದ್ ಮಹೀಂದ್ರಾ ಹೇಳಿದ್ದಾರೆ. ಈ ಕುರಿತಂತೆ ಟ್ವೀಟ್ ಮಾಡಿರುವ ಅವರು, ಭವಿಷ್ಯದಲ್ಲಿ ಎದುರಾಗಬಹುದಾದ ಡ್ರೋನ್ ದಾಳಿಗಳನ್ನು ವಿಶೇಷ ಡ್ರೋನ್ಗಳನ್ನು ಖರೀದಿಸಲು ಭಾರತ ಸರ್ಕಾರ ರಕ್ಷಣಾ ಬಜೆಟ್ನಲ್ಲಿ ಹಂಚಿಕೆಯನ್ನು ಹೆಚ್ಚಿಸಬೇಕು ಎಂದು ಆನಂದ್ ಮಹೀಂದ್ರಾ ಟ್ವೀಟ್ ಮಾಡಿದ್ದಾರೆ. ಬದಲಾಗುತ್ತಿರುವ ಕಾಲಕ್ಕೆ ತಕ್ಕಂತೆ ನಮ್ಮ ಯುದ್ಧ ಸಾಮರ್ಥ್ಯಗಳನ್ನು ಹೆಚ್ಚಿಸಿಕೊಳ್ಳುವ ಅಗತ್ಯವನ್ನು ಉಲ್ಲೇಖಿಸಿರುವ ಅವರು ವಿಶೇಷ ಡ್ರೋನ್ಗಳ ಖರೀದಿಗೆ ರಕ್ಷಣಾ ಬಜೆಟ್ನಲ್ಲಿ ಹಂಚಿಕೆಗಳನ್ನು ಗಮನಾರ್ಹವಾಗಿ ಹೆಚ್ಚಿಸಬೇಕಾಗಿದೆ ಎಂದು ಅವರು ಹೇಳಿದ್ದಾರೆ. ಡ್ರೋನ್ ದಾಳಿಯಿಂದ ನಮ್ಮನ್ನು ರಕ್ಷಿಸಿಕೊಳ್ಳಲು ಇಸ್ರೇಲ್ ಮಾದರಿಯಲ್ಲಿ ‘ಐರನ್ ಡೋಮ್' ನಂತಹ ತಂತ್ರಜ್ಞಾನದ ಬಗ್ಗೆ ನಾವು ಕೆಲಸ ಮಾಡಬೇಕಾಗಿದೆ ಎಂದು ಆನಂದ್ ಮಹೀಂದ್ರಾ ಟ್ವಿಟ್ಟರ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಜೂನ್ ೨೭ ರ ನಸುಕಿನಲ್ಲಿ ಜಮ್ಮುವಿನಲ್ಲಿರುವ ಭಾರತೀಯ ವಾಯುಪಡೆ (ಐಎಎಫ್) ಪ್ರಮುಖ ವಾಯು ನೆಲೆಗಳಲ್ಲಿ ಡ್ರೋನ್ಗಳಿಂದ ಎರಡು ಸ್ಫೋಟಗಳು ಸಂಭವಿಸಿವೆ. ಜಮ್ಮು ವಿಮಾನ ನಿಲ್ದಾಣದ ಐಎಎಫ್ ನಿಲ್ದಾಣದಲ್ಲಿ ಶನಿವಾರ ಮಧ್ಯರಾತ್ರಿಯ ನಂತರ ಭಯೋತ್ಪಾದಕರು ಡ್ರೋನ್ಗಳ ಸಹಾಯದಿಂದ ಎರಡು ಬಾಂಬ್ಗಳನ್ನು ಬೀಳಿಸಿದ್ದಾರೆ. ಬಾಂಬ್ ಸ್ಫೋಟದಲ್ಲಿ ಇಬ್ಬರು ವಾಯುಪಡೆ ಸಿಬ್ಬಂದಿ ಗಾಯಗೊಂಡಿದ್ದಾರೆ. ಮಧ್ಯರಾತ್ರಿ ೧.೪೦ ಗಂಟೆ ಸಮಯದಲ್ಲಿ ಕೇವಲ ಆರು ನಿಮಿಷಗಳ ಅವಧಿಯಲ್ಲಿ ಎರಡು ಬಾಂಬ್ಗಳನ್ನು ಡ್ರೋನ್ನಿಂದ ಬೀಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಸ್ಫೋಟಗಳಲ್ಲಿ ವಿಮಾನ ನಿಲ್ದಾಣದ ತಾಂತ್ರಿಕ ಪ್ರದೇಶದ ಕಟ್ಟಡದ ಮೇಲ್ಛಾವಣಿಗೆ ಹಾನಿಯಾಗಿದೆ ಮತ್ತೊಂದು ಬಾಂಬ್ ತೆರೆದ ಪ್ರದೇಶದಲ್ಲಿ ಸ್ಫೋಟಗೊಂಡಿದೆ ಎಂದು ಭಾರತೀಯ ವಾಯುಪಡೆ (ಐಎಎಫ್) ತಿಳಿಸಿದೆ. ಸ್ಫೋಟಗಳಿಂದ ವಿಮಾನ ನಿಲ್ದಾಣದ ಯಾವುದೇ ಸಲಕರಣೆಗಳಿಗೆ ಹಾನಿ ಸಂಭವಿಸಿಲ್ಲ ಎಂದು ಸ್ಪಷ್ಟಪಡಿಸಿದೆ.
