ಮಡಿಕೇರಿ, ಜೂ. ೨೭: ಅತ್ಯಂತ ಎತ್ತರದ ಕ್ಯಾಕ್ಟಸ್ (ಕಳ್ಳಿ) ಗಿಡ ಬೆಳೆಯುವ ಮೂಲಕ ೧೯೮೮ರಲ್ಲಿ ಗಿನ್ನಿಸ್ ಬುಕ್ ದಾಖಲೆ ಬರೆದಿದ್ದ ಜಿಲ್ಲೆಯವರಾದ ಮೈಸೂರು ನಿವಾಸಿಯಾಗಿದ್ದ ಅಕ್ಕಪಂಡ ಕಾಶಿ ಕುಟ್ಟಪ್ಪ (೭೬) ಅವರು ತಾ.೨೭ರಂದು ನಿಧನರಾದರು. ಕಾಶಿ ಕುಟ್ಟಪ್ಪ ಅವರು ಮೈಸೂರಿನ ಸಿದ್ದಾರ್ಥ ನಗರದ ತಮ್ಮ ನಿವಾಸದ ಎದುರು ೪೪ ಅಡಿ ಎತ್ತರದ ಕ್ಯಾಕ್ಟಸ್ ಗಿಡ ಬೆಳೆದಿದ್ದು, ಇದು ದಾಖಲೆಯಾಗಿತ್ತು.