ಮಡಿಕೇರಿ, ಜೂ. ೩೦: ಕೊಡಗಿಗೆ ಕ್ರೀಡಾ ಜಿಲ್ಲೆ ಎಂಬ ಹೆಗ್ಗಳಿಕೆ. ಈ ಪುಟ್ಟ ಜಿಲ್ಲೆಯಿಂದ ಸಾಕಷ್ಟು ಮಂದಿ ಭಾರತವನ್ನು ಅಂತರರಾಷ್ಟಿçÃಯ ಮಟ್ಟದಲ್ಲಿ ಪ್ರತಿನಿಧಿಸಿದ್ದಾರೆ. ಪ್ರತಿಷ್ಠಿತವಾದ ಒಲಿಂಪಿಕ್ಸ್ನಲ್ಲೂ ದೇಶಕ್ಕೆ ಕೊಡುಗೆ ನೀಡಿದ್ದಾರೆ. ಆದರೆ ಜಿಲ್ಲಾ ಕೇಂದ್ರವಾದ ಮಡಿಕೇರಿಯಲ್ಲಿ ರುವ ಜಿಲ್ಲಾ ಕ್ರೀಡಾಂಗಣವನ್ನು ಒಮ್ಮೆ ನೋಡಿ. ಈ ಕ್ರೀಡಾಂಗಣಕ್ಕೆ ಹಲವು ವರ್ಷದ ಹಿಂದೆ ಅಪ್ರತಿಮ ಸೇನಾನಿ ಪದ್ಮಭೂಷಣ ಜನರಲ್ ತಿಮ್ಮಯ್ಯ ಅವರ ಹೆಸರನ್ನೂ ಇಡಲಾಗಿದೆ.
ಇಲ್ಲಿ ಏನಿದೆ ಎಂಬದಕ್ಕಿAತ ‘‘ಏನೂ ಇಲ್ಲ’’ ಎಂಬದೇ ವಾಸ್ತವಾಗಿದೆ. ರಾಜ್ಯದ ಇತರ ಜಿಲ್ಲೆಗಳಿಗೆ ಹೋಲಿಸಿದರೆ, ಇದು ಕ್ರೀಡಾಂಗಣವೋ... ಹುಲ್ಲುಗಾವಲೋ ತಿಳಿಯದು. ಪ್ರಸ್ತುತ ಲಾಕ್ಡೌನ್ ಎಂಬ ನೆಪ ಇದ್ದರೂ ಕ್ರೀಡಾಂಗಣದ ಪರಿಸ್ಥಿತಿ ಇರುವದು ಯಾವಾಗಲೂ ಹೀಗೆಯೇ...
ಇಲ್ಲಿ ಬಹುತೇಕವಾಗಿ ಯಾವದೇ ಮೂಲಭೂತ ಸೌಲಭ್ಯಗಳಿಲ್ಲ. ಕನಿಷ್ಟ ನೀರು, ವಿದ್ಯುತ್, ಭದ್ರತೆ ಕೂಡ ಇಲ್ಲ. ಪ್ರಸ್ತುತವಂತೂ ಕ್ರೀಡಾಂಗಣದ ಆವರಣ, ಕಟ್ಟಡದ ಸುತ್ತಮುತ್ತಲ ಪ್ರದೇಶ ಕಸದ ರಾಶಿಯಿಂದ ತುಂಬಿದೆ. ಕುರುಚಲು ಕಾಡು, ಎತ್ತರಕ್ಕೆ ಬೆಳೆದಿರುವ ಹುಲ್ಲಿನಿಂದ ಆವೃತವಾಗಿದ್ದು, ಶೋಚನೀಯ ಸ್ಥಿತಿಯಲ್ಲಿದೆ. ಇಲ್ಲೊಂದು ಕ್ರೀಡಾವಸತಿ ನಿಲಯವೂ ಇದ್ದು, ಹಲವು ವಿದ್ಯಾರ್ಥಿಗಳೂ ಇರುವ ಸ್ಥಳವಾಗಿದೆ. ಮೇಲ್ಭಾಗದ ಮೈದಾನದ ಕಥೆ ಒಂದು ರೀತಿ ಯಾದರೆ, ಕೆಳಭಾಗದ ಮೈದಾನದಲ್ಲಿ ಬಾಸ್ಕೆಟ್ಬಾಲ್ ಕೋರ್ಟ್, ಬಾಕ್ಸಿಂಗ್, ಸ್ಕಾ÷್ವಷ್ ಕೋರ್ಟ್ ಒಳಾಂಗಣ ಕ್ರೀಡಾಂಗಣವಿದ್ದು, ಇವೆಲ್ಲದರ ಆವರಣ ಇನ್ನಷ್ಟು ಶೋಚನೀಯ ವಾಗಿದೆ. ಈ ಹಿಂದೆ ಜಿಲ್ಲಾ ಕ್ರೀಡಾಂಗಣ ಸಮಿತಿ ಎಂಬದೊAದು ಅಸ್ತಿತ್ವದಲ್ಲಿತ್ತು.
