ಮಡಿಕೇರಿ, ಜೂ. ೨೬: ಸೈನಿಕರು-ಮಾಜಿ ಸೈನಿಕರುಗಳಿಗೆ ವ್ಯವಸಾಯದ ಉದ್ದೇಶಗಳಿಗಾಗಿ ಸರಕಾರಿ ಜಮೀನನ್ನು ಮಂಜೂರು ಮಾಡುವ ವಿಷಯಕ್ಕೆ ಸಂಬAಧಿಸಿದAತೆ ಸರಕಾರದ ಕಂದಾಯ ಇಲಾಖೆಯ ಮೂಲಕ ನೂತನ ಸುತ್ತೋಲೆಯೊಂದನ್ನು ಹೊರಡಿಸಲಾಗಿದೆ. ಈ ವಿಚಾರಕ್ಕೆ ಸಂಬAಧಿಸಿದAತೆ ನಿಯಮಾನುಸಾರವಾಗಿ ಸೂಕ್ತ ಕ್ರಮವಹಿಸಲು ನಿರ್ದೇಶನ ನೀಡಲಾಗಿದ್ದು, ಇದರಲ್ಲಿ ಲೋಪವಾದಲ್ಲಿ ಶಿಸ್ತುಕ್ರಮದ ಎಚ್ಚರಿಕೆಯನ್ನೂ ನೀಡಲಾಗಿದೆ.
ಈ ಬಗ್ಗೆ ತಾ. ೨೪ ರಂದು ಕಂದಾಯ ಇಲಾಖೆಯ ಸರಕಾರದ ಪ್ರಧಾನ ಕಾರ್ಯದರ್ಶಿ ಎಸ್. ಮಂಜುನಾಥ್ ಪ್ರಸಾದ್ ಆದೇಶ ಹೊರಡಿಸಿದ್ದು, ಇದರ ಪೂರ್ಣ ವಿವರ ಈ ಕೆಳಗಿನಂತಿದೆ.
ಸುತ್ತೋಲೆಯಲ್ಲಿನ ಅಂಶಗಳು
ಸೈನಿಕ, ಮಾಜಿ ಸೈನಿಕರುಗಳಿಗೆ ಭೂಮಿ ಮಂಜೂರು ಮಾಡುವಲ್ಲಿ ನಿರ್ಲಕ್ಷö್ಯ ವಹಿಸುತ್ತಿರುವ ಬಗ್ಗೆ ಹಾಗೂ ಇಂತಹ ಅನೇಕ ಪ್ರಕರಣಗಳು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಬಾಕಿ ಇರುವುದರಿಂದ ಕೆಲವು ಅರ್ಜಿದಾರರುಗಳು ಉಚ್ಚ ನ್ಯಾಯಾಲಯದಲ್ಲಿ ಮೊಕದ್ದಮೆಗಳನ್ನು ದಾಖಲಿಸಿರುತ್ತಾರೆ ಹಾಗೂ ಇಂತಹ ಬಹಳಷ್ಟು ಪ್ರಕರಣಗಳು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಬಾಕಿ ಉಳಿದಿರುವುದನ್ನು ನ್ಯಾಯಾಲಯವು ಗಂಭೀರವಾಗಿ ಗಮನಿಸಿರುತ್ತದೆ.
ಕರ್ನಾಟಕ ಭೂ ಮಂಜೂರಾತಿ ನಿಯಮಗಳು, ೧೯೬೯ರ ನಿಯಮ ೫(೧)(ಎ)ರಲ್ಲಿ ಯಾವುದೇ ಗ್ರಾಮದಲ್ಲಿ ವಿಲೇ ಮಾಡಲು ಲಭ್ಯವಾಗುವ ಜಮೀನನ್ನು ಸೈನಿಕ, ಮಾಜಿ ಸೈನಿಕರಿಗೆ ಮೀಸಲಿಡಲು ಅವಕಾಶ ಕಲ್ಪಿಸಲಾಗಿದೆ.
