ಮಡಿಕೇರಿ, ಜೂ. ೨೮: ಕೊಡಗಿನಲ್ಲಿ ರೈತಪರ ಬ್ಯಾಂಕ್ ಆಗಿ ಆರಂಭಗೊAಡು ಇಲ್ಲಿನ ಸಹಕಾರಿ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರ ವಹಿಸಿರುವ ಜಿಲ್ಲಾ ಕೇಂದ್ರ ಸಹಕಾರ ಮಡಿಕೇರಿ, ಜೂ. ೨೮: ಕೊಡಗಿನಲ್ಲಿ ರೈತಪರ ಬ್ಯಾಂಕ್ ಆಗಿ ಆರಂಭಗೊAಡು ಇಲ್ಲಿನ ಸಹಕಾರಿ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರ ವಹಿಸಿರುವ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ನ ಮುಖ್ಯ ಕಚೇರಿ ಸೇರಿದಂತೆ ಇನ್ನಿತರ ಶಾಖಾ ಕಚೇರಿಗಳಲ್ಲಿ ಇದರ ಸಂಭ್ರಮಾಚರಣೆಯನ್ನು ಆಚರಿಸ ಲಾಯಿತು.

ಮಡಿಕೇರಿಯ ಮುಖ್ಯ ಕಚೇರಿಯಲ್ಲಿ ಬ್ಯಾಂಕ್‌ನ ಆಡಳಿತ ಮಂಡಳಿ ಅಧ್ಯಕ್ಷ ಕೊಡಂದೇರ ಬಾಂಡ್ ಗಣಪತಿ, ಉಪಾಧ್ಯಕ್ಷ ಕೇಟೋಳಿರ ಹರೀಶ್ ಪೂವಯ್ಯ, ನಿರ್ದೇಶಕ ಕಿಮ್ಮುಡಿರ ಜಗದೀಶ್ ಸೇರಿದಂತೆ ಬ್ಯಾಂಕ್‌ನ ಸಿಬ್ಬಂದಿಗಳು ಇತರ ಪ್ರಮುಖರು ಗಣಪತಿ ಹೋಮದೊಂದಿಗೆ ಕೇಕ್ ಕತ್ತರಿಸುವ ಮೂಲಕ ೧೦೦ರ ಸಂಭ್ರಮ ಆಚರಿಸಿದರು. ಕಾರ್ಯಕ್ರಮದಲ್ಲಿ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಆರ್.ಕೆ. ಬಾಲಚಂದ್ರ, ನಬಾರ್ಡ್ನ ಜಿಲ್ಲಾ ವ್ಯವಸ್ಥಾಪಕ ರಮೇಶ್ ಬಾಬು ಅವರು ಭಾಗಿಗಳಾಗಿದ್ದರು.

(ಮೊದಲ ಪುಟದಿಂದ) ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಪ್ರಥಮವಾಗಿ ಅಂದಿನ ಸಹಕಾರಿ ಚಿಂತಕರುಗಳಾದ ಕೊಡಂದೇರ ಕುಟ್ಟಯ್ಯ, ಪುಲಿಯಂಡ ತಿಮ್ಮಯ್ಯ, ಕುಪ್ಪಂಡ ಬೆಳ್ಯಪ್ಪ, ಉದಿಯಂಡ ಮಾಚಯ್ಯ ಇನ್ನಿತರ ಪ್ರಮುಖರ ಮುಂದಾಳತ್ವದಲ್ಲಿ ದಿನಾಂಕ ೨೮.೬.೧೯೨೧ ರಂದು ೪೫ ಸಹಕಾರ ಸಂಘಗಳು ಮತ್ತು ೧೬ ಬಿಡು ಸದಸ್ಯರುಗಳೊಂದಿಗೆ ಕೇವಲ ರೂ. ೪,೪೦೦ ಪಾಲು ಬಂಡವಾಳ ಮತ್ತು ರೂ. ೧೦,೦೦೦ ಠೇವಣಾತಿಯೊಂದಿಗೆ ಅಸ್ತಿತ್ವಕ್ಕೆ ಬಂದಿದೆ.

ಬ್ಯಾAಕಿನ ಸ್ಥಾಪಕ ಅಧ್ಯಕ್ಷರಾಗಿ ರಾವ್ ಬಹದ್ದೂರು ಕೊಡಂದೇರ ಕುಟ್ಟಯ್ಯ ಅವರು ೧೯೨೧ ರಿಂದ ೧೯೨೭ರ ವರೆಗೆ ಸೇವೆ ಸಲ್ಲಿಸಿರುತ್ತಾರೆ.