ಕೆಲವು ಕ್ರೀಡಾಪ್ರೇಮಿಗಳು ಈ ಸಮಿತಿಯಲ್ಲಿದ್ದರು ಪ್ರಸ್ತುತ ಈ ಸಮಿತಿಯೂ ಇಲ್ಲ. ಇದೇ ಮೈದಾನ ದಲ್ಲಿ ಆಟವಾಡಿರುವ ಕೆಲವರು ದೇಶವನ್ನೇ ಪ್ರತಿನಿಧಿಸಿರುವ ಉದಾಹರಣೆಗಳಿರುವದು ಕೊಡಗಿಗೆ ಮಾತ್ರವಲ್ಲ. ಕರ್ನಾಟಕ ರಾಜ್ಯಕ್ಕೂ ಹೆಮ್ಮೆಯಲ್ಲವೇ...? ಪ್ರಸ್ತುತ ಇಲ್ಲಿ ವಾಕಿಂಗ್, ಜಾಗಿಂಗ್ ಮಾಡಲೂ ಕೂಡ ಕಷ್ಟಕರವಾಗಿದೆ. ಇಲ್ಲೊಂದು ಸಿಂಥೆಟಿಕ್ ಟ್ರಾö್ಯಕ್ (ಅಥ್ಲೆಟಿಕ್ ಟ್ರಾö್ಯಕ್) ನಿರ್ಮಾಣದ ಬೇಡಿಕೆಯೂ ಹಲವಷ್ಟು ವರ್ಷಗಳಿಂದ ಪ್ರಸ್ತಾವನೆಯಲ್ಲಿಯೇ ಉಳಿದಿದೆ. ರಾಜ್ಯದ ಕ್ರೀಡಾ ಸಚಿವರಾದ ಡಾ|| ನಾರಾಯಣಗೌಡ ಅವರು ಜು. ೧ರಂದು (ಇಂದು) ಜಿಲ್ಲೆಗೆ ಭೇಟಿ ನೀಡಲಿದ್ದು, ಈ ಮೈದಾನಕ್ಕೂ ಭೇಟಿ ನೀಡಲಿದ್ದಾರೆ. ವಿಶೇಷವೆಂದರೆ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಕೊಡಗಿನಲ್ಲಿ ಶಾಶ್ವತವಾದ ಅಧಿಕಾರಿ ಕೂಡ ಇಲ್ಲ. ಇಂದು ಜಿಲ್ಲಾ ಕ್ರೀಡಾಂಗಣ ಸಮಿತಿಯಲ್ಲಿ ಕೇವಲ ಅಧಿಕಾರಿಗಳು ಇರುವುದರಿಂದ ಅಭಿವೃದ್ಧಿ ಶೂನ್ಯ ಜಿಲ್ಲಾ ಕ್ರೀಡಾಂಗಣ ಸಮಿತಿಯಲ್ಲಿ ಜಿಲ್ಲೆಯ ಕೆಲವು ಕ್ರೀಡಾಪಟುಗಳನ್ನು ಹಾಗೂ ಅಧಿಕಾರಿಗಳನ್ನು ಒಳಗೊಂಡ ಸಮಿತಿ ರಚಿಸುವುದು ಸೂಕ್ತ. ಈಗಿನ ಸಚಿವರಾದರೂ ಈ ಎಲ್ಲಾ ಸಮಸ್ಯೆಗಳನ್ನು ಪರಾಮರ್ಶಿಸಿ ಇದಕ್ಕೆ ಕಾಯಕಲ್ಪ ನೀಡುವಲ್ಲಿ ಆಸಕ್ತಿ ತೋರಲಿದ್ದಾರೆಯೇ ಎಂಬ ಕುತೂಹಲ ಕ್ರೀಡಾಪ್ರೇಮಿಗಳದ್ದಾಗಿದೆ.
- ಶಶಿ ಸೋಮಯ್ಯ