
ಮಡಿಕೇರಿ, ಜೂ. ೨೪: ಕಗ್ಗೋಡ್ಲು ಗ್ರಾಮದ ಬಳಿ ದ್ವಾರಕ ತೋಟದಲ್ಲಿ ತಾ. ೨೨ ರಂದು ನಡೆದಿದ್ದ ಗೋಹತ್ಯೆ ಪ್ರಕರಣಕ್ಕೆ ಸಂಬAಧಿಸಿದAತೆ ಮಡಿಕೇರಿ ಗ್ರಾಮಾಂತರ ಠಾಣಾ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.
ಕೃತ್ಯ ನಡೆದ ದಿನ ಘಟನಾ ಸ್ಥಳದಿಂದ ಅನತಿ ದೂರದಲ್ಲಿ ಪತ್ತೆಯಾಗಿದ್ದ ಕಾರೊಂದನ್ನು (ಕೆ.ಎ. ೦೨ ಝಡ್ -೮೦೯೩) ಪೊಲೀಸರು ವಶಪಡಿಸಿಕೊಂಡಿದ್ದರು. ಬಳಿಕ ತನಿಖೆ ಕೈಗೊಂಡ ವೇಳೆ ಆ ಕಾರನ್ನು ದುಷ್ಕರ್ಮಿಗಳು ಗೋಹತ್ಯೆ ಕೃತ್ಯಕ್ಕೆ ಬಳಸಿದ್ದರು ಎಂಬುದು ದೃಢಪಟ್ಟಿದ್ದು, ಆ ಕಾರಿನ ಚಾಲಕ ಕೊಳಕೇರಿ ಕುಂಜಿಲ ಗ್ರಾಮದ ಆಶಿಕ್ ಎಂಬಾತನನ್ನು ಬಂಧಿಸಿದ್ದಾರೆ. ದುಷ್ಕೃತ್ಯದಲ್ಲಿ ಭಾಗಿಯಾಗಿರುವ ಉಳಿದ ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.