ಕೂಡಿಗೆ, ಜೂ. ೨೯: ಕಳೆದ ತಿಂಗಳು ಕೋವಿಡ್ ಸೋಂಕಿನಿAದ ತಂದೆ-ತಾಯಿ ಇಬ್ಬರನ್ನು ಕಳೆದುಕೊಂಡು ಅಜ್ಜಿಯ ಮನೆಯಲ್ಲಿರುವ, ಸುಂದರನಗರದ ಬಸವೇಶ್ವರ ಬಡಾವಣೆಯ ಶ್ಯಾಮ್ ಅವರ ನಿವಾಸಕ್ಕೆ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಭೇಟಿ ನೀಡಿ ಸರಕಾರದಿಂದ ಸಿಗುವ ಸೌಲಭ್ಯಗಳನ್ನು ಒದಗಿಸುವ ಬರವಸೆ ನೀಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಮಾಜಿ ಸದಸ್ಯೆ ಮಂಜುಳ, ಕೂಡುಮಂಗಳೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಬಾಸ್ಕರ್ ನಾಯಕ್, ಶ್ಯಾಮ್ ಮನೆಯ ಸಂಬAಧಿಕರು ಇದ್ದರು.