ಕೋವರ್ಕೊಲ್ಲಿ ಇಂದ್ರೇಶ್
ನವದೆಹಲಿ, ಜೂ. ೨೩: ದಕ್ಷಿಣ ಭಾರತದ ಕಾಡುಗಳಲ್ಲಿ ಐಸಿಸ್ ಉಗ್ರರು ಅಡಗುದಾಣಗಳನ್ನು ನಿರ್ಮಿಸಲು ಭಾರೀ ಯೋಜನೆ ಹಾಕಿಕೊಂಡಿದ್ದರು ಎಂದು ರಾಷ್ಟಿçÃಯ ತನಿಖಾ ದಳ (ಎನ್ಐಎ)ವು ಚೆನ್ನೆöÊನ ಭಯೋತ್ಪದನಾ ನಿಗ್ರಹ ದಳದ ನ್ಯಾಯಾಲಯಕ್ಕೆ ಸಲ್ಲಿಸಿರುವ ಚಾರ್ಜ್ ಶೀಟ್ನಲ್ಲಿ ತಿಳಿಸಿದ್ದಾರೆ. ಕಳೆದ ವಾರ ಸಲ್ಲಿಸಲಾಗಿರುವ ಈ ಚಾರ್ಜ್ಶೀಟ್ನಲ್ಲಿ ಐಸಿಸ್ ಉಗ್ರರು ತಮಿಳುನಾಡು, ಆಂಧ್ರಪ್ರದೇಶ ಮತ್ತು ಕರ್ನಾಟಕದ ಕಾಡುಗಳಲ್ಲಿ ಸುಭದ್ರ ಅಡಗುತಾಣಗಳನ್ನು ನಿರ್ಮಿಸಿಕೊಂಡು ವಿಧ್ವಂಸಕ ಕೃತ್ಯವನ್ನು ಎಸಗಲು ಸಂಚು ರೂಪಿಸಲು ಯತ್ನಿಸಿದ್ದರು ಎಂದು ಎನ್ಐಎ ತಿಳಿಸಿದೆ.
೨೦೨೦ರಲ್ಲಿ ತಮಿಳುನಾಡಿನ ಸೇಲಂ ಮತ್ತು ಚೆನ್ನೆöÊನಲ್ಲಿ ಎನ್ಐಎ ಧಾಳಿ ನಡೆಸಿ ಕೆಲ ಶಂಕಿತ ಉಗ್ರರನ್ನು ಬಂಧಿಸಿತ್ತು. ಬಂಧಿತರು ನೂರಾರು ಸಿಮ್ ಕಾರ್ಡುಗಳನ್ನು ನಕಲಿ ದಾಖಲಾತಿಗಳ ಮೂಲಕ ಪಡೆದುಕೊಂಡಿದ್ದ ಆರೋಪದ ಬಗ್ಗೆ ತನಿಖೆ ನಡೆಸುತ್ತಿದ್ದಾಗ ಈ ವಿಚಾರ ಬೆಳಕಿಗೆ ಬಂದಿತು ಎಂದು ಎನ್ಐಎ ಚಾರ್ಜ್ ಶೀಟ್ನಲ್ಲಿ ತಿಳಿಸಿದೆ. ಈ ಮಾದರಿಯ ಭಾಗವಾಗಿದ್ದ ಬೆಂಗಳೂರಿನಲ್ಲಿ ಬಂಧಿಸಲ್ಪಟ್ಟ ಉಗ್ರ ಮೆಹಬೂಬ್ ಪಾಷಾ ಮತ್ತು ತಮಿಳುನಾಡಿನ ಕಡಲೂರಿನಲ್ಲಿ ಬಂಧಿತನಾದ ಉಗ್ರ ಖ್ವಾಜಾ ಮೊಹಿದೀನ್ ಇಬ್ಬರೂ ಕಾರ್ಯ ನಿರ್ವಹಿಸುತ್ತಿದ್ದು ಇವರಿಬ್ಬರೂ ಆಲ್ ಹಿಂದ್ ಎಂಬ ಉಗ್ರ ಸಂಘಟನೆಯ ಭಾಗವಾಗಿದ್ದರು. ಈ ಸಂಘಟನೆಯು ಐಸಿಸ್ಗೆ ಭಾರತದಲ್ಲಿ ಉಗ್ರರನ್ನು ನೇಮಕ ಮಾಡಿಕೊಳ್ಳುತ್ತಿತ್ತು ಎನ್ನಲಾಗಿದೆ.
