ನಾಪೋಕ್ಲು, ಜೂ. ೩೦: ಸಮಸ್ತ ೯೫ನೇ ಸ್ಥಾಪಕ ದಿನದ ಭಾಗವಾಗಿ ಎಮ್ಮೆಮಾಡು ಎಸ್.ಕೆ.ಎಸ್.ಎಸ್.ಎಫ್. ವಿಖಾಯದ ನೀಲಂಗಿ ಪಡೆ ಎಮ್ಮೆಮಾಡು ದರ್ಗಾ ಷರೀಫ್ಗೆ ಹೋಗುವ ಮುಖ್ಯ ದ್ವಾರದಿಂದ ದರ್ಗಾ ಷರೀಫ್ವರೆಗೆ ೨ ಕಿ.ಮೀ. ರಸ್ತೆಯಲ್ಲಿನ ಎರಡು ಬದಿಯಲ್ಲಿನ ಕಾಡು ಕಡಿದು ಕಸಗಳನ್ನು ತೆಗೆದು ಸ್ವಚ್ಛ ಗೊಳಿಸಲಾಯಿತು. ಸ್ವಚ್ಛತಾ ಅಭಿಯಾನದಲ್ಲಿ ವಿಕಾಯ ನಿರ್ದೇಶಕ ಮೊಯಿದುಕುಟ್ಟಿ ಪೂಟ್ಟಂ ಮತ್ತು ಕನ್ವೀನರ್ ಶಬೀರ್ ನೆರೂಟ್ ನೇತೃತ್ವದಲ್ಲಿ ಶ್ರಮದಾನ ನಡೆಯಿತು. ನೌಫಾಲ್ ಕಾಳೆರ ಇತರರು ಹಾಜರಿದ್ದರು.
* ಸಮೀಪದ ಚೆರಿಯಪರಂಬು ಕಲ್ಲುಮೊಟ್ಟೆ ಎಸ್.ಕೆ.ಎಸ್.ಎಸ್.ಎಫ್. ಕಾರ್ಯಕರ್ತರು ಕಲ್ಲುಮೊಟ್ಟೆ, ಚೆರಿಯಪರಂಬು, ನಾಪೋಕ್ಲು ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯ ೨ ಬದಿಗಳಲ್ಲಿ ಇರುವಂತಹ ಕಾಡುಗಳನ್ನು ಕಡಿದು ವಾಹನ ಸವಾರರಿಗೆ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ನಂತರ ಚೆರಿಯಪರಂಬು ದರ್ಗಾ ಷರೀಫ್ ಆವರಣದಲ್ಲಿ ಬೆಳೆದುನಿಂತಿರುವ ಹುಲ್ಲುಗಳನ್ನು ಯಂತ್ರದ ಮುಖಾಂತರ ಕತ್ತರಿಸಿ ಸ್ವಚ್ಛಗೊಳಿಸಿದರು. ಚೆರಿಯಪರಂಬು ಮುಸ್ಲಿಂ ಜಮಾಅತ್ ಆಡಳಿತ ಮಂಡಳಿಯ ಪ್ರಧಾನ ಕಾರ್ಯದರ್ಶಿ ಪರವಂಡ ಸಿರಾಜ್, ಕಲ್ಲುಮೊಟ್ಟೆ - ಚೆರಿಯಪರಂಬು ಎಸ್.ಕೆ.ಎಸ್.ಎಸ್.ಎಫ್. ಅಧ್ಯಕ್ಷ ಸಾದುಲಿ, ಪ್ರಧಾನ ಕಾರ್ಯದರ್ಶಿ ಹನೀಫ್ ಬಿ.ಎ., ಸದಸ್ಯರಾದ ಸಮೀರ್ ಪಿ.ಎಂ., ಹನೀಫ್, ಮುಝಮ್ಮಿಲ್, ಉಮ್ಮರ್ ಇತರರು ಹಾಜರಿದ್ದರು.