ಕರ್ನಾಟಕ ಭೂ ಮಂಜೂರಾತಿ ನಿಯಮಗಳು, ೧೯೬೯ರ ನಿಯಮ ೮(೮)ರಲ್ಲಿ ಮಾಜಿ ಸೈನಿಕ ಅಥವಾ ಸೈನಿಕ ನಿಯಮ ೪ರ ಉಪ ನಿಯಮ (೧)ರಲ್ಲಿ ನಿರ್ದಿಷ್ಟಪಡಿಸಿದಂತೆ ವಾರ್ಷಿಕ ಆದಾಯ ಮಿತಿಗೆ ಒಳಪಟ್ಟು ಭೂ ಮಂಜೂರಾತಿಗೆ ಅರ್ಹನಾಗಿರುತ್ತಾನೆ. ಅವರು ತಮ್ಮ ಸೇವಾ ಪುಸ್ತಕದಲ್ಲಿ ನಮೂದಿಸಿರುವಂತೆ ಸ್ಥಳೀಯ ತಾಲೂಕಿನ ತಹಶೀಲ್ದಾರ್ರಿಗೆ ನಮೂನೆ ೧-ಎನಲ್ಲಿ ಭೂ ಮಂಜೂರಾತಿಗಾಗಿ ಅರ್ಜಿ ಸಲ್ಲಿಸತಕ್ಕದ್ದು. ಎಲ್ಲಾ ಅರ್ಜಿಗಳನ್ನು ತಹಶೀಲ್ದಾರ್ರವರು ಒಂದು ವಹಿಯಲ್ಲಿ ಅರ್ಜಿ ಸಲ್ಲಿಸಿದ ದಿನಾಂಕದ ಜೇಷ್ಠತೆಯಂತೆ ದಾಖಲಿಸತಕ್ಕದ್ದು ಹಾಗೂ ಅದೇ ಜೇಷ್ಠತೆ ಆಧಾರದಲ್ಲಿ ಮಂಜೂರಾತಿಗೆ ಕಡ್ಡಾಯವಾಗಿ ಕ್ರಮವಹಿಸತಕ್ಕದ್ದು.
ಕರ್ನಾಟಕ ಭೂ ಮಂಜೂರಾತಿ ನಿಯಮಗಳು ೧೯೬೯ರ ನಿಯಮ ೪ರಲ್ಲಿ ಯುದ್ಧದಲ್ಲಿ ಮಡಿದ ಮತ್ತು ಯುದ್ಧದಲ್ಲಿ ಸಂಭವಿಸಿದ ಹಾಗೂ ಸಂಪೂರ್ಣವಾಗಿ ಅಂಗವಿಕಲರಾದ ಸೈನಿಕರ ಪತ್ನಿಗೆ ಅಥವಾ ಅವಲಂಬಿತರ ಅರ್ಜಿದಾರರುಗಳಿಗೆ ಭೂಮಿಯ ಮಂಜೂರಾತಿ ವರಮಾನದ ಪರಿಮಿತಿ ಇರತಕ್ಕದ್ದಲ್ಲ. ಸೇನೆ ಸೇವೆಯಲ್ಲಿದ್ದವರ ಮತ್ತು ಸೈನಿಕರ ಸಂದರ್ಭದಲ್ಲಿ ಅರ್ಜಿದಾರನ ಒಟ್ಟು ವಾರ್ಷಿಕ ವರಮಾನವು ೮ ಲಕ್ಷ ರೂಪಾಯಿಗಳನ್ನು ಮೀರದಿದ್ದಲ್ಲಿ ಭೂಮಿಯನ್ನು ಮಂಜೂರು ಮಾಡಲು ಅವಕಾಶ ಕಲ್ಪಿಸಲಾಗಿದೆ. ಸೈನಿಕ ಕಾರ್ಯಾಚರಣೆಯಲ್ಲಿ ಮಡಿದ ಯೋಧನ ಪತ್ನಿ ಮತ್ತು ಅವರ ಅವಲಂಬಿತರಿಗೆ ಮತ್ತು ಸೇನಾ ಕಾರ್ಯಾಚರಣೆಯಲ್ಲಿ ಸಂಪೂರ್ಣ ಅಂಗವೈಕಲ್ಯತೆಗೆ ತುತ್ತಾದವರಿಗೆ ಪ್ರಥಮ ಪ್ರಾಶಸ್ತö್ಯ ನೀಡತಕ್ಕದ್ದು ಹಾಗೂ ಸದರಿ ನಿಯಮ ೧೨(೫)ರಲ್ಲಿ ಸೈನಿಕರು, ಮಾಜಿ ಸೈನಿಕರಿಗೆ ಉಚಿತವಾಗಿ ಭೂಮಿಯನ್ನು ಮಂಜೂರು ಮಾಡಲು ಅವಕಾಶ ಕಲ್ಪಿಸಲಾಗಿದೆ.
