ಮಡಿಕೇರಿ, ಜೂ. ೨೬: ಬಹಳಷ್ಟು ವರ್ಷಗಳಿಂದ ಚಾಲ್ತಿಯಲ್ಲಿದ್ದ ಪೊಲೀಸ್ ತುರ್ತು ಸಂಖ್ಯೆಯಾದ ೧೦೦ ಇದೀಗ ನಿಷ್ಕಿçಯಗೊಂಡಿದ್ದು, ಇನ್ನು ಮುಂದೆ ೧೧೨ ಸಂಖ್ಯೆ ಮಾತ್ರ ಚಾಲ್ತಿಯಲ್ಲಿರಲಿದೆ. ಪೊಲೀಸ್, ಅಗ್ನಿಶಾಮಕದಳ ಹಾಗೂ ಆ್ಯಂಬುಲೆನ್ಸ್ಗಳೆಲ್ಲವೂ ೧೧೨ರ ಮೂಲಕ ಲಭ್ಯವಾಗಲಿದೆ.
ಜಿಲ್ಲೆಯಲ್ಲಿ ೧೧೨ ಸಂಖ್ಯೆ ಇದುವರೆಗೆ ೪೦೦ ಕ್ಕೂ ಅಧಿಕ ವಿವಿಧ ರೀತಿಯ ಪ್ರಕರಣಗಳಲ್ಲಿ ಸಾರ್ವಜನಿಕರಿಗೆ ಸಹಾಯವಾಗಿದೆ. ಕೌಟುಂಬಿಕ ಕಲಹ, ಕಳ್ಳತನ, ಪಾನಮತ್ತ ವ್ಯಕ್ತಿಯ ಗಲಾಟೆ, ಲಾಕ್‌ಡೌನ್ ನಿಯಮ ಉಲ್ಲಂಘನೆ, ಸಾರ್ವಜನಿಕ ಸ್ಥಳದಲ್ಲಿ ಅಶಾಂತಿ ಸೃಷ್ಟಿಸುವುದು ಇಂತಹ ಬಹಳಷ್ಟು ಘಟನೆಗಳ ಸಂದರ್ಭ ಸಾರ್ವಜನಿಕರು ೧೧೨ ಕ್ಕೆ ಕರೆ ಮಾಡಿದ್ದು, ತುರ್ತು ಸ್ಪಂದನ ತಂಡ ಪ್ರಕರಣಗಳನ್ನು ದಾಖಲಿಸಲು, ಸಮಸ್ಯೆಗಳನ್ನು ಬಗೆಹರಿಸಲು ಸಹಾಯ ಮಾಡಿದೆ.