ಮಡಿಕೇರಿ, ಜೂ. ೨೫: ಪ್ರಸಕ್ತ ಸಾಲಿನಲ್ಲಿ ಜೂನ್ ಆರಂಭದಲ್ಲಿ ಜಿಲ್ಲೆಯಲ್ಲಿ ಮಳೆಗಾಲದ ಸನ್ನಿವೇಶ ಕಂಡುಬAದಿತ್ತು. ಜೂನ್ ಎರಡನೇ ವಾರದಲ್ಲಿ ಮೃಗಶಿರ ಮಳೆ ನಕ್ಷತ್ರ ಒಂದಷ್ಟು ಅಬ್ಬರ ತೋರುವದರೊಂದಿಗೆ ಸುಮಾರು ಎಂಟು ದಿನಗಳ ಕಾಲ ಜಿಲ್ಲೆಯಲ್ಲಿ ಭಾರೀ ಗಾಳಿ - ಮಳೆಯಾಗಿತ್ತು. ಮಾತ್ರವಲ್ಲದೆ ಹಿಂದಿನ ವರ್ಷಗಳಿಗಿಂತ ಬೇಗನೇ ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಬಹುದೇನೋ ಎಂಬAತಹ ಚಿತ್ರಣ ಎದುರಾಗಿತ್ತು. ಆದರೆ ಇದೀಗ ಕಳೆದ ನಾಲ್ಕೆöÊದು ದಿನಗಳಿಂದ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಮಳೆ ಕ್ಷೀಣಗೊಂಡಿದ್ದು, ಎಲ್ಲೆಡೆ ಬಿಸಿಲಿನ ವಾತಾವರಣ ಗೋಚರಿಸುತ್ತಿದೆ.

ಕಳೆದ ವರ್ಷಕ್ಕಿಂತ ಈ ಬಾರಿ ಜನವರಿಯಿಂದ ಈ ತನಕ ಸ್ವಲ್ಪ ಹೆಚ್ಚು ಮಳೆಯಾಗಿದ್ದರೂ ಜಿಲ್ಲೆಯಲ್ಲಿ ಇದೀಗ ಮಳೆಯ ವಾತಾವರಣ ಇಲ್ಲ. ಈಗಾಗಲೇ ರೈತರು ಕೃಷಿ ಕೆಲಸಗಳಿಗೆ ಚಾಲನೆ ನೀಡಿದ್ದಾರೆ. ಭತ್ತದ ಕೃಷಿ ಮಾಡುವ ರೈತರು ಈ ಬಗ್ಗೆ ಗಮನ ಹರಿಸಿದ್ದಾರೆ. ಆದರೆ ಪ್ರಸ್ತುತದ ಬಿಸಿಲಿನ ವಾತಾವರಣದಿಂದಾಗಿ ಕೃಷಿ ಕೆಲಸಕ್ಕೆ ಮಳೆಯನ್ನೇ ಆಶ್ರಯಿಸಬೇಕಾಗಿರುವ ರೈತರು ಆಗಸದತ್ತ ದಿಟ್ಟಿಸುವಂತಾಗಿದೆ. ನೀರಿನ ಸೌಲಭ್ಯ ಇರುವೆಡೆ ಭತ್ತದ ಬಿತ್ತನೆ ಕೆಲಸ ಪ್ರಾರಂಭಿಕ ಹಂತದಲ್ಲಿದ್ದು, ಕೆಲವೆಡೆ ಬಿತ್ತನೆ ಕಾರ್ಯವೂ ನಡೆದಿದೆ.

ಆದರೆ ನೀರಿನ ಸೌಲಭ್ಯ ಕಡಿಮೆ ಇರುವ ಪ್ರದೇಶಗಳಲ್ಲಿ ಇದೀಗ ಒಂದಷ್ಟು ಸಮಸ್ಯೆಗಳು ಎದುರಾಗತೊಡಗಿದ್ದು, ಇಲ್ಲಿನ ರೈತರು ಕೆರೆ - ತೋಡುಗಳಿಂದ ಬಿತ್ತನೆ ಮಾಡುವ ಗದ್ದೆಗೆ ನೀರನ್ನು ಆಶ್ರಯಿಸಬೇಕಾಗಿದೆ. ಜಿಲ್ಲೆಯ ಹಲವೆಡೆಗಳಲ್ಲಿ ಕೆಲ ದಿನಗಳಿಂದ ಒಂದು ಹನಿಯೂ ಬಿದ್ದಿಲ್ಲ. ಕೆಲವೆಡೆ ಅಲ್ಪ - ಸ್ವಲ್ಪ ಮೋಡ ಆವರಿಸುತ್ತಿದೆಯಾದರೂ ಬಿಸಿಲಿನ ಪ್ರಖರತೆ ಹೆಚ್ಚಾಗಿ ಕಂಡುಬರುತ್ತಿದೆ.