(ಕಾಯಪಂಡ ಶಶಿ ಸೋಮಯ್ಯ) ಮಡಿಕೇರಿ, ಜೂ. ೨೪: ಸಾರಿಗೆ ಇಲಾಖೆಗೆ ಸಂಬAಧಿಸಿದAತೆ ರಾಜ್ಯದಲ್ಲಿ ವಿವಿಧ ಜಿಲ್ಲೆಗಳಿಗೆ ರಾಜ್ಯ ಸರಕಾರದ ಮೂಲಕ ವಾರ್ಷಿಕ ಗುರಿ ಸಾಧನೆಯಲ್ಲಿ ಕಳೆದ ಹಲವು ವರ್ಷಗಳಿಂದ ಮುಂಚೂಣಿ ಯಲ್ಲಿರುತ್ತಿದ್ದ ಕೊಡಗು ಜಿಲ್ಲೆಯಲ್ಲಿ ಇದೀಗ ನಿರ್ದಿಷ್ಟ ಗುರಿ ಸಾಧನೆಯಲ್ಲಿ ಇಳಿಮುಖ ಕಂಡುಬAದಿದೆ. ವಾರ್ಷಿಕವಾದ ರಾಜಸ್ವ ಸಂಗ್ರಹ ಸೇರಿದಂತೆ ಹೊಸ ವಾಹನಗಳ ನೋಂದಣಿಯಲ್ಲಿಯೂ ಹಿಂದಿನ ವರ್ಷಗಳಂತೆ ಸಾಧನೆಯಾಗದಿರುವ ಅಂಶ ಕಂಡುಬAದಿದೆ. ಜಿಲ್ಲೆಯಲ್ಲಿ ಕಳೆದ ಒಂದೆರಡು ವರ್ಷಗಳಿಂದ ಪ್ರಾಕೃತಿಕ ವಿಕೋಪದಂತಹ ಘಟನೆಗಳು, ಇದರೊಂದಿಗೆ ಕಳೆದ ಬಾರಿ ಹಾಗೂ ಈ ಬಾರಿ ಎದುರಾಗಿರುವ ಕೊರೊನಾ ಪರಿಸ್ಥಿತಿ, ಲಾಕ್‌ಡೌನ್ ನಿರ್ಬಂಧಗಳಿAದಾಗಿ ಬಹುತೇಕ ಆರ್ಥಿಕತೆ ಕುಸಿದಿದೆ. ಆರ್ಥಿಕವಾಗಿ ಜನರು ತೀರಾ ಸಂಕಷ್ಟದಲ್ಲಿ ರುವುದರಿಂದ ಈ ಪರಿಸ್ಥಿತಿ ಎದುರಾಗಿದೆ ಎನ್ನಬಹುದಾಗಿದೆ.

ಹಿಂದಿನ ವರ್ಷಗಳಲ್ಲಿ ಜಿಲ್ಲೆಯಲ್ಲಿ ರಾಜಸ್ವ ಸಂಗ್ರಹದಲ್ಲಿ ಜಿಲ್ಲಾ ಪ್ರಾದೇಶಿಕ ಸಾರಿಗೆ ಇಲಾಖೆಯಲ್ಲಿ ನಿಗದಿತ ಗುರಿಗಿಂತ ಅಧಿಕ ಸಾಧನೆ ಅಂದರೆ ಶೇ.೧೦೦ಕ್ಕೂ ಅಧಿಕ ಆರ್ಥಿಕ ಕ್ರೋಢೀಕರಣ ಕೊಡಗು ಜಿಲ್ಲೆಯಲ್ಲಿ ಆಗುತ್ತಿದ್ದುದು ವಿಶೇಷವಾಗಿತ್ತು. ಇದರೊಂದಿಗೆ ಪುಟ್ಟ ಜಿಲ್ಲೆಯಾದರೂ ವರ್ಷಂಪ್ರತಿ ಜಿಲ್ಲೆಯಲ್ಲಿ ನೋಂದಣಿಯಾಗುತ್ತಿದ್ದ ವಿವಿಧ ಬಗೆಯ ವಾಹನಗಳ ಸಂಖ್ಯೆಯೂ ಹೆಚ್ಚಾಗಿರುತ್ತಿತ್ತು.

ಆದರೆ, ಕಳೆದೆರಡು ವರ್ಷಗಳಿಂದ ಇದು ಕಡಿಮೆಯಾಗಿರುವ ಅಂಕಿ - ಅಂಶ ಇಲಾಖೆಯ ದಾಖಲೆಯ ಪ್ರಕಾರ ತಿಳಿದುಬಂದಿದೆ.

