* ಸೋಂಕಿನ ಪ್ರಮಾಣ ಹೆಚ್ಚಳ * ಕಾರ್ಮಿಕ ವಲಯದಲ್ಲಿ ಹೆಚ್ಚಾಗಿ ಕಂಡುಬರುತ್ತಿರುವ ಸೋಂಕು

(ಹೆಚ್.ಜೆ. ರಾಕೇಶ್)

ಮಡಿಕೇರಿ, ಜೂ. ೨೭: ಇಡೀ ಜಗತ್ತನ್ನು ಅಲ್ಲೋಲಕಲ್ಲೋಲ ಮಾಡಿರುವ ಕ್ರೂರಿ ಕೊರೊನಾ, ಕೊಡಗು ಜಿಲ್ಲೆಯನ್ನು ಕೂಡ ಹಿಂಡಿ ಹಿಪ್ಪೆ ಮಾಡಿದೆ. ಕೊರೊನಾ ಮಟ್ಟಹಾಕಲು ಲಾಕ್‌ಡೌನ್, ಬಿಗಿ ನಿಯಮಗಳು ಜಾರಿಯಾದರೂ ಕೂಡ ಜಿಲ್ಲೆಯಲ್ಲಿ ಮಾತ್ರ ಕೊರೊನಾ ಸೋಂಕಿನ ಪ್ರಮಾಣ ಹಾಗೂ ಪಾಸಿಟಿವಿಟಿ ರೇಟ್ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಾ ಹತೋಟಿಗೆ ಬಾರದೆ ಜನರನ್ನು ಕಂಗಾಲು ಮಾಡಿದೆ.

ಕಳೆದ ಒಂದು ತಿಂಗಳಿನಿAದ ಕೊರೊನಾ ಪೂರ್ಣ ನಿಯಂತ್ರಣಕ್ಕೆ ಬರುತ್ತಿಲ್ಲ. ಜಿಲ್ಲೆಯ ಅಷ್ಟ ದಿಕ್ಕುಗಳಿಗೂ ವ್ಯಾಪಿಸಿರುವ ಮಹಾಮಾರಿ ಕಾಟ ಒಂದು ದಿನ ಕಡಿಮೆಯಾದಂತೆ ಕಂಡುಬAದರೂ, ದಿಢೀರ್ ಏರಿಕೆ ಆಗುತ್ತಿದೆ. ಒಟ್ಟಾರೆ ಜಿಲ್ಲೆಯಲ್ಲಿ ಕೊರೊನಾ ಜನರನ್ನು ಆಟಾಡಿಸುತ್ತಿದೆ. ಕಾರ್ಮಿಕ ವಲಯದಲ್ಲಿ ಕೊರೊನಾ ಸೋಂಕಿನ ಪ್ರಮಾಣ ಹೆಚ್ಚಾಗಿ ಕಂಡುಬರುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ.

ದುಪ್ಪಟ್ಟು ಪರೀಕ್ಷೆ: ಈ ಹಿಂದೆ ದಿನನಿತ್ಯ ಒಂದು ಸಾವಿರದಿಂದ ಸಾವಿರದ ಐನ್ನೂರು ಮಂದಿಗೆ ಕೊರೊನಾ ಪರೀಕ್ಷೆ ನಡೆಸಲಾಗುತ್ತಿತ್ತು. ಆದರೆ, ಕಳೆದ ೧೫ ದಿನಗಳಿಂದ ಪರೀಕ್ಷೆಯನ್ನು ದುಪ್ಪಟ್ಟು ಗೊಳಿಸಲಾಗಿದೆ. ಸೋಂಕಿತರನ್ನು ಕ್ವಾರಂಟೈನ್, ಐಸೋಲೇಷನ್ ಮಾಡಲಾಗುತ್ತಿದೆ. ಮೈಕ್ರೋ ಕಂಟೈನ್ಮೆAಟ್, ಕಂಟೈನ್‌ಮೆAಟ್ ಝೋನ್ ಮಾಡುವ ಬದಲು ಸೋಂಕಿತರಿರುವ ಇಡೀ ಪ್ರದೇಶವನ್ನು (ಹೆಚ್.ಜೆ. ರಾಕೇಶ್)