‘ಸುಧರ್ಮ' ಸಂಸ್ಕೃತ ಪತ್ರಿಕೆಯ ಸಂಪಾದಕ ವಿಧಿವಶ
ಮೈಸೂರು, ಜೂ. ೩೦: ವಿಶ್ವದ ಏಕೈಕ ಸಂಸ್ಕೃತ ಪತ್ರಿಕೆ ಎನಿಸಿದ್ದ "ಸುಧರ್ಮ" ಸಂಸ್ಕೃತ ಪತ್ರಿಕೆಯ ಸಂಪಾದಕ ಕೆ.ವಿ. ಸಂಪತ್ಕುಮಾರ್ (೬೪) ಹೃದಯಾಘಾತದಿಂದ ನಿಧನರಾದರು. ದೇಶ ಮತ್ತು ವಿದೇಶದಲ್ಲಿ ಸಂಸ್ಕೃತ ಜನಪ್ರಿಯಗೊಳಿಸುವಲ್ಲಿ, ಜನರ ಹೃದಯಕ್ಕೆ ಹತ್ತಿರವಾಗಿಸುವಲ್ಲಿ ಕಳೆದ ೫ ದಶಕಗಳಿಂದ ನಿರಂತರವಾಗಿ ಶ್ರಮಿಸುತ್ತಿದ್ದ ಸುಧರ್ಮ ಸಂಸ್ಕೃತ ಪತ್ರಿಕೆಯ ಸಂಪಾದಕ ಕೆ.ವಿ. ಸಂಪತ್ ಕುಮಾರ್ ಮೈಸೂರಿನಲ್ಲಿಂದು ನಿಧನ ಹೊಂದಿದರು. ಸುದ್ದಿ ಬರೆಯುತ್ತಲೇ ಸಂಪತ್ ಕುಮಾರ್ ಮಧ್ಯಾಹ್ನ ಹೃದಯಾಘಾತದಿಂದ ನಿಧನರಾಗಿದ್ದಾರೆ. ಸಂಪತ್ ಕುಮಾರ್ ಹುಟ್ಟೂರು ಮೈಸೂರು-ನಂಜನಗೂಡು ತಾಲೂಕು ಕಳಲೆ ಗ್ರಾಮ. ತಂದೆ ನಾಡದೂರ್ ವರದರಾಜ್ ಅಯ್ಯಂಗಾರ್, ತಾಯಿ ಸೀತಾಲಕ್ಷಿö್ಮÃ. ಪಂಡಿತ್ ವರದರಾಜ ಅಯ್ಯಂಗಾರ್ ಈ ಪತ್ರಿಕೆಯನ್ನು ಪ್ರಾರಂಭಿಸಿದ್ದರು. ಸಂಸ್ಕೃತ ವಿದ್ವಾಂಸರೂ ಆಗಿರುವ ಇವರು ೧೯೪೫ರಲ್ಲಿ ಈ ಮುದ್ರಣಾಲಯ ಪ್ರಾರಂಭಿಸಿದ್ದು ಇಲ್ಲಿ ಪುಸ್ತಕಗಳು, ಸರ್ಕಾರಿ ಗೆಜೆಟ್ಗಳು, ಸಂಸ್ಕೃತ ಮತ್ತು ಕನ್ನಡದಲ್ಲಿ ಪ್ರಶ್ನೆ ಪತ್ರಿಕೆಗಳು ಸಹ ಮುದ್ರಿತವಾಗಿದ್ದವು. ೧೯೬೩ ರಲ್ಲಿ ಅವರು ಬಾಲಕಿಯರ ಶಾಲೆ ಪ್ರಾರಂಭಿಸಿ ಮಹಿಳಾ ಶಿಕ್ಷಣಕ್ಕೆ ಒತ್ತು ನೀಡಿದ್ದರು. ಸಂಸ್ಕೃತ ಅನೇಕ ಕಾರ್ಯಾಗಾರಗಳನ್ನು ಆಯೋಜಿಸಿದ್ದರು. ೧೯೭೦ ರಲ್ಲಿ, ಸಂಸ್ಕೃತ ಭಾಷೆಯನ್ನು ಜನಪ್ರಿಯಗೊಳಿಸುವುದಕ್ಕಾಗಿ ಪ್ರತಿನಿತ್ಯ ಸಂಸ್ಕೃತ ಜನರಿಗೆ ತಲುಪುವಂತೆ ಮಾಡುವುದಕ್ಕಾಗಿ “ಸುಧರ್ಮ” ಪತ್ರಿಕೆ ಪ್ರಾರಂಭಿಸಿದರು. ಆಕಾಶವಾಣಿಯಲ್ಲಿ ಸಂಸ್ಕೃತದಲ್ಲಿ ವಾರ್ತೆಯನ್ನ ವರದರಾಜ ಅಯ್ಯಂಗಾರ್ ಓದುತ್ತಿದ್ದರು. ಸಂಪಾದಕ ಕೆ.