*ಗೋಣಿಕೊಪ್ಪ, ಜೂ. ೩೦: ಸ್ವಾಭಿಮಾನಿ ಮತ್ತು ಸ್ವಾವಲಂಬಿ ಬದುಕು ನಡೆಸಲು ಗಿರಿಜನರು ಕೃಷಿಯತ್ತ ಒಲವು ತೋರಬೇಕು ಎಂದು ಶಾಸಕ ಕೆ.ಜಿ. ಬೋಪಯ್ಯ ಸಲಹೆಯಿತ್ತರು.
ಅಮ್ಮತ್ತಿ ರೈತ ಸಂಪರ್ಕ ಕೇಂದ್ರದಲ್ಲಿ ಗಿರಿಜನ ಫಲಾನು ಭವಿಗಳಿಗೆ ಭತ್ತದ ಬೀಜಗಳನ್ನು ವಿತರಿಸಿ ಮಾತನಾಡಿದರು.
ಕೃಷಿ ಇಲಾಖೆ ಹಾಗೂ ತೋಟಗಾರಿಕಾ ಇಲಾಖೆಯ ಸಹಕಾರ ದೊಂದಿಗೆ ಪರಿಶಿಷ್ಟ ಪಂಗಡಗಳ ಇಲಾಖೆ ಗಿರಿಜನರ ಅಭಿವೃದ್ಧಿಗಾಗಿ ಹಾಗೂ ಕೃಷಿ ಚಟುವಟಿಕೆಯ ಏಳಿಗೆಗಾಗಿ ಹಲವಾರು ಯೋಜನೆ ಗಳನ್ನು ನೀಡುತ್ತಿದ್ದು, ಇದರ ಸದುಪಯೋಗವನ್ನು ಗಿರಿಜನರು ಪಡೆದುಕೊಂಡು ಸ್ವಾವಲಂಬಿ ಬದುಕು ನಡೆಸಲು ಮುಂದಾಗಬೇಕೆAದು ಸಲಹೆ ನೀಡಿದರು. ಸುಮಾರು ೪೦ಕ್ಕೂ ಹೆಚ್ಚು ಫಲಾನುಭವಿಗಳಿಗೆ ಅತಿರ ಭತ್ತದ ಬೀಜಗಳನ್ನು ಹಾಗೂ ಟಾರ್ಪಲ್ ಗಳನ್ನು ಶಾಸಕರ ನೇತೃತ್ವದಲ್ಲಿ ಅಧಿಕಾರಿಗಳು ವಿತರಿಸಿದರು.
ಐ.ಟಿ.ಡಿ.ಪಿ ಅಧಿಕಾರಿ ಶಿವಕುಮಾರ್, ಜಿಲ್ಲಾ ಕೃಷಿ ಇಲಾಖೆ ಉಪನಿರ್ದೇಶಕ ರಾಜು ಹಾಗೂ ತೋಟಗಾರಿಕೆ ಉಪನಿರ್ದೇಶಕ ಶಶಿಧರ್, ತಾಲೂಕು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಮೂರ್ತಿ, ತಾಲೂಕು ಐ.ಟಿ.ಡಿ.ಪಿ ಅಧೀಕ್ಷಕ ನವೀನ್, ಪೊನ್ನಂಪೇಟೆ ಎ.ಪಿ.ಸಿ.ಎಂ.ಸಿ. ಅಧ್ಯಕ್ಷ ಮುದ್ದಿಯಡ ಮಂಜುಗಣಪತಿ ಹಾಗೂ ಇಲಾಖೆ ಸಿಬ್ಬಂದಿ ವರ್ಗದವರು ಮತ್ತು ಫಲಾನುಭವಿಗಳು ಹಾಜರಿದ್ದರು.