ಕರ್ನಾಟಕ ಭೂ ಮಂಜೂರಾತಿ ನಿಯಮಗಳು, ೧೯೬೯ರ ನಿಯಮ ೭(೧)ರಲ್ಲಿ ಈ ಕೆಳಕಂಡ ವಿಸ್ತೀರ್ಣ ಹಾಗೂ ವರ್ಗೀಕರಣದ ಜಮೀನುಗಳನ್ನು ಮಂಜೂರು ಮಾಡಲು ಜಿಲ್ಲಾಧಿಕಾರಿಯವರಿಗೆ ಅಧಿಕಾರವಿದೆ.
ವ್ಯವಸಾಯದ ಉದ್ದೇಶಕ್ಕೆ ಸದ್ಯದ ಹಿಡುವಳಿಗಳನ್ನೊಳಗೊಂಡು ಎರಡು ಹೆಕ್ಟೇರ್ ಖುಷ್ಕಿ ಭೂಮಿ ಮತ್ತು ಒಂದು ಹೆಕ್ಟೇರ್ ತರಿ ಭೂಮಿ ಅಥವಾ ಬಾಗಾಯ್ತು ಭೂಮಿ. ಪ್ಲಾಂಟೇಶನ್ ಬೆಳೆಗಳ ಸಾಗುವಳಿ ಉದ್ದೇಶಕ್ಕಾಗಿ ಸದ್ಯದ ಹಿಡುವಳಿಯನ್ನೊಳಗೊಂಡು ಎರಡು ಹೆಕ್ಟೇರ್ ಭೂಮಿ. ಕೃಷಿಯೇತರ ಉದ್ದೇಶಕ್ಕೆ (ಕಟ್ಟಡ ನಿವೇಶನ ಹೊರತುಪಡಿಸಿ) ಅರ್ಧ ಹೆಕ್ಟೇರ್ ಭೂಮಿ.
ಭೂ ಮಂಜೂರಾತಿಗೆ ಸಂಬAಧಿಸಿದAತೆ ಮೇಲ್ಕಂಡAತೆ ನಿಯಮಗಳಲ್ಲಿ ಅವಕಾಶಗಳಿದ್ದರೂ ಸಹ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸೈನಿಕ, ಮಾಜಿ ಸೈನಿಕರಿಗೆ ಮಂಜೂರಾತಿ ಪ್ರಸ್ತಾವನೆಯನ್ನು ಅನಗತ್ಯವಾಗಿ ವಿಳಂಬ ಮಾಡುತ್ತಿರುವುದರಿಂದ ಅರ್ಜಿದಾರರು ನ್ಯಾಯಾಲಯದಲ್ಲಿ ರಿಟ್ ಅರ್ಜಿ ದಾಖಲಿಸುತ್ತಿದ್ದು, ಈ ಸಂಬAಧ ನ್ಯಾಯಾಲಯವು ನೀಡಿರುವ ಆದೇಶಗಳನ್ನು ನಿಗದಿತ ಅವಧಿಯಲ್ಲಿ ಕ್ರಮವಹಿಸದೇ ಇರುವುದರಿಂದ ಅರ್ಜಿದಾರರು ನ್ಯಾಯಾಲಯದಲ್ಲಿ ನ್ಯಾಯಾಂಗ ನಿಂದನಾ ಪ್ರಕರಣಗಳನ್ನು ದಾಖಲಿಸುತ್ತಿದ್ದು, ಇದರಿಂದಾಗಿ ಸರಕಾರದ ಅಪರ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು, ನ್ಯಾಯಾಲಯದ ಮುಂದೆ ಹಾಜರಾಗುವ ಪರಿಸ್ಥಿತಿಗಳು ಎದುರಾಗುತ್ತಿದೆ. ಆದ್ದರಿಂದ ಜಿಲ್ಲಾಧಿಕಾರಿಗಳು ಇನ್ನು ಮುಂದೆ ಇಂತಹ ಪ್ರಸ್ತಾವನೆಗಳನ್ನು ನಿಯಮಾನುಸಾರ ಪರಿಶೀಲಿಸಿ, ವಿಳಂಬಕ್ಕೆ ಆಸ್ಪದವಿಲ್ಲದೇ ತಮ್ಮ ಹಂತದಲ್ಲಿಯೇ ಅಗತ್ಯ ಕ್ರಮವಹಿಸತಕ್ಕದ್ದು ಹಾಗೂ ಅವಶ್ಯಕತೆ ಇದ್ದಲ್ಲಿ ಮಾತ್ರ ಸರಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸುವುದು.
