ಶನಿವಾರಸAತೆ, ಜೂ. ೨೯: ಭಾರದ ವಸ್ತುಗಳನ್ನು ತುಂಬಿಸಿಕೊAಡು ಸಾರ್ವಜನಿಕ ರಸ್ತೆಯಲ್ಲಿ ಚಲಿಸುವ ವಾಹನಗಳ ಸಂಚಾರವನ್ನು ನಿಷೇಧ ಮಾಡಿರುವ ಜಿಲ್ಲಾಧಿಕಾರಿಗಳ ಆದೇಶವನ್ನು ಉಲ್ಲಂಘನೆ ಮಾಡಿದ ಲಾರಿ (ಕೆ.ಎ. ೦೯. ಸಿ. ೨೭೮೮) ಚಾಲಕನಿಗೆ ಆರ್‌ಟಿಓ ಅಧಿಕಾರಿಗಳು ರೂ. ೫ ಸಾವಿರ ದಂಡ ವಿಧಿಸಿದ್ದಾರೆ.

ತಾ. ೨೫ ರಂದು ರಾತ್ರಿ ೮ ಗಂಟೆಗೆ ಶನಿವಾರಸಂತೆ ಪೊಲೀಸ್ ಠಾಣಾ ಸರಹದ್ದಿನ ಶಾಂತಪುರ ಚೆಕ್‌ಪೋಸ್ಟ್ನಲ್ಲಿ ನಿರೀಕ್ಷಕ ಎಸ್. ಪರಶಿವಮೂರ್ತಿ ಹಾಗೂ ಕೊಡ್ಲಿಪೇಟೆ ಉಪಠಾಣೆಯ ಸಿಬ್ಬಂದಿಗಳು ಇಲಾಖಾ ವಾಹನದಲ್ಲಿ ಗಸ್ತಿನಲ್ಲಿದ್ದ ವೇಳೆ ಲಾರಿಯನ್ನು ತಡೆದು ಪರಿಶೀಲಿಸಲಾಗಿ ಲಾರಿಯಲ್ಲಿ ಸಿಲ್ವರ್ ಮರದ ದಿಮ್ಮಿಗಳನ್ನು ತುಂಬಿದಿ ಸಾಗಾಟ ಮಾಡುತ್ತಿರುವುದು ಕಂಡು ಬಂದಿದೆ.

ಲಾರಿಯಲ್ಲಿ ನಿಗದಿತ ಭಾರಕ್ಕಿಂತ ಅಧಿಕ ಸಿಲ್ವರ್ ಮರದ ದಿಮ್ಮಿಗಳನ್ನು ತುಂಬಿಸಿರುವುದು ಮೇಲ್ನೋಟಕ್ಕೆ ಕಂಡು ಬಂದಿರುತ್ತದೆ. ಅಧಿಕ ತೂಕದಲ್ಲಿ ಸಾಗಾಟ ಮಾಡಿ ರಹದಾರಿ ಉಲ್ಲಂಘನೆ ಮಾಡಿರುವುದು ಕಂಡು ಬಂದು ಲಾರಿಯನ್ನು ವಶಪಡಿಸಿಕೊಂಡು ಸಾರಿಗೆ ಪ್ರಾಧಿಕಾರ ಕಚೇರಿಗೆ ವರದಿ ಸಲ್ಲಿಸಲಾಗಿತ್ತು. ರಹದಾರಿ ನಿಯಮ ಉಲ್ಲಂಘನೆ ಮಾಡಿರುವ ಲಾರಿ ಚಾಲಕ ವೀರಭದ್ರನಿಗೆ ರೂ. ೫೦೦೦ ದಂಡ ವಿಧಿಸಲಾಗಿದೆ. ಚಾಲಕ ದಂಡ ಪಾವತಿಸಿ ಲಾರಿಯನ್ನು ಬಿಡಿಸಿಕೊಂಡಿದ್ದಾರೆ. ಕಾರ್ಯಾಚರಣೆಯಲ್ಲಿ ಹೆಡ್‌ಕಾನ್ಸ್ಟೇಬಲ್ ಬೋಪಣ್ಣ, ಕೊಡ್ಲಿಪೇಟೆ ಉಪ ಠಾಣಾ ಸಿಬ್ಬಂದಿಗಳು ಪಾಲ್ಗೊಂಡಿದ್ದರು.