ವೀರಾಜಪೇಟೆ, ಜೂ. ೨೯: ಕೊರೊನಾ ಲಾಕ್‌ಡೌನ್ ಮನುಷ್ಯನ ಜೀವನ ಹಾಗೂ ಚಿಂತನೆಯನ್ನು ಬದಲಾಯಿಸಿದೆ. ಒಂದು ಹೊತ್ತಿನ ಅನ್ನಕ್ಕೂ ಎಷ್ಟು ಕಷ್ಟ ಇದೆ ಎಂಬುದನ್ನು ತೋರಿಸಿಕೊಟ್ಟಿದೆ. ಒಂದು ಬಾರಿ ಪಟ್ಟಣ ಸೇರಿದ ಯುವಜನತೆ ಮತ್ತೆ ಹಳ್ಳಿ ಕಡೆ ತಿರುಗಿ ನೋಡುತ್ತಿರಲಿಲ್ಲ. ವಿವಿಧ ಕಾರಣಗಳಿಂದ ಹಳ್ಳಿಗೆ ಬಂದರೂ ಕೂಡ ಕೃಷಿ ಚಟುವಟಿಕೆಗಳಲ್ಲಿ ಭಾಗಿಯಾಗುವುದು ಬಹಳ ವಿರಳ. ಸಣ್ಣಪುಟ್ಟ ವ್ಯಾಪಾರ ವಹಿವಾಟು ನಡೆಸಿಕೊಂಡು ಅಲ್ಲಿ ಇಲ್ಲಿ ಅಡ್ಡಾಡಿಕೊಂಡು ಕಾಲ ಕಳೆಯುತ್ತಾರೆ. ಆದರೆ ಇಲ್ಲೊಬ್ಬರು ಅಂರ‍್ರಾಷ್ಟಿçÃಯ ಕಂಪೆನಿಯಲ್ಲಿ ಉದ್ಯೋಗಿಯಾಗಿ ಕೈ ತುಂಬ ಸಂಬಳ ಬಂದರೂ ಕೃಷಿಯಲ್ಲಿ ಆಸಕ್ತಿ ಹೊಂದಿ ಎಲ್ಲರಿಗೂ ಮಾದರಿ ಎಂಬAತಿದ್ದಾರೆ. ಕಾಕೋಟುಪರಂಬು ನಾಲ್ಕೇರಿ ಗ್ರಾಮದ ಬಿದ್ದಂಡ ಪೊನ್ನಣ್ಣ ಐದು ಎಕರೆ ಗದ್ದೆಯಲ್ಲಿ ಕೃಷಿ ಸಾಧನೆ ಮಾಡಿ ಸೈ ಎನಿಸಿಕೊಂಡಿದ್ದಾರೆ.
ಎA.ಬಿ.ಎ ಪದವೀಧರ
ಮೂಲತ ಕೃಷಿಕರಾದ ಮೂವತ್ತಾಲ್ಕು ವರ್ಷದ ಪೊನ್ನಣ್ಣ ಎಂಬಿಎ ಪದವೀಧರ. ಪೂನಾದ ಅಂರ‍್ರಾಷ್ಟಿçÃಯ ಬ್ಯಾಂಕ್‌ನಲ್ಲಿ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಲಾಕ್‌ಡೌನ್ ಆದ ಕಾರಣ ಪ್ರಸ್ತುತ ಮನೆಯಿಂದಲೇ ಕೆಲಸ ನಿರ್ವಹಣೆ. ಓದಿದ್ದು ಎಂ.ಬಿ.ಎ ಆದರೂ ಕೃಷಿ ಮೇಲೆ ಹೆಚ್ಚಿನ ಆಸಕ್ತಿ. ತವರು ಜಿಲ್ಲೆ ಕೊಡಗಿಗೆ ಆಗಮಿಸುವ ಸಂದರ್ಭ ಬೆಂಗಳೂರಿನಿAದ ಹುಣಸೂರಿನವರೆಗೂ ಸುತ್ತಲು ಹಸಿರಿನಿಂದ ಕೂಡಿದ ಕೃಷಿ ಚಟುವಟಿಕೆಗಳಿಗೆ ಮನಸೋತು ನಾನು ಕೂಡ ಏಕೆ ಕೃಷಿಯಲ್ಲಿ ತೊಡಗಿಸಿಕೊಳ್ಳಬಾರದು ಎಂಬ ಹೆಬ್ಬಯಕೆಯಿಂದ ಕೃಷಿಗೆ ಮಾರು ಹೋದರು.