ಕಾಲಾವಕಾಶ: ಸೈನಿಕ, ಮಾಜಿ ಸೈನಿಕರಿಂದ ಭೂ ಮಂಜೂರಾತಿಗಾಗಿ ಈಗಾಗಲೇ ಸ್ವೀಕರಿಸಿರುವ ಅರ್ಜಿಗಳನ್ನು ಜಿಲ್ಲಾಧಿಕಾರಿಗಳ
(ಮೊದಲ ಪುಟದಿಂದ) ಹಂತದಲ್ಲಿಯೇ ನಿಯಮಾನುಸಾರ ಪರಿಶೀಲಿಸಿ ಮೂರು ತಿಂಗಳೊಳಗಾಗಿ ಇತ್ಯರ್ಥಪಡಿಸತಕ್ಕದ್ದು ಹಾಗೂ ಹೊಸದಾಗಿ ಸ್ವೀಕರಿಸುವ ಅರ್ಜಿಗಳನ್ನು ಆರು ತಿಂಗಳೊಳಗಾಗಿ ಇತ್ಯರ್ಥಪಡಿಸಿ, ಅರ್ಜಿದಾರರಿಗೆ ಸೂಕ್ತವಾದ ಮಾಹಿತಿಯನ್ನು ನೀಡತಕ್ಕದ್ದು.
ಸೈನಿಕ, ಮಾಜಿ ಸೈನಿಕರಿಗೆ ಭೂ ಮಂಜೂರಾತಿಗೆ ಸಂಬAಧಿಸಿದAತೆ ಉಚ್ಚ ನ್ಯಾಯಾಲಯದಲ್ಲಿ ದಾಖಲಾಗಿದ್ದ ರಿಟ್ ಅರ್ಜಿ ಸಂಖ್ಯೆ: ೪೮೮೭೨/೨೦೧೯ರ ಪ್ರಕರಣದಲ್ಲಿ ದಿನಾಂಕ ೦೬.೧೧.೨೦೧೯ರ ದೈನಂದಿನ ಆದೇಶದಲ್ಲಿ ಈಗಾಗಲೇ ನ್ಯಾಯಾಲಯದ ರಿಟ್ ಅರ್ಜಿ ಸಂಖ್ಯೆ: ೨೬೭೦೦/೨೦೧೩ರ ಪ್ರಕರಣದಲ್ಲಿ ದಿನಾಂಕ ೨೫.೦೮.೨೦೧೪ ರಂದು ನೀಡಿರುವ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ನಿರ್ದೇಶನ ನೀಡಲಾಗಿದೆ.
