ಕೂಡಿಗೆ, ಜೂ. ೩೦: ಕುಶಾಲನಗರ ರೈತ ಸಂಪರ್ಕ ಕೇಂದ್ರದ ಆವರಣದಲ್ಲಿ ಸೈನಿಕ ಹುಳುಗಳ ಕೀಟ ಬಾಧೆಯ ಲಕ್ಷಣಗಳು ಮತ್ತು ಅದರ ನಿರ್ವಹಣೆಯ ಬಗ್ಗೆ ರೈತರಿಗೆ ಮಾಹಿತಿ ಕಾರ್ಯಾಗಾರ ನಡೆಯಿತು.

ಕಾರ್ಯಾಗಾರದಲ್ಲಿ ಬಿಎಸ್ಸಿ ಕೃಷಿ ವಿದ್ಯಾರ್ಥಿ ಎನ್.ಎಸ್. ಮನೋಜ್ ಸೈನಿಕ ಹುಳುಗಳ ಬಾಧೆ ಮತ್ತು ಅದರ ಹತೋಟಿಗೆ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಸಮಗ್ರವಾದ ಮಾಹಿತಿಯನ್ನು ರೈತರಿಗೆ ನೀಡಿದರು. ಈ ಸಂದರ್ಭ ರೈತ ಸಂಪರ್ಕ ಕೇಂದ್ರದ ಅಧಿಕಾರಿ ಅರುಣ ಅವರು ಕೀಟಬಾಧೆಯ ನಿಯಂತ್ರಣ, ಭತ್ತದ ತಳಿಗಳ ಬಗ್ಗೆ ಮಾಹಿತಿಯನ್ನು ನೀಡಿದರು. ಕುಶಾಲನಗರ ಹೋಬಳಿ ವ್ಯಾಪ್ತಿಯ ಅನೇಕ ರೈತರು ಭಾಗವಹಿಸಿದ್ದರು.