ಜಿಲ್ಲೆಯಲ್ಲಿ ಕಾಫಿ ಪ್ರಧಾನ ಬೆಳೆ. ಭತ್ತ, ಕಾಳುಮೆಣಸು, ಏಲಕ್ಕಿ ಪರ್ಯಾಯ ವಾರ್ಷಿಕ ಬೆಳೆಗಳಾಗಿವೆ. ಬಹುತೇಕ ಕಡೆಗಳಲ್ಲಿ ಭತ್ತದ ಎಲ್ಲಾ ಕಡೆಗಳಲ್ಲಿ ಪ್ರಾಯೋಗಿಕ ಯಶಸ್ವಿಯ ನಂತರ ಇದು ಬೇಸಿಗೆ ಬೆಳೆಯಾಗಿದ್ದು, ಜನವರಿ ಮೊದಲ ವಾರದಲ್ಲಿ ಬಿತ್ತನೆ ಮಾಡಿದರೆ ಏಪ್ರಿಲ್ ಹಾಗೂ ಮೇ ಮೊದಲ ವಾರದಲ್ಲಿ ಕಟಾವು ಮಾಡಬಹುದು. ಬೇಸಿಗೆಯಲ್ಲಿ ಬಹುತೇಕ ಗದ್ದೆಗಳು ಖಾಲಿಯಾಗಿರುವುದರಿಂದ ಕಡಿಮೆ ಖರ್ಚಿನಲ್ಲಿ ಬೆಳೆ ತೆಗೆದುಕೊಳ್ಳಬಹುದು.
- ನಿರಂಜನ್ ನಂದಿಪುರ. ಬೇಸಾಯ ತಜ್ಞರು.
ಜೈನ್ ಇರಿಗೇಷನ್ ಸಿಸ್ಟಮ್ ಹಾಸನ. ಗದ್ದೆಯನ್ನು ಪಾಳುಬಿಟ್ಟಿದ್ದು ಜಲಮೂಲವನ್ನು ನಾವು ಕಳೆದುಕೊಳ್ಳುತ್ತಿದ್ದೇವೆ ಎಂಬ ಕಾರಣವನ್ನು ಮುಂದಿಟ್ಟುಕೊAಡು ಬಯಲು ಪ್ರದೇಶಗಳಲ್ಲಿ ಬೆಳೆಯುವ ಮೂರು ಹಾಗೂ ನಾಲ್ಕು ತಿಂಗಳಿಗೆ ಬರುವಂತ ಜೋಳ ಹಾಗೂ ನಾರ್ಥ್ಈಸ್ಟ್ಗಳಲ್ಲಿ ಬೆಳೆಯುವ ಚಕಾವೋ ಕಪ್ಪು ಭತ್ತ (ಫಾರ್‌ಬಿಡನ್‌ರೈಸ್)ವನ್ನು ಬೆಳೆದು ತಾವು ಮಾರುಕಟ್ಟೆ ಮಾಡಿ ಉತ್ತಮ ಲಾಭಗಳಿಸುವ ಚಿಂತನೆಯಲ್ಲಿದ್ದಾರೆ.
ನಾಲ್ಕು ಎಕರೆ ಗದ್ದೆ
ತಮ್ಮದೆ ನಾಲ್ಕು ಎಕರೆ ಗದ್ದೆಯಲ್ಲಿ ಹೈಬ್ರೀಡ್ ತಳಿಯ ಹರಶಿನ ಜೋಳವನ್ನು ಬೆಳೆದಿದ್ದಾರೆ. ಮೂರು ತಿಂಗಳ ಬೆಳೆಯಾದ ಜೋಳ ಬೆಳೆಯಲು ಒಂದು ಎಕರೆಗೆ ಅಂದಾಜು ೧೦ ಸಾವಿರದಂತೆ ೪ ಎಕರೆಗೆ ೪೦ ಸಾವಿರ ವ್ಯಯ ಮಾಡಿದ್ದಾರೆ. ಉತ್ತಮ ಇಳುವರಿ ಬೇಡಿಕೆ ಇದೆ. ಒಂದು ಎಕರೆಯಲ್ಲಿ ೬ ರಿಂದ ೮ ಟನ್ ಇಳುವರಿ ಪಡೆಯಬಹುದು ಎಂಬ ಚಿಂತನೆಯಿAದ ಬಿತ್ತನೆ ಮಾಡಲು ಒಂದು ತಿಂಗಳು ವಿಳಂಬವಾದ ಕಾರಣ ಎಕರೆಗೆ ೫ ರಿಂದ ೬ ಟನ್ ಇಳುವರಿ ಅಂದಾಜಿಸಲಾಗಿದೆ. ಜೋಳವನ್ನು ೩ ವಿಧದಲ್ಲಿ ವಿಂಗಡಿಸಲಾಗಿದೆ. ಬೇಬಿ ಕಾರ್ನ್, ಬುಟ್ಟ (ಬೇಯಿಸಿ/ ಸುಟ್ಟು ತಿನ್ನುವುದು), ಕಾಳು (ಕಾರ್ನ್ಫ್ಲೆಕ್ಸ್, ಪಾಪ್‌ಕಾರ್ನ್) ಇತ್ಯಾದಿ ಮಾಡಬಹುದಾಗಿದೆ. ಹೊಟೇಲ್, ರೆಸ್ಟೋರೆಂಟ್ ಹಾಗೂ ರೆಸಾರ್ಟ್ಗಳಲ್ಲಿ ಹೆಚ್ಚಾಗಿ ಬೇಬಿ ಕಾರ್ನ್ ಬಳಸುವುದರಿಂದ ಬೇಡಿಕೆ ಹೆಚ್ಚಿದೆ. ಆದರೂ ಲಾಕ್‌ಡೌನ್‌ನಿಂದಾಗಿ ನಷ್ಟ ಉಂಟಾಗಿದೆ.