ಬ್ಯಾಂಕ್ ೧೦೦ನೇ ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಸ್ಥಾಪನಾ ದಿನಾಚರಣೆಯನ್ನು ಅದ್ಧೂರಿಯಾಗಿ ಆಚರಿಸಬೇಕೆಂದು ಉದ್ದೇಶಿಸಿದ್ದರೂ ಕೋವಿಡ್ ಹಿನ್ನೆಲೆಯಲ್ಲಿ ಸರಳವಾಗಿ ಸ್ಥಾಪನಾ ದಿನಾಚರಣೆಯನ್ನು ಆಚರಿಸಲಾಯಿತು.

ಬ್ಯಾಂಕ್ ಜಿಲ್ಲೆಯಾದ್ಯಂತ ಹೊಂದಿರುವ ೨೧ ಶಾಖೆಗಳಲ್ಲಿಯೂ ಕೇಕ್ ಕತ್ತರಿಸುವ ಮೂಲಕ ಗ್ರಾಹಕರಿಗೆ ಸಿಹಿಯನ್ನು ಹಂಚಿ ಶತಮಾನದ ಸಂಭ್ರಮಕ್ಕೆ ಚಾಲನೆಯನ್ನು ನೀಡಲಾಯಿತು.

ಈ ಸಂದರ್ಭದಲ್ಲಿ ಬ್ಯಾಂಕಿನ ಅಧ್ಯಕ್ಷ ಕೊಡಂದೇರ ಪಿ. ಗಣಪತಿ ಅವರು ಬ್ಯಾಂಕನ್ನು ಅಂದಿನ ದಿನಗಳಲ್ಲಿ ಸ್ಥಾಪಿಸಿದ ಸಹಕಾರಿಗಳನ್ನು ಅಂದಿನಿAದ ಇಂದಿನವರೆಗೆ ಆಡಳಿತ ನಡೆಸಿದ ಅಧ್ಯಕ್ಷರು, ಆಡಳಿತ ಮಂಡಳಿಯನ್ನು ಸ್ಮರಿಸಿ ಸಿಬ್ಬಂದಿಗಳು ಮತ್ತು ಗ್ರಾಹಕರ ಸಹಕಾರದಿಂದ ಬ್ಯಾಂಕ್ ೧೦೦ ವರ್ಷಗಳನ್ನು ಪೂರೈಸಲು ಸಾಧ್ಯವಾಯಿತೆಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಆಗಸ್ಟ್ ೨೦ ರಂದು ಸಾರ್ವಜನಿಕ ಕಾರ್ಯಕ್ರಮ

ಶತಮಾನೋತ್ಸವ ಸಂಭ್ರಮದ ವಿಜೃಂಭಣೆಯ ಸಾರ್ವಜನಿಕ ಕಾರ್ಯಕ್ರಮವನ್ನು ಮುಂದಿನ ಆಗಸ್ಟ್ ೨೦ ರಂದು ಆಚರಿಸಲಾಗುವುದು. ನೂತನವಾಗಿ ನಿರ್ಮಿಸಲು ಉದ್ದೇಶಿಸಿರುವ ಶತಮಾನೋತ್ಸವ ಕಟ್ಟಡಕ್ಕೆ ಭೂಮಿ ಪೂಜೆಯನ್ನು ರಾಜ್ಯದ ಸಹಕಾರ ಸಚಿವರು, ಜಿಲ್ಲೆಯ ಉಸ್ತುವಾರಿ ಸಚಿವರು, ಜಿಲ್ಲೆಯ ಶಾಸಕರು, ವಿಧಾನ ಪರಿಷತ್ ಸದಸ್ಯರು, ಜಿಲ್ಲೆಯ ಸಹಕಾರ ಸಂಘಗಳ ಪ್ರತಿನಿಧಿಗಳು, ಇಲಾಖಾಧಿಕಾರಿಗಳು, ಬ್ಯಾಂಕಿನ ನಿವೃತ್ತ ಮತ್ತು ಹಾಲಿ ಸಿಬ್ಬಂದಿಗಳ ಸಮ್ಮುಖದಲ್ಲಿ ನೆರವೇರಿಸುವುದರ ಮೂಲಕ ಅದ್ಧೂರಿ ಸಮಾರಂಭವನ್ನು ಏರ್ಪಡಿಸಿರುವುದಾಗಿ ಈ ಸಂದರ್ಭದಲ್ಲಿ ಅಧ್ಯಕ್ಷರು ತಿಳಿಸಿದರು.