ಮಡಿಕೇರಿ, ಜೂ. ೨೪: ಮಕ್ಕಳ ರಕ್ಷಣಾ ನಿರ್ದೇಶನಾಲಯ ವತಿಯಿಂದ ರಾಜ್ಯದಲ್ಲಿ ಕೋವಿಡ್-೧೯ ಸಾಂಕ್ರಾಮಿಕ ರೋಗದಿಂದ ಬಾಧಿತ ಮಕ್ಕಳನ್ನು ಬೆಂಬಲಿಸಲು ಹೆಚ್ಚಿನ ಸಂದರ್ಭಗಳಲ್ಲಿ ಮಗುವಿಗೆ ಪಾಲನೆ ಮತ್ತು ರಕ್ಷಣೆಯನ್ನು ಒದಗಿಸಲು ವಿಸ್ತçತ ಕುಟುಂಬ, ಏಕಪೋಷಕರ ನೆರವಿದ್ದರೂ ಸಹ ತಂದೆ/ ತಾಯಿಯರನ್ನು ಕಳೆದುಕೊಂಡ ೧೮ ವರ್ಷದೊಳಗಿನ ಮಗುವನ್ನು ಮಾನಸಿಕ ಆಘಾತದಿಂದ ಹೊರತರಲು ಹಾಗೂ ಮಗುವಿನ ದೀರ್ಘಕಾಲಿಕ ಸಕಾರಾತ್ಮಕ ಬೆಳವಣಿಗೆಗೆ ಮತ್ತು ಸರ್ವತೋಮುಖ ಅಭಿವೃದ್ಧಿಗೆ ಅನುವಾಗುವಂತೆ “ಬಾಲ ಹಿತೈಷಿ” (ಮಾರ್ಗದರ್ಶಕತ್ವ/ ಮೆಂಟರ್ಶಿಪ್) ಎಂಬ ಹೊಸ ಯೋಜನೆಯನ್ನು ಜಾರಿಗೊಳಿಸಲಾಗಿದೆ.
ಆದ್ದರಿಂದ ಇಬ್ಬರು ಪೋಷಕರು ಅಥವಾ ಪೋಷಕರಲ್ಲಿ ಒಬ್ಬರನ್ನು ಕಳೆದುಕೊಂಡ ಆಘಾತಕ್ಕೆ ಒಳಗಾಗಿರುವ ಮಕ್ಕಳಿಗೆ ಶೈಕ್ಷಣಿಕವಾಗಿ, ಭಾವನಾತ್ಮಕವಾಗಿ, ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ, ತಮ್ಮ ಅತ್ಯುನ್ನತ ಸಾಮರ್ಥ್ಯವನ್ನು ಸಾಧಿಸಲು ಅವರಿಗೆ ಇದಕ್ಕೆ ಪೂರಕವಾಗಿ ಸಹಾಯ ಮಾಡಲು ಮತ್ತು ಮಗುವಿಗೆ ಮಾರ್ಗದರ್ಶನ ನೀಡಲು ಉತ್ಸುಕರಾಗಿರುವ ಯಾವುದೇ ವ್ಯಕ್ತಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದಲ್ಲಿ ನೊಂದಾಯಿಸಿಕೊಳ್ಳಬೇಕಾಗುತ್ತದೆ.
ಮಾರ್ಗದರ್ಶಕರಾಗಿ ನೊಂದಾಯಿಸಿಕೊಳ್ಳಲು ಅರ್ಜಿ ನಮೂನೆಯು (ಅನುಬಂಧ-೧) ಮಕ್ಕಳ ರಕ್ಷಣಾ ನಿರ್ದೇಶನಾಲಯದ ವೆಬ್ಸೈಟ್ hಣಣಠಿs://iಛಿಠಿs.ಞಚಿಡಿಟಿಚಿಣಚಿಞಚಿ. gov.iಟಿ ನಲ್ಲಿ ಡಿಜಿಟಲ್ ಫಾರ್ಮ್ ಲಭ್ಯವಿದ್ದು, ಇಚ್ಚೆಯುಳ್ಳ ಮಾರ್ಗದರ್ಶಕರು ಈ ಲಿಂಕ್ ಮೂಲಕ ನೊಂದಾಯಿಸಿಕೊಳ್ಳಬಹುದು.
ಮಾರ್ಗದರ್ಶಕರಿಗೆ ಮಕ್ಕಳ ರಕ್ಷಣಾ ನಿರ್ದೇಶನಾಲಯ, ಬೆಂಗಳೂರು ಇವರಿಂದ ಸೂಕ್ತ ತರಬೇತಿ ನೀಡಲಾಗುವುದು. ಮಾರ್ಗದರ್ಶಕರಾಗಿ ಸೇವೆ ಸಲ್ಲಿಸುವವರಿಗೆ ಇಲಾಖೆಯಿಂದ ಯಾವುದೇ ಗೌರವಧನ/ ಶುಲ್ಕವನ್ನು ಪಾವತಿಸಲಾಗುವುದಿಲ್ಲ ಹಾಗೂ ಇದೊಂದು ಸಾಮಾಜಿಕ ಜವಾಬ್ದಾರಿಯಾಗಿರುತ್ತದೆ.
ಹೆಚ್ಚಿನ ಮಾಹಿತಿಗೆ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಯವರ ಕಚೇರಿ, ಮಡಿಕೇರಿ ಕೊಡಗು ಜಿಲ್ಲೆ. ದೂ. ೦೮೨೭೨-೨೨೮೮೦೦, ಅಧ್ಯಕ್ಷರು ಮಕ್ಕಳ ಕಲ್ಯಾಣ ಸಮಿತಿ, ಕೊಡಗು ಜಿಲ್ಲೆ. ದೂ. ೦೮೨೭೨-೨೨೪೨೨೦ನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಅರುಂಧತಿ ತಿಳಿಸಿದ್ದಾರೆ.