ಚೆಟ್ಟಳ್ಳಿ, ಜೂ. ೨೭: ಕೊಡಗಿನ ಫುಟ್ಬಾಲ್ ಪ್ರಿಯರಿಗೊಂದು ಹೆಮ್ಮೆ ಯ ವಿಷಯ. ಜಿಲ್ಲೆಯ ಕೊಡಗು ಫುಟ್ಬಾಲ್ ಕ್ಲಬ್ ಬೆಂಗಳೂರಿನ ಸೂಪರ್ ಡಿವಿಷನ್ ಲೀಗ್‌ಗೆ ಪ್ರವೇಶ ಪಡೆದಿದೆ.

ಕೊಡಗು ಜಿಲ್ಲೆಯಲ್ಲಿ ದಿನೇದಿನೇ ಫುಟ್ಬಾಲ್ ಪ್ರಿಯರ ಮತ್ತು ಆಟಗಾರರ ಸಂಖ್ಯೆ ಹೆಚ್ಚಾಗುತ್ತಿದೆ. ಜಿಲ್ಲೆಯ ಹಲವು ಕಡೆಗಳಲ್ಲಿ ಪ್ರತಿವರ್ಷ ಫುಟ್ಬಾಲ್ ಪಂದ್ಯಾಟಗಳನ್ನು ಆಯೋಜಿಸ ಲಾಗುತ್ತಿದೆ ಆದರೆ ಸ್ಥಳೀಯ ಪ್ರತಿಭೆಗಳು ಮುಂದಿನ ಅವಕಾಶ ವಂಚಿತರಾಗಿ ಇಲ್ಲಿಯೇ ಕಮರಿ ಹೋಗುತ್ತಿದ್ದಾರೆ.

ಇದನ್ನು ಮನಗಂಡ ಕುಶಾಲನಗರದ ಬಳಿ ಗುಡ್ಡೆಹೊಸೂರು ಗ್ರಾಮದಲ್ಲಿರುವ ಐ.ಎನ್.ಎಸ್ ಕ್ರೀಡಾ ಸಂಸ್ಥೆಯವರು ೨೦೨೦-೨೧ರ ಸಾಲಿನಲ್ಲಿ ಕೊಡಗು ಫುಟ್ಬಾಲ್ ಕ್ಲಬ್ ತಂಡವನ್ನು ಕಟ್ಟಿ ಪ್ರತಿಭಾವಂತ ಆಟಗಾರರಿಗೆ ಬೆಂಗಳೂರಿನ ಸಿ ಡಿವಿಷನ್ ಪಂದ್ಯಾಟದಲ್ಲಿ ಪಾಲ್ಗೊಳ್ಳಲು ಅವಕಾಶವನ್ನು ಕಲ್ಪಿಸಿ ಕೊಟ್ಟರು. ೨೦೨೦-೨೧ರ ಸಾಲಿನಲ್ಲಿ ಬೆಂಗಳೂರಿ ನಲ್ಲಿ ನಡೆದ ಪಂದ್ಯಗಳಲ್ಲಿ ಕೊಡಗು ಫುಟ್ಬಾಲ್ ಕ್ಲಬ್ ತಂಡದ ಆಟಗಾರರು ಅದ್ಭುತ ಪ್ರದರ್ಶನ ನೀಡಿದರು. ಇದನ್ನು ಗಮನಿಸಿದ ರಾಜ್ಯ ಫುಟ್ಬಾಲ್ ಸಂಸ್ಥೆಯವರು ಬೆಂಗಳೂರು ಸೂಪರ್ ಡಿವಿಜನ್ ಪಂದ್ಯಾಟದಲ್ಲಿ ಭಾಗವಹಿಸಲು ಆಹ್ವಾನ ನೀಡಿದ ಮೇರೆ ಕೊಡಗು ಫುಟ್ಬಾಲ್ ಕ್ಲಬ್ ಇದೀಗ ತಾ. ೨೪ ರಂದು ಬೆಂಗಳೂರು ಸೂಪರ್ ಡಿವಿಜನ್‌ನಲ್ಲಿ ಭಾಗವಹಿಸಲು ನೋಂದಾಯಿತವಾಗಿದೆ ಎಂದು ಐಚೆಟ್ಟಿರ ನರೇನ್ ಸುಬ್ಬಯ್ಯ (ಐ.ಎನ್.ಎಸ್) ಕ್ರೀಡಾ ಸಂಸ್ಥೆಯ ಸಂಸ್ಥಾಪಕ ಐಚೆಟ್ಟಿರ ಪೊನ್ನಪ್ಪ ತಿಳಿಸಿದ್ದಾರೆ.

