ಕೂಡಿಗೆ, ಜೂ. ೨೬: ಹೆಬ್ಬಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅನೇಕ ಗ್ರಾಮಗಳಲ್ಲಿನ ರೈತರ ಅಕ್ರಮ ಸಕ್ರಮ ಯೋಜನೆ ವಿದ್ಯುತ್ ಸಂಪರ್ಕವನ್ನು ಯಾವುದೇ ಮುನ್ಸೂಚನೆಯನ್ನು ನೀಡದೆ ಕಡಿತ ಮಾಡಿರುವ ಬಗ್ಗೆ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹೆಬ್ಬಾಲೆ, ತೊರೆನೂರು, ಶಿರಂಗಾಲ ವ್ಯಾಪ್ತಿಯ ನೂರಾರು ರೈತರು ಸರಕಾರದ ಯೋಜನೆ ಅಡಿಯಲ್ಲಿ ಅಕ್ರಮ ಸಕ್ರಮದ ಸೌಲಭ್ಯಗಳನ್ನು ಪಡೆದಿರುತ್ತಾರೆ. ಇದೀಗ ಇಲಾಖೆ ಅಧಿಕಾರಿಗಳು ಹೆಬ್ಬಾಲೆ ಭಾಗದ ಹತ್ತಕ್ಕೂ ಹೆಚ್ಚು ರೈತರು ಕೃಷಿಗೆ ಉಪಯೋಗಿಸುವ ನೀರಿನ ಪಂಪ್‌ಸೆಟ್ ವಿದ್ಯುತ್ ಕಂಬದಿAದ ಸಂಪರ್ಕ ಕಡಿತಗೊಳಿಸಿದ್ದಾರೆ.
ಪ್ರಸ್ತುತ ಇರುವ ಸಂದಿಗ್ಧ ಪರಿಸ್ಥಿತಿ ನಡುವೆ ಈ ಕ್ರಮವನ್ನು ರೈತರು ಖಂಡಿಸಿದ್ದಾರೆ. ಜೋಳ ಬೆಳೆಗೆ ಹೆಚ್ಚು ನೀರಿನ ಅವಶ್ಯಕತೆಯಿದ್ದು, ರೈತರು ಕೊಳವೆ ಬಾವಿಯನ್ನೇ ಅವಲಂಬಿಸಿದ್ದಾರೆ. ಇಂತಹ ಕಷ್ಟದ ಕಾಲದಲ್ಲಿ ವಿದ್ಯುತ್ ಇಲಾಖೆಯವರು ಏಕಾಏಕಿ ಬಂದು ರೈತರ ಜಮೀನಿಗೆ ನೀರಿನ ಸರಬರಾಜಿಗೆ ಅನುಕೂಲ ವಾಗಿದ್ದ ಕೊಳವೆ ಬಾವಿಯ ವಿದ್ಯುತ್ ಕಡಿತಗೊಳಿಸಿರುವುದು ಸರಿಯಾದ ಕ್ರಮವಲ್ಲ ಎಂದು ಹೆಬ್ಬಾಲೆ ಗ್ರಾಮ ಪಂಚಾಯತಿ ಅಧ್ಯಕ್ಷ ಎಚ್.ಎಸ್ ಮಂಜುನಾಥ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹೆಬ್ಬಾಲೆ ವ್ಯಾಪ್ತಿಯಲ್ಲಿ ಕಡಿಮೆ ಮಳೆ ಬಿಳುವುದರಿಂದ ತಮ್ಮ ಜಮೀನಿನಲ್ಲಿ ಅಕ್ರಮ ಸಕ್ರಮದ ಯೋಜನೆಯ ಕೊಳವೆ ಬಾವಿಗಳಿಂದ ನೀರು ಬಳಕೆ ಮಾಡಿ ಬೇಸಾಯ ಮಾಡುತ್ತಿರುವ ಸಂದರ್ಭದಲ್ಲಿ ಈ ರೀತಿ ಮಾಡಿರುವುದರಿಂದ ಬೆಳೆಗಳು ಒಣಗಿ ಹಾಳಾಗುತ್ತಿವೆ ಎಂದು ಹೆಬ್ಬಾಲೆ ಗ್ರಾಮ ರೈತರುಗಳಾದ ಪ್ರತಾಪ್, ಮಂಜುನಾಥ್, ಸರೋಜ, ಹೇಮಂತ್ ಸೇರಿದಂತೆ ಅನೇಕ ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕ್ಷೇತ್ರದ ಶಾಸಕರಿಗೆ ಮನವಿಯನ್ನು ಸಲ್ಲಿಸಿ ನಂತರ ಪ್ರತಿಭಟನೆ ಮಾಡಲಾಗುವುದು ಎಂದು ಗ್ರಾಮ ಪಂಚಾಯತಿ ಅಧ್ಯಕ್ಷ ಮಂಜುನಾಥ್ ಮತ್ತು ಸದಸ್ಯರಾದ ಚಂದ್ರಶೇಖರ್ ಜೋಗಿ ತಿಳಿಸಿದರು.
ಇದಕ್ಕೆ ಸಂಬAಧಿಸಿದAತೆ ವಿದ್ಯುತ್ ಇಲಾಖೆಯ ಇಂಜಿನಿಯರ್ ಪ್ರತಿಕ್ರಿಯೆ ಬಯಸಿದಾಗ, ಈ ಭಾಗಗಳಲ್ಲಿ ಹೆಚ್ಚು ಅಕ್ರಮ ಸಕ್ರಮ ಯೋಜನೆ ಫಲಾನುಭವಿಗಳಿದ್ದು ಅವರುಗಳಿಗೆ ಇಲಾಖೆಯ ವತಿಯಿಂದ ಸಕ್ರಮ ಮಾಡಿಕೊಳ್ಳಲು ತಿಳಿಸಲಾಗಿದೆ. ಅಲ್ಲದೆ ಈ ಭಾಗದ ಗ್ರಾಮಗಳಿಗೆ ವಿದ್ಯುತ್ ಪೂರೈಕೆಗೆ ಅಲ್ಲಿನ ಟಿಸಿಗಳ ಸಮಸ್ಯೆಗಳು ಉಂಟಾಗುತ್ತಿವೆ. ರೈತರು ಸಕ್ರಮ ಮಾಡಿಕೊಂಡರೆ ರೈತರ ಜಮೀನಿನ ಸಂಪರ್ಕದ ಅನುಗುಣವಾಗಿ ಟಿಸಿಯನ್ನು ಹಾಕಲಾಗುವುದು. ಈಗಾಗಲೇ ಮೇಲಧಿಕಾರಿಗಳ ಸೂಚನೆಯಂತೆ ಅಕ್ರಮದ ಸಂಪರ್ಕವನ್ನು ಕಡಿತ ಗೊಳಿಸಲಾಗಿದೆ ಎಂದು ತಿಳಿಸಿದರು.