ಮಡಿಕೇರಿ, ಜೂ. ೨೬ : ಕೊಡವ ಭಾಷೆಯನ್ನು ಬೆಳೆಸುವ ಹಾಗೂ ಜಾಗೃತಿ ಮೂಡಿಸುವ ಸಲುವಾಗಿ ನಡೆದ ಅಂತರಾಷ್ಟಿçÃಯ ಸ್ಪರ್ಧೆಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಕೊಡಗು ತಂಡ ಫೈನಲ್‌ಗೆ ಪ್ರವೇಶಿಸಿದೆ.

ಮರ್ಕಾರ ಹೋಂ ಆಫೀಸ್ ಸಹಯೋಗದಲ್ಲಿ ಅಮೇರಿಕಾದ ಬಲ್ಲಚಂಡ ನೈನಾ ಮುತ್ತಪ್ಪ ಹಾಗೂ ತಂಡ ನಡೆಸಿದ ``ಗ್ಲೋಬಲ್ ಕೊಡವ ತಕ್ಕ್ ಆಫ್-೨೦೨೧’’ ಪೈಪೋಟಿ ಶನಿವಾರ ನಡೆಯಿತು. ಎರಡನೇ ಸೆಮಿ ಫೈನಲ್ಸ್ನಲ್ಲಿ ಕೊಡಗು, ಮಿಡ್ಲ್ ಈಸ್ಟ್, ಸಿಂಗಾಪುರ ಹಾಗೂ ಆಸ್ಟೆçÃಲಿಯಾ ತಂಡಗಳ ನಡುವೆ ನಡೆದ ಸ್ಪರ್ಧೆಯ ಎಲ್ಲಾ ವಿಭಾಗದಲ್ಲಿಯೂ ಉತ್ತಮ ಪ್ರದರ್ಶನ ನೀಡುವುದರೊಂದಿಗೆ ಕೊಡಗು ಮೊದಲ ತಂಡವಾಗಿ ಫೈನಲ್ ಅಂಗಳಕ್ಕೆ ಪ್ರವೇಶಿಸಿತು. ಮಿಡ್ಲ್ ಈಸ್ಟ್ ತಂಡ ಎರಡನೇ ತಂಡವಾಗಿ ಫೈನಲ್ ತಲುಪಿತು. ಸೆಪ್ಟೆಂಬರ್ ತಿಂಗಳಿನಲ್ಲಿ ನಡೆಯುವ ಫೈನಲ್‌ನಲ್ಲಿ ಕೊಡಗು, ಬೆಂಗಳೂರು, ಯು.ಎಸ್.ಎ, ಮಿಡ್ಲ್ ಈಸ್ಟ್ ತಂಡ ಪೈಪೋಟಿ ನಡೆಸಲಿದೆ. ಮೊದಲ ಸೆಮಿಫೈನಲ್ಸ್ನಲ್ಲಿ ಬೆಂಗಳೂರು, ಯು.ಎಸ್.ಎ ತಂಡ ದೊಂದಿಗೆ ಕೆನಡಾ, ಯೂರೋಪ್, ಯು.ಕೆ. ತಂಡಗಳು ಭಾಗವಹಿಸಿದ್ದವು.

ಸೆಮಿಫೈನಲ್ಸ್ನಲ್ಲಿ ಕೊಡಗು ತಂಡದ ಪರವಾಗಿ ಡಾ. ತೀತಿರ ರೇಖಾ ವಸಂತ್, ಐತಿಚಂಡ ರಮೇಶ್ ಉತ್ತಪ್ಪ, ಚೆಯ್ಯಂಡ ಸತ್ಯ ಗಣಪತಿ, ಚೋಕಿರ ಅನಿತಾ ದೇವಯ್ಯ, ಚೇಂದAಡ ಶಮ್ಮಿ ಮಾದಯ್ಯ, ಕೇಲೇಟಿರ ಪವಿತ್ ಪೂವಯ್ಯ, ಬಾಳೆಯಡ ದಿವ್ಯ ಮಂದಪ್ಪ ಅವರುಗಳು ಪಾಲ್ಗೊಂಡಿದ್ದರು. ಶನಿವಾರ ನಡೆದ ಸ್ಪರ್ಧೆಯಲ್ಲಿ ವಿವಿಧ ದೇಶಗಳ ಸುಮಾರು ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸಿ ಓಟ್ ಮಾಡಿದ್ದರು.