ನಾಪೋಕ್ಲು, ಜೂ. ೨೮: ಬೇತು ಗ್ರಾಮದಿಂದ ಆರಿಸಿ ಬಂದು ಕಳೆದ ಸಾಲಿನಲ್ಲಿ ನಾಪೋಕ್ಲು ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿ ಪುನಃ ಎರಡನೇ ಬಾರಿಗೆ ಅದೇ ಕ್ಷೇತ್ರದಿಂದ ಆರಿಸಿ ಬಂದು ಗ್ರಾಮ ಪಂಚಾಯಿತಿ ಸದಸ್ಯರಾಗಿರುವ ಕಾಳೆಯಂಡ ಸಾಬ ತಿಮ್ಮಯ್ಯ ಪರೋಪಕಾರಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

ಕೊರೊನಾ ಎರಡನೇ ಅಲೆಯಿಂದ ಈ ವಿಭಾಗದಲ್ಲಿ ಪಾಸಿಟಿವ್ ಬಂದ ೧೧೦ಕ್ಕೂ ಅಧಿಕ ಮಂದಿಯನ್ನು ತಮ್ಮ ಕಾರಿನಲ್ಲಿ ಜಿಲ್ಲಾ ಕೋವಿಡ್ ಕೇಂದ್ರಕ್ಕೆ ಕರೆದುಕೊಂಡು ಹೋಗಿ ಅವರಿಗೆ ಚಿಕಿತ್ಸೆಯನ್ನು ಕೊಡಿಸಿ ರೋಗಿಗಳಿಗೆ ಧೈರ್ಯವನ್ನು ತುಂಬಿ ಪುನಃ ಅವರನ್ನು ಅವರವರ ಮನೆಗೆ ತಂದು ಬಿಟ್ಟಿದ್ದಾರೆ. ಜಾತಿ, ಮತ, ಬೇಧ ಇಲ್ಲದೆ ಯಾರೇ ಆಗಲಿ ರೋಗಿಗಳು ಇವರನ್ನು ಸಂಪರ್ಕಿಸಿದರೆ ಕೂಡಲೇ ರೋಗಿಗಳ ಶುಶ್ರೂಷೆ ಮಾಡಿ ಅವರಿಗೆ ತಮ್ಮ ಕೈಲಾದ ಸಹಾಯವನ್ನು ಮಾಡುತ್ತಿರುವ ಇವರಿಗೆ ಈಗಾಗಲೇ ಹಲವು ಸಂಘ ಸಂಸ್ಥೆಗಳು ಸನ್ಮಾನ ಮಾಡಿ ಅಭಿನಂದಿಸಿವೆ. ಮುಂದೆಯೂ ಜನರ ಸೇವೆಯೇ ನನ್ನ ಗುರಿ ಎನ್ನುತ್ತಾರೆ ಸಾಬ ತಿಮ್ಮಯ್ಯ.

-ದುಗ್ಗಳ ಸದಾನಂದ