ಸೋಮವಾರಪೇಟೆ, ಜೂ. ೨೮: ಇಲ್ಲಿನ ಪಟ್ಟಣ ಪಂಚಾಯಿತಿ ವ್ಯಾಪ್ತಿ ಯಲ್ಲಿರುವ ಕರ್ಕಳ್ಳಿ ರುದ್ರಭೂಮಿ ಯಲ್ಲಿ ಜಾತಿಗೊಂದ ರಂತೆ ಸ್ಮಶಾನಗಳಿದ್ದು, ಸಾರ್ವಜನಿಕ ಸ್ಮಶಾನದಲ್ಲಿ ಯಾವುದೇ ಮೂಲ ಸೌಕರ್ಯಗಳಿಲ್ಲದೆ ಸಾರ್ವಜನಿಕರು ಸಮಸ್ಯೆ ಎದುರಿಸು ತ್ತಿದ್ದರು. ಇದನ್ನು ಮನಗಂಡ ರೋಟರಿ ಸಂಸ್ಥೆಯ ಪದಾ ಧಿಕಾರಿಗಳು ರೂ. ೨ಲಕ್ಷ ವೆಚ್ಚದಲ್ಲಿ ಸಿಲಿಕಾನ್ ಚೇಂಬರ್ ಅಳವಡಿಸುವ ಮೂಲಕ ಬಹುಕಾಲದ ಬೇಡಿಕೆಯನ್ನು ಈಡೇರಿಸಿದ್ದಾರೆ.

ಸಾರ್ವಜನಿಕ ಸ್ಮಶಾನದಲ್ಲಿ ಮೂಲಸೌಕರ್ಯ ಇಲ್ಲದ ಹಿನ್ನೆಲೆ ಸೌದೆ ಸಂಗ್ರಹ ಹಾಗೂ ಗುಂಡಿ ತೆಗೆಯಲು ಸಾಕಷ್ಟು ಸಮಸ್ಯೆಗಳಾಗು ತ್ತಿತ್ತು. ಮಳೆಗಾಲದಲ್ಲಿ ಅಂತ್ಯ ಸಂಸ್ಕಾರಕ್ಕೆ ಇನ್ನಿಲ್ಲದ ತೊಂದರೆ ಯಾಗುತ್ತಿತ್ತು. ಇದನ್ನು ಮನಗಂಡ ರೋಟರಿ ಸ್ವಯಂಸೇವಾ ಸಂಸ್ಥೆಯವರು ಪಟ್ಟಣಪಂಚಾಯ್ತಿ ವತಿಯಿಂದ ನಿರ್ಮಿಸುತ್ತಿರುವ ಹಿಂದೂ ರುದ್ರಭೂಮಿ ಮುಕ್ತಿ ಧಾಮಕ್ಕೆ ೨ ಲಕ್ಷ ರೂ. ವೆಚ್ಚದಲ್ಲಿ ಸಿಲಿಕಾನ್ ಚೇಂಬರ್ ಅಳವಡಿಸುವ ಮೂಲಕ ಸಮಾಜದಲ್ಲಿ ಮಾದರಿ ಕಾರ್ಯ ನೆರವೇರಿಸಿದ್ದಾರೆ.

(ಮೊದಲ ಪುಟದಿಂದ) ಸಾರ್ವಜನಿಕ ಸ್ಮಶಾನದಲ್ಲಿ ಅಳವಡಿಸಿರುವ ಸಿಲಿಕಾನ್ ಚೇಂಬರ್ ಉದ್ಘಾಟಿಸಿ ಮಾತನಾಡಿದ ಶಾಸಕ ಎಂ.ಪಿ. ಅಪ್ಪಚ್ಚುರಂಜನ್, ಸ್ಮಶಾನಗಳ ಅಭಿವೃದ್ಧಿಗೆ ದಾನಿಗಳು ಕೈಜೋಡಿಸುತಿರುವುದು ಶ್ಲಾಘನೀಯ. ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮೀಣ ಭಾಗಗಳ ಜನರು ಅಂತ್ಯಕ್ರಿಯೆಗೆ ಜಾಗವಿಲ್ಲದೆ ಪರದಾಡುವಂತಾಗಿತ್ತು. ರೋಟರಿ ಸಂಸ್ಥೆಯವರು ಮುಂದೆ ಬಂದು ಚಿತಾಗಾರ ಒದಗಿಸುವ ಮೂಲಕ ಜನಸಾಮಾನ್ಯರಿಗೆ ಅನುಕೂಲ ಕಲ್ಪಿಸಿದ್ದಾರೆ ಎಂದರು.