ಸೈನಿಕ, ಮಾಜಿ ಸೈನಿಕರಿಗೆ ಭೂ ಮಂಜೂರಾತಿ ಸಂಬAಧಿಸಿದAತೆ ಉಚ್ಚ ನ್ಯಾಯಾಲಯದಲ್ಲಿ ದಾಖಲಾಗಿರುವ ರಿಟ್ ಅರ್ಜಿ ಸಂಖ್ಯೆ: ೨೬೭೦೦/೨೦೧೩ರ ಪ್ರಕರಣದಲ್ಲಿ ನ್ಯಾಯಾಲಯವು ನೀಡಿರುವ ಆದೇಶದ ಹಿನ್ನೆಲೆಯಲ್ಲಿ ಈ ಕೆಳಕಂಡ ಕ್ರಮಗಳನ್ನು ತಕ್ಷಣದಿಂದಲೇ ಜರೂರಾಗಿ ಕೈಗೊಳ್ಳುವಂತೆ ಸರಕಾರದ ಸುತ್ತೋಲೆ ಸಂಖ್ಯೆ: ಆರ್ಡಿ ೨೪೧ ಎಲ್ಜಿಪಿ ೨೦೧೬; ದಿನಾಂಕ: ೧೯.೧೧.೨೦೧೬ರ ಸುತ್ತೋಲೆಯಲ್ಲಿ ಸೂಚನೆ ನೀಡಲಾಗಿರುತ್ತದೆ.
ಜಿಲ್ಲಾಧಿಕಾರಿಗಳು ಮಂಜೂರಾತಿಗೆ ಸೂಕ್ತವಾಗಿರುವ ಜಮೀನುಗಳನ್ನು ತಮ್ಮ ವ್ಯಾಪ್ತಿಯಲ್ಲಿ ಗುರುತಿಸಿ, ಕರ್ನಾಟಕ ಭೂ ಕಂದಾಯ ಕಾಯ್ದೆ, ೧೯೬೪ರ ಕಲಂ ೭೧ರಡಿ ಅಧಿಸೂಚಿಸುವುದು. ಈ ಅಧಿಸೂಚನೆಯ ಪ್ರತಿಯನ್ನು ನಿರ್ದೇಶಕರು, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯವರಿಗೆ ನೀಡತಕ್ಕದ್ದು. ಈ ಅಧಿಸೂಚನೆಯನ್ನು ನಿರ್ದೇಶಕರು ತಮ್ಮ ಕಚೇರಿ ಹಾಗೂ ಜಿಲ್ಲಾ ಮಟ್ಟದ ಕಚೇರಿಗಳಲ್ಲಿ ಮಾಜಿ ಸೈನಿಕರು ಮತ್ತು ಯೋಧರ ಗಮನಕ್ಕೆ ತರಲು ಪ್ರಕಟಿಸತಕ್ಕದ್ದು.
ಯಾವುದಾದರೂ ಜಿಲ್ಲೆಯಲ್ಲಿ ಕೃಷಿ ಯೋಗ್ಯ ಭೂಮಿ ಜಿಲ್ಲಾಧಿಕಾರಿಗಳಿಗೆ ದೊರಕದಿದ್ದಲ್ಲಿ ಅವರು ಮಂಜೂರಾತಿಗೆ ಸೂಕ್ತವಾಗಿರುವ ಕಂದಾಯ ಭೂಮಿಯನ್ನು ಗುರುತಿಸತಕ್ಕದ್ದು. ಪ್ರತಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಮೀನು ಮಂಜೂರಾತಿಗಾಗಿ ಮಾಜಿ ಸೈನಿಕರು ಮತ್ತು ಯೋಧರು ದಾಖಲಿಸಿರುವ ಅರ್ಜಿಗಳ ವಹಿಯನ್ನು ನಿರ್ವಹಿಸತಕ್ಕದ್ದು.
