ಹೆಚ್.ಜೆ. ರಾಕೇಶ್

ಮಡಿಕೇರಿ, ಜೂ. ೨೫: ಸದ್ಯದ ಕೋವಿಡ್ ಪರಿಸ್ಥಿತಿ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ೨ನೇ ಅಲೆಯಿಂದ ಅದೆಷ್ಟೋ ಮಂದಿ ಜೀವ ಕಳೆದುಕೊಂಡಿದ್ದಾರೆ. ಬದುಕು ಅತಂತ್ರವಾಗಿದೆ. ದೇಶವ್ಯಾಪಿ ‘ಮೆಡಿಕಲ್ ಎಮರ್ಜನ್ಸಿ’ ಪರಿಸ್ಥಿತಿ ಸೃಷ್ಟಿಯಾಗಿ ವರ್ಷ ಕಳೆದಿದೆ. ಈ ಬೆನ್ನಲ್ಲೇ ೩ನೇ ಅಲೆ ಭೀತಿ ಎದುರಾಗಿದ್ದು, ರೂಪಾಂತರಿ ವೈರಸ್ ಮಕ್ಕಳ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎನ್ನಲಾಗಿದೆ. ಈ ಹಿನ್ನೆಲೆ ಮಕ್ಕಳ ಆರೋಗ್ಯ ರಕ್ಷಣೆಗೆ ಅಧಿಕಾರಿಗಳು ಸಮರೋಪಾದಿಯಲ್ಲಿ ಕೆಲಸ ಆರಂಭಿಸಬೇಕಾಗಿದೆ. ಅದಲ್ಲದೆ ತಜ್ಞರೊಬ್ಬರು ಕೊಡಗು ಜಿಲ್ಲೆಯ ಮಕ್ಕಳ ಆರೋಗ್ಯ ಹಿತದೃಷ್ಟಿಯಿಂದ ವರದಿಯೊಂದನ್ನು ತಯಾರಿಸಿದ್ದಾರೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಶಶಿಕಲಾ ಜೊಲ್ಲೆ ಅವರು ತಾ.೧೮ ರಂದು ಕೊಡಗು ಜಿಲ್ಲೆಗೆ ಆಗಮಿಸಿ, ೩ನೇ ಅಲೆ ಸಂಬAಧ ಕೈಗೊಂಡ ಕ್ರಮಗಳ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿ ಚುರುಕು ಮುಟ್ಟಿಸಿದ ಬಳಿಕ ಕಾರ್ಯೋನ್ಮುಖಗೊಂಡಿರುವ ಅಧಿಕಾರಿಗಳು ತಾಲೂಕಿಗೊಂದು ಮಕ್ಕಳ ಕೋವಿಡ್ ಕೇರ್ ಸೆಂಟರ್, ಮಕ್ಕಳ ತಜ್ಞರ ನಿಯೋಜನೆಗೆ ಕ್ರಮ ಸೇರಿದಂತೆ ವಿವಿಧ ರೀತಿಯಲ್ಲಿ ಕೈಗೊಳ್ಳಬೇಕಾದ ಕ್ರಮದ ಬಗ್ಗೆ ಚಿಂತನೆ ಹರಿಸಿದ್ದಾರೆ.

ತಾಲೂಕಿಗೊಂದು

ಆರೈಕೆ ಕೇಂದ್ರ

ಸಚಿವೆ ಶಶಿಕಲಾ ಜೊಲ್ಲೆ ಜಿಲ್ಲೆಗೆ ಆಗಮಿಸಿದ್ದ ಸಂದರ್ಭ ತಾಲೂಕಿ ಗೊಂದು ಮಕ್ಕಳ ಕೋವಿಡ್ ಕೇರ್ ಸೆಂಟರ್ ತೆರೆಯಲು ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು. ಈ ಹಿನ್ನೆಲೆ ಸದ್ಯಕ್ಕೆ ಸೋಮವಾರಪೇಟೆ, ವೀರಾಜಪೇಟೆ, ಮಡಿಕೇರಿ ತಾಲೂಕು ಕೇಂದ್ರದಲ್ಲಿ ಮಕ್ಕಳ ಕೋವಿಡ್ ಕೇರ್ ಸೆಂಟರ್ ತೆರೆಯಲು ಅಧಿಕಾರಿಗಳು ಮುಂದಾಗಿದ್ದಾರೆ. ನೂತನವಾಗಿ ರಚನೆಗೊಂಡಿರುವ ಪೊನ್ನಂಪೇಟೆ ಹಾಗೂ ಕುಶಾಲನಗರ ತಾಲೂಕಿನಲ್ಲಿ ಆರೈಕೆ ಕೇಂದ್ರ ತೆರೆಯುವ ಸಂಬAಧ ಕೂಡ ಚರ್ಚೆಯಾಗುತ್ತಿದೆ.