ಸ್ಮಶಾನದ ಸ್ಥಳದಲ್ಲಿ ಕುಡಿಯುವ ನೀರು ಸೇರಿದಂತೆ ಇತರ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿ, ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗುವುದು ಎಂದು ಭರವಸೆ ನೀಡಿದರು. ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ ಮಾತನಾಡಿ, ಮನುಷ್ಯ ಹುಟ್ಟುವಾಗ ಇಂತಹ ಜಾತಿಯಲ್ಲೇ ಹುಟ್ಟಬೇಕೆಂದು ಹುಟ್ಟುವುದಿಲ.್ಲ ಆದರೆ, ಸತ್ತನಂತರ ಯಾವ ಜಾತಿ ಎಂಬುದು ಇರುವುದಿಲ್ಲ. ಮೃತರಾದವರನ್ನು ವಿಧಿವಿಧಾನಗಳೊಂದಿಗೆ ಅಂತ್ಯ ಸಂಸ್ಕಾರ ಮಾಡಬೇಕು. ಆ ನಿಟ್ಟಿನಲ್ಲಿ ಸಾರ್ವಜನಿಕ ಸ್ಮಶಾನಗಳು ಅಭಿವೃದ್ಧಿಯಾಗಬೇಕು ಎಂದರು. ಕೊಡ್ಲಿಪೇಟೆ ಕಿರಿಕೊಡ್ಲಿ ಮಠಾಧೀಶರಾದ ಶ್ರೀ ಸದಾಶಿವಸ್ವಾಮೀಜಿ ಮಾತನಾಡಿ, ಮನುಷ್ಯ ಹುಟ್ಟಿದಾಗ ಒಂದು ಸಂಸ್ಕಾರ ನೀಡಿದರೆ, ಸತ್ತನಂತರ ಮತ್ತೊಂದು ಸಂಸ್ಕಾರ ನೀಡಿ ಅವರ ಆತ್ಮಕ್ಕೆ ಶಾಂತಿ ಸಿಗುವಂತೆ ಪ್ರಾರ್ಥಿಸ ಲಾಗುತ್ತದೆ. ಹಿಂದೂಧರ್ಮದಲ್ಲಿ ರುದ್ರಭೂಮಿಗೆ ಮಹತ್ತರವಾದ ಸ್ಥಾನವಿದೆ. ಮನುಷ್ಯ ತನ್ನ ಜೀವಿತಾವಧಿಯಲ್ಲಿ ಜಾತಿ, ಮತ, ಭೇದ ಮಾಡಿದರು ಕೊನೆಗೆ ಸೇರು ವುದು ಭೂಮಿಯನ್ನೇ ಆದ್ದರಿಂದ ಇದ್ದಷ್ಟು ದಿನ ಸಾಮರಸ್ಯದಿಂದ ಬಾಳಬೇಕು ಎಂದು ಅಭಿಪ್ರಾಯಿಸಿದರು.

ರೋಟರಿ ಸಂಸ್ಥೆಯ ಸಹಾಯಕ ರಾಜ್ಯಪಾಲ ಪಿ.ಕೆ. ರವಿ ಮಾತನಾಡಿ, ಸಾರ್ವಜನಿಕ ಸ್ಮಶಾನವಿಲ್ಲದೆ ಅಂತ್ಯಕ್ರಿಯೆಗೆ ತಮ್ಮ ಕುಟುಂಬವೇ ಪರದಾಡಿದ ನಿದರ್ಶನಗಳಿವೆ. ಮುಂದೆ ಯಾರಿಗೂ ಅಂತಹ ತೊಂದರೆ ಬರಬಾರದೆಂಬ ನಿಟ್ಟಿನಲ್ಲಿ, ಪಟ್ಟಣದ ಸುತ್ತಾಮುತ್ತ ಮೃತಪಟ್ಟವರ ಅಂತ್ಯಕ್ರಿಯೆಗೆ ಸಹಕಾರಿಯಾಗಲಿ ಎಂಬ ಉದ್ದೇಶದಿಂದ ರೋಟರಿ ಸಂಸ್ಥೆಯ ಸದಸ್ಯರೇ ದೇಣಿಗೆ ನೀಡಿ ಈ ಚಿತಾಗಾರ ನೀಡಿದ್ದೇವೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ಸಂಸ್ಥೆ ಅಧ್ಯಕ್ಷ ಲಿಖಿತ್ ದಾಮೋದರ್ ವಹಿಸಿದ್ದರು. ಪಟ್ಟಣ ಪಂಚಾಯಿತಿ ಪ್ರಭಾರ ಅಧ್ಯಕ್ಷ ಬಿ. ಸಂಜೀವ. ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಜಿ. ಮೇದಪ್ಪ, ಜಿ.ಪಂ. ಮಾಜಿ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ತಾ.ಪಂ.ಮಾಜಿ ಉಪಾಧ್ಯಕ್ಷ ಎಂ.ಬಿ. ಅಭಿಮನ್ಯು ಕುಮಾರ್, ತಹಶೀಲ್ದಾರ್ ಗೋವಿಂದರಾಜು, ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ನಾಚಪ್ಪ, ಸದಸ್ಯರು, ರೋಟರಿ ಪದಾಧಿಕಾರಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.