ಸೋಮವಾರಪೇಟೆ,ಜೂ.೨೭: ಇಲ್ಲಿನ ಕರ್ಕಳ್ಳಿ ಸಾರ್ವಜನಿಕ ರುದ್ರಭೂಮಿಯಲ್ಲಿ ಸಿಲಿಕಾನ್ ಚೇಂಬರ್ ಅಳವಡಿಕೆಯ ಕಾಮಗಾರಿಗೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ರೂ. ೨.೫೦ಲಕ್ಷ ನೆರವಿನ ಚೆಕ್ ಹಸ್ತಾಂತರಿಸಲಾಯಿತು.

ಸೋಮವಾರಪೇಟೆಯ ಲಯನ್ಸ್ ಕ್ಲಬ್ ಮೂಲಕ ಸಿಲಿಕಾನ್ ಚೇಂಬರ್ ಅಳವಡಿಸುವ ಕಾಮಗಾರಿ ನಡೆಯುತ್ತಿದ್ದು, ಧರ್ಮಸ್ಥಳದಿಂದಲೂ ಅನುದಾನ ನೀಡಲಾಗಿದೆ ಎಂದು ಯೋಜನೆಯ ಜಿಲ್ಲಾ ನಿರ್ದೇಶಕ ಡಾ. ಯೋಗೇಶ್ ತಿಳಿಸಿದರು.

ಸುಮಾರು ೧.೩೦ಲಕ್ಷ ವೆಚ್ಚದ ಸಿಲಿಕಾನ್ ಚೇಂಬರ್, ೧.೨೦ ಲಕ್ಷ ವೆಚ್ಚದ ಚಿತಾಗಾರ ನಿರ್ಮಾಣಕ್ಕೆ ಯೋಜನೆಯಿಂದ ೨.೫೦ ಲಕ್ಷ ನೀಡಲಾಯಿತು. ಯೋಜನೆಯಿಂದ ಬಿಡುಗಡೆಯಾದ ಅನುದಾನದ ಚೆಕ್‌ನ್ನು ಡಾ. ಯೋಗೇಶ್, ತಾಲೂಕು ಯೋಜನಾಧಿಕಾರಿ ಜಯಂತಿ, ಮೇಲ್ವಿಚಾರಕ ಕೇಶವ, ಪ್ರಸನ್ನ ಅವರುಗಳು, ಲಯನ್ಸ್ ಕ್ಲಬ್ ಅಧ್ಯಕ್ಷ ಕೆ.ಎನ್. ತೇಜಸ್ವಿ ಅವರಿಗೆ ಹಸ್ತಾಂತರಿಸಿದರು.

ಈ ಸಂದರ್ಭ ಲಯನ್ಸ್ ಕಾರ್ಯದರ್ಶಿ ಸಿ.ಕೆ. ರೋಹಿತ್, ಖಜಾಂಚಿ ಎಸ್.ಎನ್. ಯೋಗೇಶ್, ನಿಕಟಪೂರ್ವ ಅಧ್ಯಕ್ಷ ಎಂ.ಎ. ಹರೀಶ್, ಪದಾಧಿಕಾರಿಗಳಾದ ಕೆ.ಎಂ. ಜಗದೀಶ್, ಸಿ.ಕೆ. ಮಲ್ಲಪ್ಪ, ಎಸ್.ಬಿ. ಲೀಲಾರಾಂ, ಮಂಜುನಾಥ್ ಚೌಟ, ರಾಜಾರಾಮ್, ಶಶಿಕಲಾ ಸೇರಿದಂತೆ ಇತರರು ಹಾಜರಿದ್ದರು.