ವಿ. ಸಂಪತ್ ಕುಮಾರ್ ಹಾಗೂ ಅವರ ಪತ್ನಿ ಜಯಲಕ್ಷ್ಮಿ ಅವರು ಬಹಳ ಅಚ್ಚುಕಟ್ಟಾಗಿ ನಡೆಸಿಕೊಂಡು ಹೋಗುತ್ತಿದ್ದು ಪತ್ರಿಕೆಗೆ ಇಂದಿನ ಆಧುನಿಕ, ಡಿಜಿಟಲ್ ಯುಗದ ಆಧುನಿಕ ತಾಂತ್ರಿಕ ಸ್ಪರ್ಶ ನೀಡಿ ಮತ್ತಷ್ಟು ಜನಪ್ರಿಯಗೊಳಿಸಿದ್ದರು. ಜೊತೆಗೆ ಪತ್ರಿಕೆಯ ಆನ್ಲೈನ್ ಆವೃತ್ತಿ ಸಹ ತಂದಿದ್ದರು ಸಂಪತ್ ಕುಮಾರ್ ಅವರು ಸಹ ತಮ್ಮ ತಂದೆಯ ಇಚ್ಚೆಯಂತೆ ಸಂಸ್ಕೃತ ಪಸರಿಸುವ ಕೆಲಸಕ್ಕೆ ಟೊಂಕಕಟ್ಟಿ ನಿಂತಿದ್ದರು. ಪತ್ರಿಕೆ ಅಲ್ಲದೇ ಹಲವು ಸಂಸ್ಕೃತದ ಮೊಟ್ಟ ಮೊದಲುಗಳನ್ನು ನಿರ್ಮಿಸಿದ್ದಾರೆ. ಮೊದಲ ಸಂಸ್ಕೃತ ದಿನದರ್ಶಿಯನ್ನು ತಂದಿದ್ದಾರೆ. “ಸುಧರ್ಮ” ಎ೩ ಗಾತ್ರದ ಎರಡು-ಪುಟ, ಐದು-ಕಾಲಮ್ ಪತ್ರಿಕೆಯಾಗಿದೆ.೨೦೦೯ ರಲ್ಲಿ, “ಸುಧರ್ಮ” ಇ-ಪೇಪರ್ ಆವೃತ್ತಿ ಪ್ರಾರಂಭವಾಗಿದ್ದು ಜಗತ್ತಿನಾದ್ಯಂತ ಹಲವಾರು ಜನರು ಇದನ್ನು ಓದುತ್ತಿದ್ದಾರೆ. ಅಯ್ಯಂಗಾರ್ ಅವರ ಪುತ್ರ ಕೆ.ವಿ. ಸಂಪತ್ ಕುಮಾರ್ ಪ್ರಸ್ತುತ ಈ ಪತ್ರಿಕೆಯ ಸಂಪಾದಕರಾಗಿದ್ದಾರೆ. ಅವರ ತಂದೆ ಸಂಸ್ಕೃತ ಭಾಷೆಯನ್ನು ಜನಪ್ರಿಯಗೊಳಿಸುವ ಏಕೈಕ ಉದ್ದೇಶದಿಂದ ಈ ದಿನಪತ್ರಿಕೆ ಪ್ರಾರಂಭಿಸಿದರು. ಲಾಕ್ಡೌನ್ ಸಂದರ್ಭದಲ್ಲಿ ಸಂಪತ್ ಕುಮಾರ್ ದಂಪತಿಗಳು ಪತ್ರಕರ್ತರಿಗೆ ಕೆಲ ದಿನ ಮಧ್ಯಾಹ್ನದ ಊಟ ವ್ಯವಸ್ಥೆ ಮಾಡಿ ಮಾದರಿಯಾಗಿದ್ದರು. ಸಂಸ್ಕೃತ ಭಾಷೆಯಲ್ಲಿ ೫೦ ವರ್ಷಗಳಿಂದ ಮೈಸೂರಿನಿಂದ ಪ್ರಕಟವಾಗುತ್ತಿರುವ ‘ಸುಧರ್ಮ’ ದಿನಪತ್ರಿಕೆಯ ಸಂಪಾದಕರಾದ ಕೆ.ವಿ. ಸಂಪತ್ ಕುಮಾರ್ ಹಾಗೂ ಎಸ್. ಜಯಲಕ್ಷ್ಮಿ ಅವರಿಗೆ ೨ ವರ್ಷದ ಹಿಂದೆ ಪದ್ಮಶ್ರೀ ಪ್ರಶಸ್ತಿ ಕೂಡ ಲಭಿಸಿತ್ತು. ಆದರೇ ಪ್ರಶಸ್ತಿ ಸ್ವೀಕರಿಸುವ ಮುನ್ನವೇ ಸಂಪತ್ ಕುಮಾರ್ ವಿಧಿವಶರಾಗಿದ್ದಾರೆ.