ಬೆಂಗಳೂರಿನ ಸೂಪರ್ ಡಿವಿಷನ್ ಲೀಗ್, ಕೋಲ್ಕತ್ತಾದ ಲೀಗ್ ಪಂದ್ಯಾವಳಿಗೆ ಸಮಾನವಾಗಿದ್ದು, ಸಂತೋಷ್ ಟ್ರೋಫಿ , ಐ-ಲೀಗ್, ಐಎಸ್‌ಎಲ್ ಮತ್ತು ರಾಷ್ಟಿçÃಯ ತಂಡಗಳಲ್ಲಿ ಆಟಗಾರರನ್ನು ನೇಮಿಸಿ ಕೊಳ್ಳಲು ಬರುವ ಪ್ರತಿಷ್ಠಿತ ಸ್ಕೌಟ್ಸ್ (ಆಯ್ಕೆಗಾರರ) ಗಮನ ಸೆಳೆಯುತ್ತದೆ. ನಾವು ಯಾವಾಗಲೂ ಜಿಲ್ಲೆಯಿಂದ ಪ್ರತಿಭಾವಂತ ಆಟಗಾರರನ್ನು ಆ ವೇದಿಕೆಯಲ್ಲಿ ತೊಡಗಿಸಲು ಬಯಸಿದ್ದೆವು . ಇಂದು ಆ ವೇದಿಕೆಗೆ ನಾವು ಸೇರಿರುವುದು ಸಂತೋಷ ವಾಗಿದೆ. ಅನೇಕರ ಸಹಾಯವಿಲ್ಲದೆ ಇದು ಖಂಡಿತವಾಗಿಯೂ ಸಾಧ್ಯ ವಾಗುತ್ತಿರಲಿಲ್ಲ. ಕ್ರೀಡಾ ಅಭಿಮಾನಿ ಗಳಿಂದ ತುಂಬಿದ ಕೊಡಗು ಜಿಲ್ಲೆಗೆ ಫುಟ್ಬಾಲ್ನಲ್ಲಿ ಇದುವರೆಗೆ ಸೂಕ್ತ ವೇದಿಕೆ ಇರಲಿಲ್ಲ ಅದನ್ನೀಗ ಐ.ಎನ್.ಎಸ್ ಕ್ರೀಡಾಸಂಸ್ಥೆ ತುಂಬಿ ಕೊಟ್ಟಿದೆ. ಉತ್ತಮ ಪ್ರತಿಭೆಗಳು ಇದರ ಸದುಪಯೋಗ ಪಡೆದುಕೊಳ್ಳುವಂತೆ ಐಚೆಟ್ಟೀರ ಪೊನ್ನಪ್ಪ ನವರು ಕೋರಿದ್ದಾರೆ.

ಐಎನ್‌ಎಸ್ ಕ್ರೀಡಾಸಂಸ್ಥೆ ಮುಂದಕ್ಕೆ ಬೆಂಗಳೂರು ಡಿವಿಷನ್ ಮಟ್ಟದಲ್ಲಿ ಆಡಲು ಎರಡು ತಂಡಗಳನ್ನು ಹೊಂದಿರುತ್ತದೆ. ಕೊಡಗು ಫುಟ್ಬಾಲ್ ಕ್ಲಬ್, ಸೂಪರ್ ಡಿವಿಷನ್ ಮಟ್ಟದಲ್ಲಿ ಹಾಗೂ ಕೊಡಗು ಕೋಲ್ಸ್÷್ಟ (ಅಔಐಖಿS) ಬೆಂಗಳೂರಿನ ಸಿ ಡಿವಿಜನ್ ಮಟ್ಟದಲ್ಲಿ ಆಡುತ್ತದೆ. ಕೊಡಗು ಕೋಲ್ಟ್÷್ಸನ ಅಂಡರ್ ಟ್ವೆಂಟಿ ತಂಡವಾಗಿದ್ದು, ಇದರ ಆಟಗಾರರು ಮುಂದೆ ಸೂಪರ್ ಡಿವಿಷನ್ ತಂಡಕ್ಕೆ ಬೆಳೆಯಬೇಕಿದೆ. ಇದು ನಮ್ಮ ಮುಂದಿರುವ ಗುರಿ ಎಂದು ಪೊನ್ನಪ್ಪ ಅವರು ತಿಳಿಸಿದ್ದಾರೆ.

ಎರಡು ತಂಡಗಳು ಸೇರಿ ೪೦ ಆಟಗಾರರಿಗೆ ಅವಕಾಶವಿದೆ. ಪೂರ್ತಿ ತಂಡವನ್ನು ಜಿಲ್ಲೆಯಿಂದಲೇ ಆಯ್ಕೆ ಮಾಡಿಕೊಳ್ಳುವುದು ನಮ್ಮ ಉದ್ದೇಶ. ಇದು ಸಾಧ್ಯವಾಗದಿದ್ದಲ್ಲಿ ಹೊರಗಿನಿಂದ ಕೆಲವರನ್ನು ಆಯ್ಕೆ ಮಾಡಿಕೊಳ್ಳ ಲಾಗುವುದು. ಮುಂದಿನ ದಿನಗಳಲ್ಲಿ ತಂಡದ ಎಲ್ಲಾ ಆಟಗಾರರು ಜಿಲ್ಲೆಯವರೇ ಆಗಿರುವಂತೆ ಶ್ರಮವಹಿಸಲಾಗುವುದು ಎಂಬ ಆಶಾಭಾವನೆ ವ್ಯಕ್ತಪಡಿಸಿದ್ದಾರೆ .

ಈ ದಿಶೆಯಲ್ಲಿ ಬೆಳೆಯಲು ಬಯಸುವವರು ಅಭ್ಯಾಸವನ್ನು ಈಗಿನಿಂದಲೇ ಪ್ರಾರಂಭಿಸಿ ಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಕೋರಲಾಗಿದೆ. ಹೆಚ್ಚಿನ ವಿವರಗಳನ್ನು ಐ.ಎನ್.ಎಸ್ ಕ್ರೀಡಾ ಸಂಸ್ಥೆಯ ಕಚೇರಿಯಲ್ಲಿ ಪಡೆದುಕೊಳ್ಳಬಹುದು. ಅಥವಾ ಮೊಬೈಲ್ ನಂಬರ್ ೯೮೪೫೦೦೨೭೩೭ , ೯೮೮೦೫೭೮೫೫೪ ಅಲ್ಲಿ ಸಂಪರ್ಕಿಸಬಹುದೆAದು ಕ್ರೀಡಾ ಸಂಸ್ಥೆ ಯ ಸಂಸ್ಥಾಪಕ ಐಚೆಟ್ಟಿರ ಪೊನ್ನಪ್ಪ ತಿಳಿಸಿದ್ದಾರೆ.

-ಕರುಣ್ ಕಾಳಯ್ಯ