ಮಡಿಕೇರಿ, ಜೂ. ೨೯: ಆಲೂರು ಮಲೆಮಲ್ಲೇಶ್ವರ ರೋಟರಿ ಕ್ಲಬ್‌ನ ೩ನೇ ಅಧ್ಯಕ್ಷರಾಗಿ ಪಿ.ಇ. ವೆಂಕಟೇಶ್ ಮತ್ತು ಕಾರ್ಯದರ್ಶಿಯಾಗಿ ಎಚ್.ಜೆ. ಲೋಕೇಶ್ ನೇಮಕಗೊಂಡಿದ್ದಾರೆ. ಜುಲೈ ೧ ರಿಂದ ಪ್ರಾರಂಭವಾಗುವ ರೋಟರಿ ವರ್ಷದಲ್ಲಿ ವೆಂಕಟೇಶ್ ಮತ್ತು ಲೋಕೇಶ್ ಕಾರ್ಯಾರಂಭ ಮಾಡಲಿದ್ದಾರೆ. ಕೆ.ಇ. ತಮ್ಮಯ್ಯ, ಎಚ್.ಕೆ. ಕೃಷ್ಣ, ಟಿ.ಪಿ. ಸಂಪತ್, ಎಚ್.ಎಂ. ಮನೋಹರ್, ಜಿ.ಡಿ. ಯತೀಶ್, ಗಂಗಾಧರ, ಎ.ಎಸ್. ರಾಮಣ್ಣ, ಎ.ಎನ್. ತ್ಯಾಗರಾಜ್, ಟಿ.ಪಿ. ಜೀವನ್, ಜಿ.ಎಂ. ಹೇಮಂತ, ಆನಂದ, ಪಿ.ಕೆ. ಭರತ್ ಕುಮಾರ್, ಮಧುಶಂಕರ್, ಎಂ.ಕೆ. ಲತೀಶ್, ಎಂ.ಟಿ. ಬೇಬಿ, ಎಚ್.ಬಿ. ಕುಶ, ಆಲೂರು ಮಲೆಮಲ್ಲೇಶ್ವರ ರೋಟರಿ ಕ್ಲಬ್‌ನ ಆಡಳಿತ ಮಂಡಳಿಯಲ್ಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.