*ಸಿದ್ದಾಪುರ, ಜೂ. ೨೫: ಸಿದ್ದಾಪುರ ಗ್ರಾ.ಪಂ. ವತಿಯಿಂದ ಮಡಿಕೇರಿ ರಸ್ತೆಯಲ್ಲಿ ಚರಂಡಿ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. ಜನರ ಹಲವು ದಿನಗಳ ಬೇಡಿಕೆ ಈಡೇರಿದ್ದು, ಸುಮಾರು ೩ ಲಕ್ಷ ರೂಪಾಯಿಗಳ ಕಾಮಗಾರಿ ಪ್ರಗತಿಯಲ್ಲಿದೆ. ಗ್ರಾ.ಪಂ. ಅಧ್ಯಕ್ಷೆ ರೀನಾ ಗಣಪತಿ, ಸ್ಥಳೀಯ ಸದಸ್ಯರಾದ ಅಬ್ದುಲ್ ಸುಕ್ರು ಹಾಗೂ ಶೀಲಾ ಭೇಟಿ ನೀಡಿ ಕಾಮಗಾರಿ ಪರಿಶೀಲಿಸಿದರು.