ಸೋಮವಾರಪೇಟೆ, ಜೂ. ೨೫: ಇಲ್ಲಿನ ಶಿವಕುಮಾರ ಸ್ವಾಮೀಜಿ ಜಯಂತ್ಯೋತ್ಸವ ಸಮಿತಿ ವತಿಯಿಂದ ನಿರ್ಮಿಸಲು ಉದ್ದೇಶಿಸಿರುವ ಪ್ರಯಾಣಿಕರ ತಂಗುದಾಣಕ್ಕೆ ಆನೆಕೆರೆ ಬಳಿಯಲ್ಲಿ ಸ್ಥಳ ನಿಗದಿಗೊಳಿಸ ಲಾಯಿತು. ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಆನೆಕೆರೆ ಸಮೀಪ ಶಿವಕುಮಾರ ಸ್ವಾಮೀಜಿ ಸ್ಮರಣಾರ್ಥ ರೂ. ೨.೫ ಲಕ್ಷ ವೆಚ್ಚದಲ್ಲಿ ಪ್ರಯಾಣಿಕರ ತಂಗುದಾಣ ನಿರ್ಮಿಸಲು ಯೋಜನೆ ರೂಪಿಸಲಾಗಿದ್ದು ಯೋಜನೆಗೆ ಬೇಕಾದ ನಿವೇಶನವನ್ನು ಪಟ್ಟಣ ಪಂಚಾಯಿತಿ ಆಡಳಿತ ಮಂಡಳಿ ಗುರುತು ಮಾಡಿ ನೀಡಿತು.
ಈ ಸಂದರ್ಭ ಪ.ಪಂ. ಪ್ರಭಾರ ಅಧ್ಯಕ್ಷ ಬಿ. ಸಂಜೀವ, ಸದಸ್ಯರುಗಳಾದ ಶೀಲಾ ಡಿಸೋಜ, ಪಿ.ಕೆ. ಚಂದ್ರು, ಬಿ.ಆರ್. ಮಹೇಶ್, ಅಭಿಯಂತರ ಹೇಮಂತ್ ಕುಮಾರ್, ಜಯಂತ್ಯೋತ್ಸವ ಸಮಿತಿ ಪ್ರಮುಖರಾದ ಮೃತ್ಯುಂಜಯ, ಶಿವಕುಮಾರ್, ಎಸ್. ಮಹೇಶ್, ಯುವರಾಜ್, ಯೋಗೇಶ್ ಹಾಜರಿದ್ದರು.