ಮಡಿಕೇರಿ,ಜೂ.೩೦; ಮಡಿಕೇರಿ ನಗರದ ಕಸವಿಲೇವಾರಿ ಸಮಸ್ಯೆಗೆ ಸಂಬAಧಿಸಿದAತೆ ರಾಜ್ಯ ಉಚ್ಚ ನ್ಯಾಯಾಲಯದಲ್ಲಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಕುರಿತಾದ ವಿಚಾರಣೆಯನ್ನು ನ್ಯಾಯಾಲಯವು ತಾ.೯ಕ್ಕೆ ಮುಂದೂಡಿದೆ.

ಮಡಿಕೇರಿ ನಗರ ಹಾಗೂ ಸುತ್ತಮುತ್ತಲಿನ ಕಸ ತ್ಯಾಜ್ಯಗಳನ್ನು ಅವೈಜ್ಞಾನಿಕವಾಗಿ ಸ್ಟೋನ್ ಹಿಲ್ ಬಳಿ ಸುರಿಯಲಾಗಿದ್ದು, ಇದರಿಂದ ಸಾರ್ವಜನಿಕರಿಗೆ ತೊಂದರೆ ಯಾಗುತ್ತಿರುವ ಬಗ್ಗೆ ನಗರದ ಎಸ್‌ಆರ್‌ವಿಕೆ ಸಂಘದ ವತಿಯಿಂದ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದ್ದು, ಪ್ರಕರಣಕ್ಕೆ ಸಂಬAಧಿಸಿದAತೆ ನ್ಯಾಯಾಲಯವು ಸಮಗ್ರವಾಗಿರುವ ಕಸ ತ್ಯಾಜ್ಯದ ವಿಲೇವಾರಿಗೆ ಕೈಗೊಂಡಿರುವ ಹಾಗೂ ಜಾಗದ ರಕ್ಷಣೆಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ಸಹಿತ ಅಫಿಡಾವಿಟ್ ಸಲ್ಲಿಸುವಂತೆ ನಗರಸಭೆಗೆ ಸೂಚನೆ ನೀಡಿತ್ತು. ಆದರೆ ನಗರ ಸಭೆಯಿಂದ ಸಲ್ಲಿಸಲಾಗಿರುವ ವರದಿಯಲ್ಲಿ ಸುಳ್ಳು ಅಂಶಗಳು ಸೇರಿವೆ ಎಂದು ಅರ್ಜಿದಾರರ ಪರ ವಕೀಲರು ಪ್ರತಿಪಾದಿಸಿದ ಹಿನ್ನೆಲೆಯಲ್ಲಿ ಹಿರಿಯ ನ್ಯಾಯಾಧೀಶರಾದ ಅಭಯ್ ಶ್ರೀನಿವಾಸ್ ಓಕ ಅವರು ಈ ಸಂಬAಧ ಸರಕಾರದ ಹಿರಿಯ ಅಧಿಕಾರಿಗಳು ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಜಂಟಿ ಪರಿಶೀಲನೆ ನಡೆಸಿ ವರದಿ ಸಲ್ಲಿಸುವಂತೆ ಸೂಚಿಸಿದ್ದರು. ಈ ಸಂಬAಧದ ವಿಚಾರಣೆಯನ್ನು ಇಂದಿಗೆ ಕಾಯ್ದಿರಿಸಿದ್ದರು.

ನ್ಯಾಯಾಲಯದ ಸೂಚನೆ ಯಂತೆ ತಾ.೨೩ರಂದು ರಾಜ್ಯ ಪೌರಾಡಳಿತ

(ಮೊದಲ ಪುಟದಿಂದ) ನಿರ್ದೇಶನಾಲಯದ ಘನ ತ್ಯಾಜ್ಯ ನಿರ್ವಹಣಾ ವಿಭಾಗದ ಕಾರ್ಯ ಪಾಲಕ ಅಭಿಯಂತರರಾದ ಸ್ನೇಹಲತಾ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿ ಗಳು, ನಗರಸಭಾ ಅಧಿಕಾರಿ ಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ನ್ಯಾಯಾಲಯ ಇಂದು ವಿಚಾರಣೆಯನ್ನು ಕೈಗೆತ್ತಿಕೊಂಡಿತ್ತು. ಈ ಸಂದರ್ಭ ನಗರ ಸಭೆ ಪರ ವಕೀಲರು, ಅಧಿಕಾರಿಗಳ ಪರಿಶೀಲನಾ ವರದಿ ಇನ್ನೂ ಕೂಡ ತಮ್ಮ ಕೈ ಸೇರಿಲ್ಲ, ತಮಗೆ ಮಾಹಿತಿ ಇಲ್ಲ, ಹಾಗಾಗಿ ಕಾಲಾವಕಾಶ ನೀಡುವಂತೆ ಕೋರಿದ ಹಿನ್ನೆಲೆಯಲ್ಲಿ ನ್ಯಾಯಾಧೀಶರು ಮುಂದಿನ ವಿಚಾರಣೆಯನ್ನು ತಾ.೯ಕ್ಕೆ ಕಾಯ್ದಿರಿಸಿದ್ದಾರೆ. -ಸಂತೋಷ್