ಮಡಿಕೇರಿ, ಜೂ.೨೯: ಕಂದಾಯ ಇಲಾಖೆಯ ಮಡಿಕೇರಿ ಉಪ ವಿಭಾಗ ವ್ಯಾಪ್ತಿಯಲ್ಲಿ ಕಡತ ನಿರ್ವಹಣೆಗೆ ಸಂಬAಧಪಟ್ಟAತೆ ರಾಷ್ಟಿçÃಯ ಮಾಹಿತಿ ಕೇಂದ್ರ (ಓIಅ) ಮತ್ತು ಜೆಲೆಟಿಕ್ಸ್ ಸಂಸ್ಥೆಯ ಸಹಯೋಗದೊಂದಿಗೆ ನೂತನವಾಗಿ ಕಂದಾಯ ಇಲಾಖೆ ಕಡತಗಳ ನಿರ್ವಹಣಾ ಪದ್ಧತಿ (ಖಈಒS) ಎಂಬ ತಂತ್ರಾAಶವನ್ನು ಅಭಿವೃದ್ಧಿಪಡಿಸಲಾಗಿದ್ದು, ಅರ್ಜಿದಾರರು ಸ್ವತಃ ತಮ್ಮ ಕಡತ ಯಾವ ಹಂತದಲ್ಲಿ ಇರುತ್ತದೆ ಎಂಬುದನ್ನು ಈ ತಂತ್ರಾAಶದ ಮುಖಾಂತರ ವೀಕ್ಷಿಸಬಹುದಾಗಿರುತ್ತದೆ.

ಈ ಸಂಬAಧ ಜುಲೈ ೧ ರಿಂದ ಪೊನ್ನಂಪೇಟೆ ತಾಲೂಕು ಶ್ರೀಮಂಗಲ ಹೋಬಳಿ ನಾಡ ಕಚೇರಿಯಲ್ಲಿ ಪ್ರಾಯೋಗಿಕವಾಗಿ ತಂತ್ರಾAಶ ಚಾಲನೆ ನೀಡಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ. ಈ ಸಂಬAಧ ಉಪ ವಿಭಾಗಾಧಿಕಾರಿ ಈಶ್ವರ್ ಕುಮಾರ್, ಭೂ ದಾಖಲೆಗಳ ಉಪ ನಿರ್ದೇಶಕ ಪಿ.ಶ್ರೀನಿವಾಸ, ಸಹಾಯಕ ನಿರ್ದೇಶಕ ವಿರೂಪಾಕ್ಷ, ರಾಷ್ಟಿçÃಯ ಮಾಹಿತಿ ಕೇಂದ್ರದ ಅಧಿಕಾರಿ ಅಜಿತ್ ಇತರರು ಪಾಲ್ಗೊಂಡು ಚರ್ಚಿಸಿದರು.