ಮಾಜಿ ಸೈನಿಕರು ಮತ್ತು ಯೋಧರು ಅಥವಾ ಅವರು ಹಕ್ಕುದಾರರು ಭೂ ಮಂಜೂರಾತಿಗೆ ಅರ್ಹರಿದ್ದಲ್ಲಿ ಭೂ ಮಂಜೂರಾತಿಗಾಗಿ ಜಿಲ್ಲಾಧಿಕಾರಿಗಳಿಗೆ ನೇರವಾಗಿ ಅರ್ಜಿ ಸಲ್ಲಿಸತಕ್ಕದ್ದು ಹಾಗೂ ಇದರ ಪ್ರತಿಯನ್ನು ನಿರ್ದೇಶಕರು, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಗೆ ಸಲ್ಲಿಸತಕ್ಕದ್ದು. ನಿರ್ದೇಶಕರು, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯವರು ನೋಡಲ್ ಏಜೆನ್ಸಿಯಾಗಿದ್ದು, ಈ ಅರ್ಜಿಗಳನ್ನು ತಮ್ಮ ಕಚೇರಿಯಲ್ಲಿ ದಾಖಲಿಸತಕ್ಕದ್ದು ಹಾಗೂ ಸರಕಾರಿ ಸುತ್ತೋಲೆ ಸಂಖ್ಯೆ: ಆರ್ಡಿ ೩೩ ಎಲ್ಜೆಪಿ ೧೯೮೩; ಜೂನ್ ೧೯೮೩ರ ಸೂಚನೆಗಳನ್ವಯ ಸದರಿ ಅರ್ಜಿಗಳು ವಿಲೇವಾರಿಯಾಗುವವರೆಗೂ ಸಂಬAಧಿಸಿದ ಕಚೇರಿಗಳಲ್ಲಿ ವ್ಯವಹರಿಸಿ ಸೈನಿಕ, ಮಾಜಿ ಸೈನಿಕರಿಗೆ ಸಹಾಯ ಮಾಡತಕ್ಕದ್ದು.
ಅರ್ಜಿದಾರರ ಮನವಿಯನ್ನು ಖುದ್ದಾಗಿ ವಿಚಾರಿಸದೇ, ಅರ್ಜಿಯನ್ನು ವಿಲೇ ಮಾಡತಕ್ಕದ್ದಲ್ಲ; ಅರ್ಜಿದಾರರು ಜಮೀನು ಮಂಜೂರಾತಿಗಾಗಿ ಕೋರಿರುವ ಸರ್ವೆ ನಂಬರ್ನಲ್ಲಿ ಜಮೀನು ಲಭ್ಯವಿಲ್ಲದೇ ಇದ್ದಲ್ಲಿ ಅದೇ ಗ್ರಾಮದ ಇತರೆ ಸರ್ವೆ ನಂಬರ್ ಅಥವಾ ಬೇರೆ ಗ್ರಾಮದ ಇತರ ಸರ್ವೆ ನಂಬರ್ ಅಥವಾ ಬೇರೆ ಗ್ರಾಮದಲ್ಲಿ ಜಮೀನು ಮಂಜೂರು ಮಾಡಲು ಕ್ರಮವಹಿಸತಕ್ಕದ್ದು.
ಪಕ್ಕದ ಜಿಲ್ಲೆಗೂ ವರ್ಗಾವಣೆ
ಜಮೀನು ಮಂಜೂರಾತಿಗೆ ಕೋರಿರುವ ಜಮೀನು ಆ ಜಿಲ್ಲೆಯಲ್ಲಿ ಲಭ್ಯವಿಲ್ಲದೇ ಇದ್ದಲ್ಲಿ ಪಕ್ಕದ ಜಿಲ್ಲೆಗೆ ಅರ್ಜಿದಾರರ ಅರ್ಜಿಯನ್ನು ವರ್ಗಾಯಿಸತಕ್ಕದ್ದು. ಸೇವಾ ಪದಕ ಶೌರ್ಯ ಪ್ರಶಸ್ತಿ ಹಾಗೂ ಸೇವಾವಧಿಯಲ್ಲಿ ಗುರುತರವಾದ ಸಾಧನೆಗೆ ಪಡೆದಿರುವ ಪ್ರಶಸ್ತಿ ಪತ್ರಗಳನ್ನು ಹೊಂದಿರುವ ಯೋಧರ ಸಹ ಜಮೀನು, ನಿವೇಶನ, ನಗದು ಇತ್ಯಾದಿಗಳಿಗೆ ಅರ್ಹರಾಗಿದ್ದು, ಅಂತಹವರಿಗೆ ಕರ್ನಾಟಕ ಭೂ ಮಂಜೂರಾತಿ ನಿಯಮಗಳು ೧೯೬೯ರ ನಿಯಮಗಳಾದ ೪,೫,೬ರಲ್ಲಿರುವ ಕೆಲವು ನಿಬಂಧನೆಗಳು ಅನ್ವಯವಾಗುವುದಿಲ್ಲ. ಇಂತಹ ಪ್ರಕರಣಗಳನ್ನು ಆದ್ಯತೆಯ ಮೇಲೆ ಪರಿಗಣಿಸಬೇಕಾಗುತ್ತದೆ.