ಆರೋಗ್ಯ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಈಗಾಗಲೇ ಸಭೆ ನಡೆಸಿದ್ದು, ಕೋವಿಡ್ ಕೇರ್ ಸೆಂಟರ್ ಹೇಗಿರಬೇಕು. ವೈದ್ಯಕೀಯ ಸವಲತ್ತು ಯಾವ ರೀತಿ ಇರಬೇಕು.

(ಮೊದಲ ಪುಟದಿಂದ) ಎಂಬುದರ ಬಗ್ಗೆ ಚರ್ಚಿಸಿದ್ದು, ಇನ್ನೂ ಕೆಲವೇ ದಿನದಲ್ಲಿ ಈ ಮೂರು ತಾಲೂಕಿನ ಎಲ್ಲಿ ಆರೈಕೆ ಕೇಂದ್ರ ಆರಂಭಿಸುವುದು ಸೂಕ್ತ ಎಂಬ ತೀರ್ಮಾನ ಅಂತಿಮಗೊಳ್ಳಲಿದೆ.

ಒಂದು ಕೇಂದ್ರ ಆರಂಭ

ಈಗಾಗಲೇ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಮತ್ತು ಬೋಧಕ ಆಸ್ಪತ್ರೆಯಲ್ಲಿ ಪ್ರಸ್ತುತ ೫ ಪಿಐಸಿಯು (Peಜiಚಿಣಡಿiಛಿ Iಟಿಣeಟಿsive ಅಚಿಡಿe Uಟಿiಣ), ೫ ಎಸ್.ಎನ್.ಸಿ.ಯು (Sಠಿeಛಿiಚಿಟ ಓeತಿboಡಿಟಿ ಛಿಚಿಡಿe Uಟಿiಣs) ಹಾಗೂ ೧೦ ಮಕ್ಕಳ ವಿಭಾಗದ ಬೆಡ್‌ಗಳ ಸಾಮರ್ಥ್ಯದ ವಾರ್ಡ್ ಆರಂಭಿಸಲಾಗಿದೆ.

ಜೊತೆಗೆ ೨೦ ಪಿ.ಐ.ಸಿ.ಯು, ೧೦ ಎನ್.ಎನ್.ಸಿ.ಯು, ೩೦ ಹೆಚ್.ಡಿ.ಯು ಹಾಗೂ ೫೦ ಮಕ್ಕಳ ವಿಭಾಗದ ಬೆಡ್‌ಗಳ ಸಾಮರ್ಥ್ಯದ ವಾರ್ಡನ್ನು ನಿರ್ಮಿಸಲು ಪ್ರಸ್ತಾವನೆಯನ್ನು ವೈದ್ಯಕೀಯ ಅಧೀಕ್ಷಕರಿಗೆ ಸಲ್ಲಿಸಲಾಗಿದ್ದು, ಇದು ಸದ್ಯದಲ್ಲೆ ಆರಂಭವಾಗಲಿದೆ.

ಅದಲ್ಲದೆ ಮಕ್ಕಳ ಕೋವಿಡ್ ಕೇರ್ ಸೆಂಟರ್ ಜೊತೆಗೆ ಮಕ್ಕಳಿಗಾಗಿ ಪ್ರತ್ಯೇಕವಾಗಿ ಕೆಲವೆಡೆ ಬೆಡ್‌ಗಳನ್ನು ಕಾಯ್ದಿರಿಸಲಾಗಿದೆ. ಜಿಲ್ಲಾ ಕೋವಿಡ್ ಆಸ್ಪತ್ರೆ ಹಾಗೂ ವೀರಾಜಪೇಟೆ ಸಮೀಪದ ಬಾಳುಗೋಡು ಏಕಲವ್ಯ ವಸತಿ ಶಾಲೆಯಲ್ಲಿ ೧೦ ಬೆಡ್, ಸೋಮವಾಪೇಟೆ ತಾಲೂಕು ಆಸ್ಪತ್ರೆ, ವೀರಾಜಪೇಟೆ ತಾಲೂಕು ಆಸ್ಪತ್ರೆ, ಪೆರುಂಬಾಡಿ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಮರೂರು ಆಶ್ರಮ ಶಾಲೆಯಲ್ಲಿ ಮಕ್ಕಳ ಚಿಕಿತ್ಸೆಗಾಗಿ ತಲಾ ೫ ಬೆಡ್‌ಗಳನ್ನು ಪ್ರತ್ಯೇಕವಾಗಿ ಕಾಯ್ದಿರಿಸಲಾಗಿದೆ.

