ಮಡಿಕೇರಿ ಜೂ. ೨೭: ಪೊನ್ನಂಪೇಟೆ ಅರಣ್ಯ ಕಾಲೇಜಿನ ಸಹಯೋಗದಲ್ಲಿ ಸೈಕಲ್ ಪ್ಯೂರ್ ಅಗರಬತ್ತಿ ಸಂಸ್ಥೆ ಕೊಡಗು ಜಿಲ್ಲೆಯ ರೈತರಿಗೆ ಜಿಗಟು ಮರದ ಸಸಿಗಳನ್ನು ವಿತರಿಸಿತು.
ವೈವಿಧ್ಯತೆಯ ಕೃಷಿ ವ್ಯವಸ್ಥೆಗೆ ಪ್ರೋತ್ಸಾಹ ನೀಡಲು, ಕೃಷಿ ಭೂಮಿಯಲ್ಲಿ ಮರಗಳ ಸಂಖ್ಯೆ ಹೆಚ್ಚಿಸಲು ಮತ್ತು ಅರಣ್ಯ ಸಂರಕ್ಷಣೆಗಾಗಿ ಈ ಕೃಷಿ ಅರಣ್ಯ ಉಪಕ್ರಮವನ್ನು ಕೈಗೊಳ್ಳಲಾಗಿದೆ ಎಂದು ಸಂಸ್ಥೆಯ ಪ್ರಮುಖರು ತಿಳಿಸಿದರು.
ಪೊನ್ನಂಪೇಟೆ ಅರಣ್ಯ ಕಾಲೇಜಿನ ಡೀನ್ ಡಾ.ಕುಶಾಲಪ್ಪ, ವೃಕ್ಷ ಪಾಲನೆ ವಿಭಾಗದ ಮುಖ್ಯಸ್ಥ ರಾಮಕೃಷ್ಣ ಹೆಗ್ಡೆ, ಸೈಕಲ್ ಪ್ಯೂರ್ ಅಗರಬತ್ತಿ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಎಂ.ಆರ್. ಅವರುಗಳು ಸಾಂಕೇತಿಕವಾಗಿ ರೈತ ರವಿ ಅವರಿಗೆ ಜಿಗಟು ಮರದ ಸಸಿ ನೀಡಿದರು.