ಮಡಿಕೇರಿ, ಜೂ. ೨೭: ಇಡೀ ಜಗತ್ತನ್ನು ಅಲ್ಲೋಲಕಲ್ಲೋಲ ಮಾಡಿರುವ ಕ್ರೂರಿ ಕೊರೊನಾ, ಕೊಡಗು ಜಿಲ್ಲೆಯನ್ನು ಕೂಡ ಹಿಂಡಿ ಹಿಪ್ಪೆ ಮಾಡಿದೆ. ಕೊರೊನಾ ಮಟ್ಟಹಾಕಲು ಲಾಕ್‌ಡೌನ್, ಬಿಗಿ ನಿಯಮಗಳು ಜಾರಿಯಾದರೂ ಕೂಡ ಜಿಲ್ಲೆಯಲ್ಲಿ ಮಾತ್ರ ಕೊರೊನಾ ಸೋಂಕಿನ ಪ್ರಮಾಣ ಹಾಗೂ ಪಾಸಿಟಿವಿಟಿ ರೇಟ್ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಾ ಹತೋಟಿಗೆ ಬಾರದೆ ಜನರನ್ನು ಕಂಗಾಲು ಮಾಡಿದೆ.

ಕಳೆದ ಒಂದು ತಿಂಗಳಿನಿAದ ಕೊರೊನಾ ಪೂರ್ಣ ನಿಯಂತ್ರಣಕ್ಕೆ ಬರುತ್ತಿಲ್ಲ. ಜಿಲ್ಲೆಯ ಅಷ್ಟ ದಿಕ್ಕುಗಳಿಗೂ ವ್ಯಾಪಿಸಿರುವ ಮಹಾಮಾರಿ ಕಾಟ ಒಂದು ದಿನ ಕಡಿಮೆಯಾದಂತೆ ಕಂಡುಬAದರೂ, ದಿಢೀರ್ ಏರಿಕೆ ಆಗುತ್ತಿದೆ. ಒಟ್ಟಾರೆ ಜಿಲ್ಲೆಯಲ್ಲಿ ಕೊರೊನಾ ಜನರನ್ನು ಆಟಾಡಿಸುತ್ತಿದೆ. ಕಾರ್ಮಿಕ ವಲಯದಲ್ಲಿ ಕೊರೊನಾ ಸೋಂಕಿನ ಪ್ರಮಾಣ ಹೆಚ್ಚಾಗಿ ಕಂಡುಬರುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ.

ದುಪ್ಪಟ್ಟು ಪರೀಕ್ಷೆ: ಈ ಹಿಂದೆ ದಿನನಿತ್ಯ ಒಂದು ಸಾವಿರದಿಂದ ಸಾವಿರದ ಐನ್ನೂರು ಮಂದಿಗೆ ಕೊರೊನಾ ಪರೀಕ್ಷೆ ನಡೆಸಲಾಗುತ್ತಿತ್ತು. ಆದರೆ, ಕಳೆದ ೧೫ ದಿನಗಳಿಂದ ಪರೀಕ್ಷೆಯನ್ನು ದುಪ್ಪಟ್ಟು ಗೊಳಿಸಲಾಗಿದೆ. ಸೋಂಕಿತರನ್ನು ಕ್ವಾರಂಟೈನ್, ಐಸೋಲೇಷನ್ ಮಾಡಲಾಗುತ್ತಿದೆ. ಮೈಕ್ರೋ ಕಂಟೈನ್ಮೆAಟ್, ಕಂಟೈನ್‌ಮೆAಟ್ ಝೋನ್ ಮಾಡುವ ಬದಲು ಸೋಂಕಿತರಿರುವ ಇಡೀ ಪ್ರದೇಶವನ್ನು ತಾ. ೧೮ ರಂದು ೧೬೨ (೯.೨%), ತಾ. ೧೯ ರಂದು ೮೮ (೪.೧%), ತಾ.೨೦ ರಂದು ೧೮೪ (೧೧.೮೪%), ತಾ. ೨೧ ರಂದು ೧೯೧ (೧೫.೭೫%), ತಾ.೨೨ ರಂದು ೧೫೩ (೭.೩೦%), ತಾ.೨೩ ರಂದು ೯೩ (೩.೯೧%), ತಾ. ೨೪ ರಂದು ೧೨೨ (೫.೯%), ತಾ. ೨೫ ರಂದು ೧೭೬ (೮.೫%), ತಾ. ೨೬ ರಂದು ೧೩೧ (೫.೭೮%), ತಾ. ೨೭ ರಂದು ೧೯೬ (೮.೨೨%) ಹೊಸ ಕೊರೊನಾ ಪ್ರಕರಣಗಳು ದೃಢಪಟ್ಟಿವೆ.

