ಮಡಿಕೇರಿ, ಜೂ. ೩೦: ಇನ್ನರ್‌ವ್ಹೀಲ್ ಮತ್ತು ರೋಟರಿ ಕ್ಲಬ್ ಸಹಯೋಗದಿಂದ ಕ್ಷೇತ್ರ ಸಂಪನ್ಮೂಲ ಕೇಂದ್ರ ಮಡಿಕೇರಿ ಇಲ್ಲಿನ ಶಾಲಾ ಸಿದ್ಧತಾ ಕೇಂದ್ರಕ್ಕೆ “ಕುಡಿಯುವ ನೀರಿನ” ಸೌಲಭ್ಯವನ್ನು ಒದಗಿಸಿದ್ದು, ಈ ಉದ್ಘಾಟನಾ ಸರಳ ಕಾರ್ಯಕ್ರಮವು ನಡೆಯಿತು.

ಕಾರ್ಯಕ್ರಮದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಕಾಂತರಾಜು, ಇನ್ನರ್‌ವ್ಹೀಲ್ ಕ್ಲಬ್ ಅಧ್ಯಕ್ಷೆ ದಿವ್ಯಾಮುತ್ತಣ್ಣ, ಕಾರ್ಯದರ್ಶಿ ಜೂಬಿಗಣಪತಿ, ಖಜಾಂಚಿ ಡಾ. ರೇಣುಕ ಸುಧಾಕರ್ (ಮಕ್ಕಳ ತಜ್ಞರು) ಹಾಗೂ ರೋಟರಿ ಕ್ಲಬ್ ಅಧ್ಯಕ್ಷ ಗಣಪತಿ ಪಿ.ಟಿ., ಕಾರ್ಯದರ್ಶಿ ಗೀತಾಗಿರೀಶ್, ನಿಯೋಜಿತ ಅಧ್ಯಕ್ಷ ಅಚ್ಚಯ್ಯ ಎಂ.ಡಿ., ಸದಸ್ಯ ಸದಾಶಿವರಾವ್, ಶಿಕ್ಷಣ ಇಲಾಖೆಯ ಕೃಷ್ಣಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿಗಳು ಇತರರು ಇದ್ದರು.

ಕಡಗದಾಳು ಸಿ.ಆರ್.ಪಿ. ಸೌಮ್ಯಶೆಟ್ಟಿ ಪ್ರಾರ್ಥಿಸಿದರು. ಬಿ.ಆರ್.ಪಿರಂಜಿತ್ ಕೆ.ಯು. ಸ್ವಾಗತಿಸಿ, ನಿರೂಪಿಸಿದರು. ಬಿ.ಐ.ಇ.ಆರ್.ಟಿ. ವೀಣಾ ರೈ ಅವರು ಪ್ರಾಸ್ತಾವಿಕ ನುಡಿಯಲ್ಲಿ ಇನ್ನಷ್ಟು ಸಹಕಾರ ಕೋರಿದರು. ಬಿ.ಆರ್.ಪಿ. ಪುಟ್ಟರಂಗನಾಥ್ ಹೆಚ್.ಜಿ. ವಂದಿಸಿದರು.