ಈಗಾಗಲೇ ಇರುವ ಕೋವಿಡ್ ಕೇರ್ ಸೆಂಟರ್‌ಗಳಿAದ ಬಹುತೇಕರು ಗುಣಮುಖರಾಗಿ ಬಿಡುಗಡೆಗೊಂಡಿದ್ದು, ಆ ಆರೈಕೆ ಕೇಂದ್ರಗಳನ್ನು ಮಕ್ಕಳ ಕೋವಿಡ್ ಕೇರ್ ಸೆಂಟರ್ ಆಗಿ ಪರಿವರ್ತಿಸಲು ಚರ್ಚೆಯಾಗಿದೆ. ಹಾಲಿ ಇರುವ ಕೇರ್ ಸೆಂಟರ್‌ಗಳಲ್ಲಿ ಎಲ್ಲಾ ರೀತಿಯ ವ್ಯವಸ್ಥೆ ಇರುವುದರಿಂದ ಅಲ್ಲಿಯೇ ಮಕ್ಕಳಿಗಾಗಿ ಕೇರ್ ಸೆಂಟರ್ ಆರಂಭಿಸುವುದು ಸೂಕ್ತ ಎಂಬ ತೀರ್ಮಾನಕ್ಕೆ ಅಧಿಕಾರಿಗಳು ಬಂದಿದ್ದಾರೆ.

೨,೩೦೦ಕ್ಕೂ ಹೆಚ್ಚು ಮಕ್ಕಳಿಗೆ ಸೋಂಕು

ಕೊಡಗು ಜಿಲ್ಲೆಯಲ್ಲಿ ತಾ.೧೪ ರ ತನಕ ೨,೩೦೦ಕ್ಕೂ ಹೆಚ್ಚು ಮಕ್ಕಳಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಇವರಲ್ಲಿ ಬಹುತೇಕರು ಗುಣಮುಖರಾಗಿದ್ದು, ಕೆಲವರು ಹೋಂ ಐಸೋಲೇಷನ್‌ನಲ್ಲಿದ್ದಾರೆ. ತಾ. ೧೪ರ ತನಕ ೧೧ ರಿಂದ ೧೮ ವರ್ಷದೊಳಗಿನ ೧೩೭೪ ಮಕ್ಕಳಿಗೆ ಕೊರೊನಾ ಪಾಸಿಟಿವ್ ಕಂಡುಬAದಿದ್ದು, ೦-೧ ವಯೋಮಾನದ ೫೨, ೨ ರಿಂದ ೫ ವರ್ಷದೊಳಗಿನ ೩೩೦, ೬ ರಿಂದ ೧೦ ವರ್ಷದೊಳಗಿನ ೫೫೪ ಮಕ್ಕಳಿಗೆ ಸೋಂಕು ತಗುಲಿದೆ. ಜಿಲ್ಲೆಯಲ್ಲಿ ಮಕ್ಕಳ ಮರಣ ಪ್ರಕರಣ ಸಂಭವಿಸಿಲ್ಲ.

೧೧ ಮಕ್ಕಳ ತಜ್ಞರು

ಜಿಲ್ಲೆಯಲ್ಲಿ ೧೧ ಮಕ್ಕಳ ತಜ್ಞರು ಲಭ್ಯವಿದ್ದು, ಹೆಚ್ಚುವರಿ ವೈದ್ಯರ ಅವಶ್ಯಕತೆ ಜಿಲ್ಲೆಗಿದೆ. ಜಿಲ್ಲಾಸ್ಪತ್ರೆಯಲ್ಲಿ ೭ ಸೇರಿದಂತೆ ಸೋಮವಾರಪೇಟೆ, ವೀರಾಜಪೇಟೆ, ಶನಿವಾರಸಂತೆ, ಕುಶಾಲನಗರದಲ್ಲಿ ತಲಾ ಒಬ್ಬರು ವೈದ್ಯರು ಕಾರ್ಯನಿರ್ವಹಿಸುತ್ತಿದ್ದಾರೆ.

೩ನೇ ಅಲೆಯ ಭೀತಿ ಹಿನ್ನೆಲೆ ವೈದ್ಯರ ನೇಮಕಕ್ಕೆ ಸಂದರ್ಶನ ನಡೆಯಲಿದೆ. ತುರ್ತು ಅವಶ್ಯಕತೆ ಎದುರಾದಲ್ಲಿ ಖಾಸಗಿ ವೈದ್ಯರನ್ನು ಸೇವೆಗೆ ನಿಯೋಜಿಸಿಕೊಳ್ಳಲಾಗುತ್ತದೆ. ಕೊಡಗು ಜಿಲ್ಲೆಗೆ ಇನ್ನಷ್ಟು ಮಕ್ಕಳ ತಜ್ಞರ ಅವಶ್ಯಕತೆ ಇದೆ.