ಬಿತ್ತನೆ ಹಾಗೂ ಗೊಬ್ಬರ
ಟ್ರಾö್ಯಕ್ಟರ್ ಹಾಗೂ ರೋಟೋವೇಟರ್ ಮೂಲಕ ಉಳುಮೆ ಮಾಡಿ ಭೂಮಿಯನ್ನು ಹದಮಾಡಿಕೊಂಡು ಬೆಡ್ ಮಾಡಿಕೊಳ್ಳಬೇಕು. ಸೂಪರ್ ಫಾಸ್ಪೇಟ್ ಮಿಶ್ರಣವನ್ನು ಸ್ವಲ್ಪ ಪ್ರಮಾಣದಲ್ಲಿ ಸಿಂಪಡಿಸಿ ಒಂದೊAದು ಅಡಿಗೆ ಜೋಳದ ಬೀಜವನ್ನು ಬಿತ್ತಬೇಕು. ನೀರಿನಲ್ಲಿ ನೈಟ್ರೋಜನ್ ಅಂಶ ಕಡಿಮೆ ಇರುವ ಕಾರಣ ಮೈಕ್ರೋ ಸಾವಯವ ಗೊಬ್ಬರವನ್ನು ಬೆರೆಸಿ ವಾರಕ್ಕೆ ಎರಡು ಬಾರಿ ಸ್ಪಿçಂಕ್ಲರ್ ಮೂಲಕ ನೀರು ಹಾಯಿಸಿದಾಗ ೯೦ ದಿನಗಳಲ್ಲಿ ಜೋಳ ಕಟಾವಿಗೆ ಬರುತ್ತದೆ. ಬರಿ ಕೊಟ್ಟಿಗೆ ಗೊಬ್ಬರವನ್ನು ಉಪಯೋಗಿಸಿ ಬೆಳೆದ ಜೋಳ ಹೆಚ್ಚಿನ ಇಳುವರಿ ಬಂದಿದೆ ಎಂದು ಮುಕ್ತ ಕಂಠದಿAದ ಶ್ಲಾಘಿಸಿದರು.
ಪೋಷಕರ ನಿರುತ್ಸಾಹ
ಆರಂಭದಲ್ಲಿ ಪೋಷಕರಾದ ಬಿದ್ದಂಡ ಬೋಪಣ್ಣ ಹಾಗೂ ಬೀನಾ ಬೋಪಣ್ಣ ನಿರುತ್ಸಾಹ ತೋರಿದರು. ತಜ್ಞರ ಸಲಹೆಯಂತೆ ಛಲಬಿಡದೆ ಜೋಳ ಹಾಗೂ ಕಪ್ಪು ಭತ್ತದ ಕೃಷಿ ಮಾಡುವುದರ ಮೂಲಕ ಯಶ ಕಂಡಿದ್ದಾರೆ. ದಯವಿಟ್ಟು ಯಾರೇ ಆಗಲಿ ಭತ್ತದ ಗದ್ದೆ ಹಾಗೂ ಖಾಲಿ ಜಾಗವನ್ನು ಪಾಳುಬಿಡದೆ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಿ. ಕೊಡಗಿನ ಮಣ್ಣು ಎಲ್ಲಾ ಬೆಳೆಗಳಿಗೆ ಪೂರಕವಾಗಿದೆ. ಪೋಷಕರು ಕೂಡ ನಿರ್ಲಕ್ಷö್ಯ ಮಾಡದೆ ಪ್ರೋತ್ಸಾಹಿಸಿ ಎನ್ನುತ್ತಾರೆ ಅವರು.
ನಿರುದ್ಯೋಗದಿಂದ ಯುವಜನತೆ ತತ್ತರಿಸುತ್ತಿದ್ದು, ಸರ್ಕಾರ ಕೃಷಿಗೆ ಹೆಚ್ಚು ಒತ್ತು ನೀಡಬೇಕು. ತಮಿಳುನಾಡು ಸರ್ಕಾರ ಕಪ್ಪು ಭತ್ತ ಕೃಷಿಗೆ ಸಹಾಯಧನ ನೀಡುವುದರ ಮೂಲಕ ಕೃಷಿಗೆ ಹೆಚ್ಚು ಉತ್ತೇಜನ ನೀಡುತ್ತಿದ್ದು, ಕರ್ನಾಟಕ ಸರ್ಕಾರ ಕೂಡ ಸಹಾಯಧನ ನೀಡಿದರೆ ಇನ್ನಷ್ಟು ಯುವಜನರು ಕೃಷಿ ಮಾಡಲು ಮುಂದೆ ಬರುತ್ತಾರೆ ಎನ್ನುತ್ತಾರೆ ಬಿದ್ದಂಡ ಪೊನ್ನಣ್ಣ ಅವರು. - ಪಿ.ಪಿ.ಸಿ.