ನಾಪೋಕ್ಲು, ಜೂ. ೩೦: ಸಮೀಪದ ಕುಯ್ಯಂಗೇರಿ ಗ್ರಾಮದಲ್ಲಿ ಭತ್ತದ ನಾಟಿ ಕಾರ್ಯವನ್ನು ಕೈಗೊಳ್ಳಲಾಯಿತು. ರೈತರು ಉತ್ಸಾಹದಿಂದ ನಾಟಿ ಕಾರ್ಯದಲ್ಲಿ ತೊಡಗಿಸಿಕೊಂಡರು. ಕುಯ್ಯಂಗೇರಿ ಗ್ರ‍್ರಾಮ ವ್ಯಾಪ್ತಿಯಲ್ಲಿ ಆರಂಭದಲ್ಲಿಯೇ ಬಿತ್ತನೆ ಮಾಡಿರುವ ರೈತರು ಇದೀಗ ಕೂಡು ನಾಟಿ ಪದ್ದತಿಯಲ್ಲಿ ನಾಟಿ ಕಾರ್ಯ ಮಾಡುತ್ತಿದ್ದಾರೆ.
ಕುಯ್ಯಂಗೇರಿ ಗ್ರಾಮದ ರೈತ ಚಿಲ್ಲನ ಕುಮಾರಪ್ಪ ಮಾತನಾಡಿ ಭತ್ತದ ಕೃಷಿಗಾಗಿ ಯಾವುದೇ ಯಂತ್ರೋಪಕರಣ ಬಳಸುತ್ತಿಲ್ಲ. ಸಾವಯವ ಗೊಬ್ಬರವನ್ನು ಬಳಸುತ್ತಿದ್ದೇವೆ. ಇತ್ತೀಚೆಗೆ ಭತ್ತದ ಕೃಷಿ ಸುಲಭವಾಗಿ ಸಾಗುತ್ತಿಲ್ಲ. ಕೂಲಿ ಕಾರ್ಮಿಕರ ಅಭಾವದಿಂದ ಬೇಸಾಯಕ್ಕೆ ಅಧಿಕ ಖರ್ಚು ತಗಲುತ್ತಿದೆ. ಹಲವು ವರ್ಷಗಳಿಂದ ಭತ್ತದ ಬೇಸಾಯ ನಡೆಸುತ್ತಿದ್ದು ಜೂನ್ ಮೊದಲ ವಾರದಲ್ಲಿ ಬಿತ್ತನೆ ಕೈಗೊಂಡು ೨೩ ದಿನಗಳ ಬಳಿಕ ಸಸಿಮಡಿಗಳಿಂದ ಪೈರನ್ನು ತೆಗೆದು ನಾಟಿ ಮಾಡಲಾಗುತ್ತಿದೆ ಎಂದರು.