ನಾಪೋಕ್ಲು, ಜೂ. ೨೫: ಬಲಮುರಿ, ಪಾರಾಣೆ ಕಡೆಯಿಂದ ನಾಪೋಕ್ಲು ಗೆ ಸಂಪರ್ಕ ಕಲ್ಪಿಸುವ ಬೇತು ಗ್ರಾಮದ ಮಕ್ಕಿ ಕಡವಿನಲ್ಲಿ ಊರಿನವರ ಉಪಯೋಗಕ್ಕಾಗಿ ಶಾಸಕರ ನಿಧಿ ಮತ್ತು ಈ ಹಿಂದೆ ರಾಜ್ಯಸಭಾ ಸದಸ್ಯರಾಗಿದ್ದ ಸಂದರ್ಭ ಹೇಮಮಾಲಿನಿಯವರ ನಿಧಿಯಿಂದ ಸುಮಾರು ರೂ. ೨೦ ಲಕ್ಷ ವೆಚ್ಚದಲ್ಲಿ ಉತ್ತಮವಾದ ಸಂಪರ್ಕ ಸೇತುವೆ ಯನ್ನು ನಿರ್ಮಿಸಿ ಸಾರ್ವಜನಿಕರಿಗೆ ಬಲಮುರಿ, ಪಾರಾಣೆಯವರು ನಾಪೋಕ್ಲುವಿಗೆ ಬರಲು ಹತ್ತಿರವಾದ ರಸ್ತೆಯನ್ನು ನಿರ್ಮಿಸಿ ಅನುಕೂಲ ಮಾಡಿಕೊಟ್ಟಿದ್ದರು. ಆದರೆ ಇಲ್ಲಿನ ಕೆಲವು ದಂಧೆ ಕೋರರು ಸೇತುವೆಯ ಹತ್ತಿರದಲ್ಲಿಯೇ ಮರಳು ಮಾಫಿಯವನ್ನು ಆರಂಭಿಸಿ ಇದೀಗ ಸೇತುವೆಯ ೧ ಭಾಗ ಕುಸಿಯುವ ಹಂತ ತಲುಪಿದೆ. ಕೂಡಲೇ ಮರಳು ಮಾಫಿಯಕ್ಕೆ ಕಡಿವಾಣ ಹಾಕದಿದ್ದರೆ ಪ್ರತಿಭಟನೆ ಮಾಡಲಾಗುವುದು ಎಂದು ನಾಪೋಕ್ಲು- ಪಾರಾಣೆ ಕೊಣಂಜಗೇರಿ ಗ್ರಾಮ ಪಂಚಾಯಿತಿ ಯವರು ಇಂದು ಮಕ್ಕಿಕಡುವಿನ ಸೇತುವೆ ಬಳಿ ಪ್ರತಿಭಟಿಸಿ ಎಚ್ಚರಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ಮಾಜಿ ತಾಲೂಕು ಪಂಚಾಯತ್ ಅಧ್ಯಕ್ಷೆ ತೆಕ್ಕಡೆ ಶೋಭಾ ಮೋಹನ್ ಮಾತನಾಡಿ ಮರಳು ದಂಧೆಯಿAದ ಸೇತುವೆಯು ಕುಸಿಯುವ ಭೀತಿಯಲ್ಲಿದೆ. ಇಲ್ಲಿ ನಿರಂತರ ಮರಳುಗಾರಿಕೆ ನಡೆಯುತ್ತಿದ್ದರೂ ಪೊಲೀಸರಾಗಲೀ ಜಿಲ್ಲಾಡಳಿವಾಗಲಿ ಇದನ್ನು ತಡೆಯಲು ವಿಫಲವಾಗಿದೆ. ಇದು ಕೂಡಲೇ ನಿಲ್ಲಬೇಕು ತಪ್ಪಿದರೆ ರಸ್ತೆ ತಡೆ ನಡೆಸಿ ಪ್ರತಿಭಟಿಸಲಾಗುವುದು ಎಂದು ಎಚ್ಚರಿಸಿದರು.

ಪಾರಾಣೆ ಕೊಣಂಜಗೇರಿ ಗ್ರಾಮ ಪಂಚಾಯತ್ ಅಧ್ಯಕ್ಷ ನೆರೆಯನಮ್ಮಂಡ ಬೆಳ್ಯಮ್ಮಯ್ಯ ಅವರು ಮಾತನಾಡಿ ಮರಳು ದಂಧೆಯಿAದ ಸೇತುವೆ ಕುಸಿ ಯುವ ಹಂತ ತಲುಪಿದ್ದು ಜಿಲ್ಲಾಡಳಿತ ಕೂಡಲೇ ಇದಕ್ಕೆ ಕಡಿವಾಣ ಹಾಕಿ ತಪ್ಪಿಸ್ಥರ ವಿರುದ್ಧ ಕ್ರಮ ಕೈಗೊಳ್ಳ ಬೇಕೆಂದು ಆಗ್ರಹಿಸಿದರು.

(ಮೊದಲ ಪುಟದಿಂದ) ಕೊಣಂಜಗೇರಿ ಗ್ರಾಮ ಪಂಚಾಯಿತಿ ಸದಸ್ಯ ಬೊಳ್ಳಚೆಟ್ಟೀರ ಪ್ರಕಾಶ್ ಮಾತನಾಡಿ ಸೇತುವೆಯ ಎರಡು ಬದಿಯಿಂದ ಮರಳು ತೆಗೆದು ಅಪಾಯಕ್ಕೆ ಕಾರಣವಾಗಿದ್ದು ಇವರ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕೆಂದು ಕೂಡಲೇ ಇದಕ್ಕೆ ಕಡಿವಾಣ ಹಾಕದಿದ್ದರೆ ಬೀದಿಗಿಳಿದು ಹೋರಾಟ ನಡೆಸಬೇಕಾದಿತು ಎಂದು ಎಚ್ಚರಿಸಿದರು.

ಪ್ರತಿಭಟನೆ ಸಂದರ್ಭ ಮಾಜಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಬಿದ್ದಂಡ ಉಷಾದೇವಮ್ಮ, ಗ್ರಾಮ ಪಂಚಾಯಿತಿ ಸದಸ್ಯ ಪಾಡೆಯಂಡ ಕಟ್ಟಿ ಕುಶಾಲಪ್ಪ, ನಾಪೋಕ್ಲು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಅಪ್ಪನೆರವಂಡ ಕಿರಣ್ ಕಾರ್ಯಪ್ಪ, ಬಾಕಿಲನ ಪೂಣಚ್ಚ, ನಾಣಯ್ಯ ಪೊನ್ನಚ್ಚನ ಭೀಮಯ್ಯ, ಈರಣ್ಣಯ್ಯ, ಮೇಲತನ ರಶ್ಮಿ ಶಿವರಾಂ, ಗುಡ್ಡೇರ ಲಕ್ಷÆ, ದಯಾನಂದ ಮತ್ತಿತರರು ಇದ್ದರು.