* ಮಡಿಕೇರಿ ೫೪.೦೧ * ವೀರಾಜಪೇಟೆ ೩೨.೫೩
* ಸೋಮವಾರಪೇಟೆ ೨೪.೭೮ ಇಂಚು
ಮಡಿಕೇರಿ, ಜೂ. ೨೩: ಕೊಡಗು ಜಿಲ್ಲೆಯಲ್ಲಿ ಪ್ರಸಕ್ತ ವರ್ಷ ಜನವರಿಯಿಂದ ಈತನಕ ಕಳೆದ ವರ್ಷಕ್ಕಿಂತ ಸರಾಸರಿ ೧೦ ಇಂಚಿನಷ್ಟು ಅಧಿಕ ಮಳೆಯಾಗಿದೆ. ಕಳೆದ ಬಾರಿ ಈ ಅವಧಿಯಲ್ಲಿ ೧೫.೯೧ ಇಂಚು ಮಳೆಯಾಗಿದ್ದರೆ ಈ ವರ್ಷ ೨೫ ಇಂಚಿನಷ್ಟು ಸರಾಸರಿ ಮಳೆಯಾಗಿದೆ.
ಮಡಿಕೇರಿ ತಾಲೂಕಿನಲ್ಲಿ ಕಳೆದ ವರ್ಷ ಜನವರಿಯಿಂದ ಈತನಕ ೨೧.೩೯ ಇಂಚು ಮಳೆಯಾಗಿದ್ದರೆ ಈ ಬಾರಿ ೫೪.೦೧ ಇಂಚು. ವೀರಾಜಪೇಟೆ ತಾಲೂಕಿನಲ್ಲಿ ಕಳೆದ ಬಾರಿ ೧೬.೬೦ ಹಾಗೂ ಈ ಬಾರಿ ೩೨.೫೩ ಇಂಚು ಮಳೆಯಾಗಿದೆ. ಸೋಮವಾರಪೇಟೆ ತಾಲೂಕಿನಲ್ಲಿ ಕಳೆದ ವರ್ಷ ಜನವರಿಯಿಂದ ಈತನಕ ೯.೭೩ ಇಂಚು ಮಳೆಯಾಗಿದ್ದರೆ, ಪ್ರಸಕ್ತ ಸಾಲಿನಲ್ಲಿ ೨೪.೭೮ ಇಂಚಿನಷ್ಟು ಮಳೆ ಬಿದ್ದಿದೆ.
ಹಿಂದಿನ ವರ್ಷದಲ್ಲಿ ಜೂನ್ ತಿಂಗಳಿನಲ್ಲಿ ಹೆಚ್ಚು ಮಳೆಯಾಗಿರಲಿಲ್ಲ. ಆದರೆ ಈ ಬಾರಿ ಕಳೆದ ಒಂದು ವಾರದಲ್ಲಿ ಜಿಲ್ಲೆಯಲ್ಲಿ ಭಾರೀ ಮಳೆಯಾಗಿತ್ತು. ಇದೀಗ ಒಂದೆರಡು ದಿನಗಳಿಂದ ಮಳೆ ಇಳಿಮುಖವಾದಂತಿದ್ದು, ತುಂತುರು ಮಳೆಯಾಗುತ್ತಿದ್ದರೂ ಅಲ್ಲಲ್ಲಿ ಬಿಸಿಲಿನ ವಾತಾವರಣವೂ ಕಂಡುಬರುತ್ತಿದೆ.
ಕಳೆದ ೨೪ ಗಂಟೆಯಲ್ಲಿ ಜಿಲ್ಲೆಯಲ್ಲಿ ಹೆಚ್ಚಿನ ಮಳೆಯಾಗಿರುವ ಕುರಿತು ವರದಿಯಾಗಿಲ್ಲ. ತಾ. ೨೩ ರಂದು ಇದೇ ಸನ್ನಿವೇಶವಿತ್ತು.