ಕಳೆದ ಬಾರಿ ಶೇ. ೮೪.೩೭ ಸಾಧನೆ

೨೦೨೦-೨೧ನೇ ಸಾಲಿನಲ್ಲಿ ಕೊಡಗು ಜಿಲ್ಲೆಗೆ ವಾರ್ಷಿಕವಾಗಿ ರೂ. ೫೧.೮೪ ಕೋಟಿಯಷ್ಟು ರಾಜಸ್ವ ಸಂಗ್ರಹದ ಗುರಿಯನ್ನು ನೀಡಲಾಗಿತ್ತು.

(ಮೊದಲ ಪುಟದಿಂದ) ಆದರೆ ಇದರಲ್ಲಿ ಸದರಿ ವರ್ಷದ ಆರ್ಥಿಕ ಸಾಲಿನಲ್ಲಿ ಕೇವಲ ೪೩.೨೦ ಕೋಟಿಯಷ್ಟು ಮಾತ್ರ ರಾಜಸ್ವ ಸಂಗ್ರಹಾತಿಯಾಗಿದ್ದು, ಶೇ. ೮೪.೩೭ರ ಸಾಧನೆ ಮಾತ್ರ ಆಗಿದೆ.೨೦೧೯-೨೦ನೇ ಸಾಲಿನಲ್ಲಿ ರೂ. ೫೧.೭೮ ಕೋಟಿ ರಾಜಸ್ವ ಸಂಗ್ರಹದ ಗುರಿ ನೀಡಲಾಗಿದ್ದು, ಇದರಲ್ಲಿಯೂ ಶೇ.೧೦೦ರಷ್ಟು ಸಾಧನೆಯಾಗಿಲ್ಲ. ಈ ವರ್ಷದಲ್ಲಿ ರೂ. ೪೭.೩೮ ಕೋಟಿ ಸಂಗ್ರಹಾತಿಯಾಗಿದ್ದು, ಶೇ. ೯೧.೫೧ರಷ್ಟು ಸಾಧನೆಯಾಗಿತ್ತು.

ಈ ಬಾರಿ ರೂ. ೫೬.೮೨ ಕೋಟಿ ಗುರಿ

ಪ್ರಸಕ್ತ ಸಾಲಿಗೆ ಸಂಬAಧಿಸಿದAತೆ ವಾರ್ಷಿಕವಾಗಿ ರೂ. ೫೬.೮೨ ಕೋಟಿ ಸಂಗ್ರಹಾತಿಯ ಗುರಿಯನ್ನು ನೀಡಲಾಗಿದೆ. ಇದರಲ್ಲಿ ಏಪ್ರಿಲ್ ಹಾಗೂ ಮೇ ಈ ಎರಡು ತಿಂಗಳಿನಲ್ಲಿ ರೂ. ೫.೬೧ ಕೋಟಿಯಷ್ಟು ಸಂಗ್ರಹಾತಿಯಾಗಿದೆ.

೭೪೯೪ ವಾಹನಗಳು

೨೦೨೦-೨೧ನೇ ಸಾಲಿನಲ್ಲಿ ಕೊಡಗಿನಲ್ಲಿ ಆರ್ಥಿಕ ವರ್ಷದ ಅವಧಿಯಲ್ಲಿ ಒಟ್ಟು ೭೪೯೪ ವಾಹನಗಳು ಹೊಸದಾಗಿ ನೋಂದಾವಣಿಯಾಗಿವೆ. ೪೯೬೦ ದ್ವಿಚಕ್ರ ವಾಹನ, ಜೀವಾವಧಿ ತೆರಿಗೆ ಪಾವತಿಯ ವಾಹನ ೧೯೦೯ ಸೇರಿದಂತೆ ವಿವಿಧ ಬಗೆಯ ೭೪೯೪ ವಾಹನ ನೋಂದಣಿಯಾಗಿದ್ದರೆ, ೨೦೨೧- ೨೨ನೇ ಸಾಲಿನಲ್ಲಿ ಏಪ್ರಿಲ್ ಹಾಗೂ ಮೇ ತಿಂಗಳಿನಲ್ಲಿ ೭೧೯ ಹೊಸ ವಾಹನಗಳು ನೋಂದಣಿಯಾಗಿವೆ.

೨೦೧೮-೧೯ ರಲ್ಲಿ ೯೫೪೧ ಹಾಗೂ ೨೦೧೯-೨೦ರಲ್ಲಿ ೯೧೧೦ ಹೊಸ ವಾಹನಗಳು ಜಿಲ್ಲೆಯಲ್ಲಿ ನೋಂದಾವಣೆಯಾಗಿದ್ದವು.