ಕೂಡಿಗೆ, ಜೂ. ೨೮: ತಾ. ೨೮ ರಂದು ಶಕ್ತಿ ಪತ್ರಿಕೆಯಲ್ಲಿ ಪ್ರಕಟವಾದ ‘ಇದ್ದ ಜೋಪಡಿ ನೆಲಸಮ- ಕೊಟ್ಟಿಗೆಯೇ ಇದೀಗ ಆಶ್ರಯ, ನೊಂದ ಕುಟುಂಬಕ್ಕೆ ಬೇಕಿದೆ ಆಡಳಿತದ ನೆರವು’ ಎಂಬ ವರದಿ ಪ್ರಕಟಗೊಂಡಿತ್ತು.

ಕೂಡುಮAಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸವನತ್ತೂರು ಗ್ರಾಮ ಆನೆ ಕೆರೆ ಸಮೀಪದಲ್ಲಿದ್ದ ರಾಜಣ್ಣ ಮತ್ತು ನಾಗಮ್ಮ ಎಂಬುವರ ಮನೆಯು ಗಾಳಿ ಮಳೆಯಿಂದಾಗಿ ಬಿದ್ದು ಹೋಗಿದ್ದು, ಸ್ಥಳಕ್ಕೆ ಶಾಸಕರುಗಳಾದ ಎಂ.ಪಿ. ಅಪ್ಪಚ್ಚು ರಂಜನ್ ಹಾಗೂ ಎಂ.ಪಿ. ಸುನಿಲ್ ಸುಬ್ರಮಣಿ ಅವರುಗಳು ಭೇಟಿ ನೀಡಿ ಪರಿಶೀಲಿಸಿದರು.

ನಂತರ ಶಾಸಕರು ದೂರವಾಣಿ ಮುಖೇನ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಮತ್ತು ಗಿರಿಜನ ಸಮನ್ವಯ ಅಧಿಕಾರಿಗಳಿಗೆ ಸಮರ್ಪಕವಾಗಿ ಮನೆ ನಿರ್ಮಿಸಲು ಸೂಚನೆ ನೀಡಿದರು. ದಾಖಲಾತಿ ಮತ್ತು ಪಡಿತರ ವಸ್ತುಗಳನ್ನು ಪಡೆಯಲು ಅನುಕೂಲವಾಗುವಂತೆ ಕ್ರಮಕೈಗೊಳ್ಳಲು ಸೂಚನೆ ನೀಡಿದರು.

ಈ ಸಂದರ್ಭ ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಮಾಜಿ ಸದಸ್ಯೆ ಮಂಜುಳ, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಗಣೇಶ್, ಕೂಡುಮಂಗಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಇಂದಿರಾ ರಮೇಶ್, ಉಪಾಧ್ಯಕ್ಷ ಬಾಸ್ಕರ್ ನಾಯಕ್, ಸದಸ್ಯರಾದ ಕೆ.ಕೆ. ಭೋಗಪ್ಪ, ದಿನೇಶ್, ಗಿರೀಶ್, ಗೌರಮ್ಮ, ಲಕ್ಷ್ಮಿ, ಭಾಗ್ಯ, ಕೂಡುಮಂಗಳೂರು ಗ್ರಾಮ ಪಂಚಾಯಿತಿ ಬಸವನತ್ತೂರು ಗ್ರಾಮದ ಬಿ.ಜೆ.ಪಿ. ಬೂತ್ ಅಧ್ಯಕ್ಷ ಆರ್.ಕೆ. ಕೃಷ್ಣ, ಕಾರ್ಯದರ್ಶಿ ರವಿ, ಶಕ್ತಿ ಕೇಂದ್ರದ ಪ್ರಮುಖ್ ಮಂಜುನಾಥ, ಗುರುಲಿಂಗಪ್ಪ, ಪ್ರವೀಣ್ ಹಾಜರಿದ್ದರು.