ಜಿಲ್ಲಾ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಕೇಂದ್ರದವರು ಸೇವಾ ಪದಕ, ಶೌರ್ಯ ಪ್ರಶಸ್ತಿ ಹಾಗೂ ಸೇವಾವಧಿಯಲ್ಲಿ ಗುರುತರ ಸಾಧನೆಗೆ ಪಡೆದಿರುವ ಪ್ರಶಸ್ತಿ ಪತ್ರಗಳ ಯೋಧರ ಪಟ್ಟಿಯನ್ನು ವರ್ಷವಾರು ತಯಾರಿಸಿ ಪ್ರತಿ ವರ್ಷವು ಪ್ರಕಟಿಸಬೇಕು ಹಾಗೂ ಇದರ ಪ್ರತಿಯನ್ನು ಪ್ರಧಾನ ಕಾರ್ಯದರ್ಶಿಗಳು, ಕಂದಾಯ ಇಲಾಖೆ, ಕರ್ನಾಟಕ ಸರಕಾರದವರಿಗೆ ಮುಂದಿನ ಕ್ರಮಕ್ಕಾಗಿ ಕಳುಹಿಸತಕ್ಕದ್ದು.
ಸೈನಿಕ, ಮಾಜಿ ಸೈನಿಕರಿಗೆ ಭೂ ಮಂಜೂರಾತಿಗೆ ಸಂಬAಧಿಸಿದAತೆ ನ್ಯಾಯಾಲಯದ ರಿಟ್ ಅರ್ಜಿ ಸಂಖ್ಯೆ: ೨೬೭೦೦/೨೦೧೩ರ ಪ್ರಕರಣದಲ್ಲಿ ದಿನಾಂಕ ೨೫.೦೮.೨೦೧೪ ರಂದು ನೀಡಿರುವ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ನಿರ್ದೇಶನ ನೀಡಿರುವ ಆದೇಶಕ್ಕೆ ಸಂಬAಧಿಸಿದAತೆ ಈಗಾಗಲೇ ಹೊರಡಿಸಿರುವ ಸರಕಾರದ ಸುತ್ತೋಲೆ ಸಂಖ್ಯೆ: ಆರ್ಡಿ ೨೪೧ ಎಲ್ಜಿಪಿ ೨೦೧೬, ದಿನಾಂಕ ೧೯.೧೧.೨೦೧೬ರ ಸುತ್ತೋಲೆಯಲ್ಲಿನ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸತಕ್ಕದ್ದು ಹಾಗೂ ಈ ಕಾರ್ಯದಲ್ಲಿ ಯಾವುದೇ ದೂರುಗಳಿಗೆ ಆಸ್ಪದ ನೀಡದಂತೆ ಸಂಪೂರ್ಣ ಪಾರದರ್ಶಕತೆಯನ್ನು ಪಾಲಿಸತಕ್ಕದ್ದು. ಯಾವುದೇ ಅಧಿಕಾರಿ, ನೌಕರರ ಲೋಪವನ್ನು ಸರಕಾರವು ತೀವ್ರ ಗಂಭೀರವಾಗಿ ಪರಿಗಣಿಸಲಾಗುವುದೆಂದು ಹಾಗೂ ಅವರ ವಿರುದ್ಧ ನಿಯಮಾನುಸಾರ ಶಿಸ್ತುಕ್ರಮ ಜರುಗಿಸಲಾಗುವುದೆಂದು ತಿಳಿಸಲಾಗಿದೆ.