ಪ್ರಾಥಮಿಕ ಸಂಪರ್ಕಿತರಲ್ಲಿ ಸೋಂಕು

ಕೊರೊನಾ ಸೋಂಕು ದೃಢಪಟ್ಟ ವ್ಯಕ್ತಿಯ ಪ್ರಾಥಮಿಕ ಸಂಪರ್ಕದಲ್ಲಿದ್ದ ಹಲವರಿಗೆ ಪರೀಕ್ಷೆ ನಡೆಸಿದಾಗ ಕೊರೊನಾ ಸೋಂಕು ದೃಢಪಡುತ್ತಿರುವುದು ಕೊರೊನಾ ಸೋಂಕು ಹೆಚ್ಚಳಕ್ಕೆ ಕಾರಣವಾಗಿದೆ.

ಸೋಂಕು ದೃಢಪಟ್ಟ ವ್ಯಕ್ತಿಯ ಪ್ರಾಥಮಿಕ ಸಂಪರ್ಕಿತರಲ್ಲಿ ಬಹುತೇಕರು ಲಕ್ಷಣ ರಹಿತರು ಆಗಿದ್ದು, ಅವರನ್ನು ಪರೀಕ್ಷೆಗೆ ಒಳಪಡಿಸಿದಾಗ ಕೊರೊನಾ ಪಾಸಿಟಿವ್ ಬರುತ್ತಿರುವುದು ಆತಂಕಕಾರಿ ವಿಚಾರವಾಗಿದೆ. ಕೆಲವೆಡೆ ಸೋಂಕಿತರು ಕ್ವಾರಂಟೈನ್ ನಲ್ಲಿರದೆ ನಿಯಮ ಉಲ್ಲಂಘಿಸಿ ಸಂಚಾರ ಮಾಡುತ್ತಿರುವುದರಿಂದ ಸೋಂಕು ಹಬ್ಬಲು ಕಾರಣವಾಗಿವೆೆ.

ಏತನ್ಮಧ್ಯೆ ಜಿಲ್ಲೆಯಲ್ಲಿ ತೋಟ ಕಾರ್ಮಿಕರು ಹೆಚ್ಚಾಗಿ ಕೊರೊನಾ ಸೋಂಕಿಗೆ ತುತ್ತಾಗುತ್ತಿದ್ದಾರೆ. ಎಸ್ಟೇಟ್, ಲೈನ್‌ಮನೆಗಳಲ್ಲಿ ವಾಸಿಸುತ್ತಿರುವವರಲ್ಲಿ ಕೊರೊನಾ ಪತ್ತೆಯಾಗುತ್ತಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮೋಹನ್ ‘ಶಕ್ತಿ’ಗೆ ತಿಳಿಸಿದ್ದಾರೆ.