ಕುಶಾಲನಗರ, ಜೂ.೨೯: ಕೊಡಗು ಜಿಲ್ಲೆಗೆ ಕುಶಾಲನಗರ ಮೂಲಕ ನೆರೆ ರಾಜ್ಯ, ಜಿಲ್ಲೆಗಳ ಅಧಿಕ ಸಂಖ್ಯೆಯ ವಾಹನಗಳ ಸಂಚಾರ ಪ್ರಾರಂಭಗೊAಡ ಹಿನ್ನೆಲೆಯಲ್ಲಿ ಕೊಡಗು ಜಿಲ್ಲಾಡಳಿತ ಗುಡ್ಡೆಹೊಸೂರು ಬಳಿ ಹೆಚ್ಚುವರಿ ಅಂತರ ಜಿಲ್ಲಾ ವಾಹನಗಳ ತಪಾಸಣೆ ಕೇಂದ್ರ ಆರಂಭಿಸಿದೆ.
ಕಳೆದ ಕೆಲವು ದಿನಗಳಿಂದ ಕೊಡಗು ಜಿಲ್ಲೆಗೆ ಪ್ರವಾಸಿಗರ ವಾಹನಗಳು ಅಧಿಕ ಸಂಖ್ಯೆಯಲ್ಲಿ ಬರುತ್ತಿರುವ ಮಾಹಿತಿ ಹೊರಬಿದ್ದಿದ್ದು, ಇದಕ್ಕೆ ಸಂಬAಧಿಸಿದAತೆ ಕುಶಾಲನಗರ- ಕೊಪ್ಪ ಗಡಿಭಾಗದಲ್ಲಿ ಪೊಲೀಸ್ ಇಲಾಖೆ ವಾಹನಗಳ ತಪಾಸಣೆ ಸಂದರ್ಭದಲ್ಲಿ ಹೆದ್ದಾರಿ ಉದ್ದಕ್ಕೂ ಟ್ರಾಫಿಕ್ ಜಾಮ್ ಕಂಡುಬರುತ್ತಿರುವುದು ಸಾಮಾನ್ಯವಾಗಿದೆ. ಇದರಿಂದ ಕುಶಾಲನಗರ ಪಟ್ಟಣ ಮತ್ತು ಕೊಪ್ಪ ವ್ಯಾಪ್ತಿಯ ಸ್ಥಳೀಯ ನಾಗರಿಕರಿಗೆ ತೊಂದರೆ ಉಂಟಾಗಿತ್ತು.
ಈ ಸಂಬAಧ ಸಾರ್ವಜನಿಕ ದೂರಿನ ಮೇರೆಗೆ ಜಿಲ್ಲಾಧಿಕಾರಿ ಚಾರುಲತಾ ಸೋಮಲ್, ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರ ಜಿಲ್ಲಾಡಳಿತ ದ ಅಧಿಕಾರಿಗಳ ಜತೆಗೆ ಚರ್ಚಿಸಿ ಗುಡ್ಡೆಹೊಸೂರು ಬಳಿ ಪೊಲೀಸ್, ಕಂದಾಯ, ಆರೋಗ್ಯ ಇಲಾಖೆಯ ಅಧಿಕಾರಿ, ಸಿಬ್ಬಂದಿಗಳನ್ನೊಳಗೊAಡ ವಿಶೇಷ ವಾಹನ ತಪಾಸಣಾ ಕೇಂದ್ರ ಆರಂಭ ಮಾಡಿದ್ದಾರೆ.
೨೦ ಮಂದಿಗೆ ಸೀಲ್
ಜಿಲ್ಲೆಗೆ ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳು ಬರುತ್ತಿದ್ದು, ಲಾಕ್ ಡೌನ್ ನಡುವೆ ಪ್ರವಾಸಿಗರು ಕೂಡ ಆಗಮಿಸುತ್ತಿರುವ ಮಾಹಿತಿ ಬಂದಿರುವ ಕಾರಣ ಹೆಚ್ಚಿನ ತಪಾಸಣೆಗಾಗಿ ಗುಡ್ಡೆಹೊಸೂರಿನಲ್ಲಿ ಕೇಂದ್ರ ಆರಂಭಿಸಲಾಗಿದೆ ಎಂದು ಸೋಮವಾರಪೇಟೆ ತಾಲೂಕು ತಹಶೀಲ್ದಾರ್ ಗೋವಿಂದರಾಜು ಮಾಹಿತಿ ನೀಡಿದ್ದಾರೆ. ಇಂತಹ ಪ್ರಕರಣಗಳನ್ನು ಪತ್ತೆ ಹಚ್ಚಿ ವ್ಯಕ್ತಿಗಳಿಗೆ ಸೀಲ್ ಹಾಕುವುದರೊಂದಿಗೆ ಕ್ವಾರಂಟೈನ್‌ಗೆ ಒಳಪಡಿಸಲಾಗುವುದು ಎಂದು ತಿಳಿಸಿದ್ದಾರೆ. ಮಂಗಳವಾರ ನೆರೆಜಿಲ್ಲೆ ರಾಜ್ಯ ಹಾಗೂ ವಿದೇಶದಿಂದ ಆಗಮಿಸಿದ ೨೦ ಕ್ಕೂ ಅಧಿಕ ಮಂದಿಗೆ ಸೀಲ್ ಹಾಕಿದ್ದು ಅವರನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಉಳಿದಂತೆ ಕೊಡಗು ಗಡಿಭಾಗದ ಕುಶಾಲನಗರ ಮತ್ತು ಶಿರಂಗಾಲ ಕೇಂದ್ರಗಳಲ್ಲಿ ಕೂಡ ವಾಹನಗಳ ತಪಾಸಣೆ ನಡೆಯಲಿದೆ ಎಂದು ತಹಶೀಲ್ದಾರ್ ಗೋವಿಂದರಾಜು ಹೇಳಿದ್ದಾರೆ. ಗಡಿಭಾಗದ ತಪಾಸಣಾ ಕೇಂದ್ರಗಳಲ್ಲಿ ಸರ್ಕಾರಿ ಮತ್ತು ಅನುದಾನಿತ ಫ್ರೌಢ ಮತ್ತು ಫ್ರಾಥಮಿಕ ಶಾಲಾ ಶಿಕ್ಷಕರುಗಳನ್ನು ಕೂಡ ನಿಯೋಜಿಸಲಾಗಿದೆ. ಕೇಂದ್ರಗಳಲ್ಲಿ ಕಂದಾಯ, ಗ್ರಾಮ ಪಂಚಾಯಿತಿ, ಪೊಲೀಸ್ ಇಲಾಖೆ ಸಿಬ್ಬಂದಿಗಳು ದಿನದ ೨೪ ಗಂಟೆಗಳ ಕಾಲ ಕರ್ತವ್ಯ ನಿರ್ವಹಿಸುತ್ತಿದ್ದಾರೆ.