ಈ ಆಲ್ ಹಿಂದ್ ಸಂಘಟನೆಯು ಒಟ್ಟು ೨೦ ಸದಸ್ಯರನ್ನು ನೇಮಕ ಮಾಡಿಕೊಂಡಿದ್ದು ಇವರು ವಿಧ್ವಂಸಕ ಕೃತ್ಯಗಳನ್ನು ಎಸಗಿ ನಂತರ ಕಾಡಿನೊಳಗೆ ಸೇರಿಕೊಳ್ಳುವ ಯೋಜನೆ ರೂಪಿಸಿದ್ದರು ಎಂದು ಎನ್ಐಎ ತನ್ನ ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಿದೆ. ಇದೇ ಕಾರಣಕ್ಕೆ ಇವರು ಕರ್ನಾಟಕದ ಶಿವನಸಮುದ್ರಕ್ಕೆ ಭೇಟಿ ನೀಡಿ ಕಾಡಿನೊಳಗೆ ಒಂದು ಸ್ಥಳವನ್ನು ಆಯ್ಕೆ ಮಾಡಿಕೊಂಡಿದ್ದು ತರಬೇತಿ ನೀಡಲು ಯೋಜಿಸಿದ್ದರು ಎನ್ನಲಾಗಿದೆ. ಇದಕ್ಕಾಗಿ ಅವರು ಕಾಡಿನಲ್ಲಿ ತಂಗಲು ಡೇರೆಗಳು, ಬೂಟುಗಳು, ಮದ್ದುಗುಂಡುಗಳು, ಮಲಗುವ ಸಾಮಾನುಗಳು, ಹಗ್ಗಗಳು ಮತ್ತು ಏಣಿಗಳನ್ನು ಸಂಗ್ರಹಿಸಿದ್ದರು ಎಂದು ತಿಳಿಸಿದೆ. ಇಂಪ್ರೂವೈಸ್ಡ್ ಎಕ್ಸ್ಪ್ಲೋಸಿವ್ ಡಿವೈಸ್ (ಐಇಡಿ)ಗಳನ್ನು ತಯಾರಿಸಲು ಈ ಉಗ್ರರು ಭಾರೀ ಪ್ರಮಾಣದ ಕಚ್ಚಾ ವಸ್ತುಗಳನ್ನು ಸಂಗ್ರಹಿಸಿದ್ದರು ಎಂದೂ ಉಲ್ಲೇಖಿಸಿದೆ.
ಈ ಉಗ್ರರು ಮಹಾರಾಷ್ಟçದ ರತ್ನಗಿರಿ, ಕರ್ನಾಟಕದ ಕೊಡಗು ಮತ್ತು ಕೋಲಾರ, ಪಶ್ಚಿಮ ಬಂಗಾಳದ ಬುರ್ದ್ವಾನ್ ಮತ್ತು ಸಿಲಿಗುರಿ ಹಾಗೂ ಆಂಧ್ರಪ್ರದೇಶದ ಚಿತ್ತೂರಿನ ಅರಣ್ಯಗಳಲ್ಲಿ ಅಡಗುದಾಣ ನಿರ್ಮಿಸಲು ಸ್ಥಳಪರಿಶೀಲನೆ ನಡೆಸಿದ್ದರು ಎಂದು ಎನ್ಐಎ ತಿಳಿಸಿದೆ. ಈ ಕಾಡುಗಳಲ್ಲಿ ಮೊದಲು ಅಡಗುದಾಣಗಳನ್ನು ನಿರ್ಮಿಸಿಕೊಂಡು ನಂತರ ವ್ಯವಸ್ಥಿತ ಧಾಳಿಯ ಮೂಲಕ ಹಿಂದೂ ನಾಯಕರು, ಅಧಿಕಾರಿಗಳು, ಪೊಲೀಸರು ಮತ್ತು ರಾಜಕೀಯ ಮುಖಂಡರನ್ನು ಕೊಲ್ಲುವ ಉದ್ದೇಶ ಹೊಂದಿದ್ದರು ಎಂದು ಎನ್ಐಎ ಉಲ್ಲೇಖಿಸಿದೆ. ಎನ್ಐಎ ತನ್ನ ಪೂರಕ ಚಾರ್ಜ್ಶೀಟ್ನಲ್ಲಿ ತಿರುವನಂತಪುರAನ ನಿವಾಸಿ ಸೈಯದ್ ಅಲಿಯನ್ನು ಹೆಸರಿಸಿದ್ದು, ಅಲಿ ಮತ್ತು ಸಹಚರರು ಐಇಡಿಗಳನ್ನು ತಯಾರಿಸಿ ಪರೀಕ್ಷಿಸುತ್ತಿದ್ದಾರೆ ಮತ್ತು ಜಿಹಾದ್ ಅನ್ನು ಸಾರುವ ಸಿದ್ಧತೆಗಳ ಭಾಗವಾಗಿ ತಮ್ಮ ವಿದೇಶೀ ಹ್ಯಾಂಡ್ಲರ್ (ಐಸಿಸ್ ವ್ಯಕ್ತಿ) ಜೊತೆ ಸಂವಹನಕ್ಕಾಗಿ ಡಾರ್ಕ್ ವೆಬ್ ಅಂತರ್ಜಾಲವನ್ನು ಬಳಸಿದ್ದಾರೆ ಎಂದು ಎನ್ಐಎ ಉಲ್ಲೇಖಿಸಿದೆ. ಅವರು ದಕ್ಷಿಣ ಭಾರತದ ಕಾಡುಗಳಲ್ಲಿ ಐಸಿಸ್ ಪ್ರಾಂತ್ಯವನ್ನು ಸ್ಥಾಪಿಸುವ ಪ್ರಯತ್ನವನ್ನು ಮಾಡುತ್ತಿದ್ದಾರೆ ಎಂದು ಎನ್ಐಎ ಉಲ್ಲೇಖಿಸಿದೆ.
ಸೈಯದ್ ಅಲಿ ಅಲಿಯಾಸ್ ವಿಂಜಾನಿ (ವಿಜ್ಞಾನಿ) ಎಂಬವನು ತಂತ್ರಜ್ಞಾನ ಪ್ರಿಯ ಎಂದು ಉಲ್ಲೇಖಿಸಿದೆ. ಇವನು ಡಾರ್ಕ್ ವೆಬ್ ಅಂತರ್ಜಾಲವನ್ನು ಬಳಸುವುದನ್ನು ಇತರ ಉಗ್ರರಿಗೆ ಕಲಿಸಿಕೊಟ್ಟಿದ್ದನಲ್ಲದೆ ಮೊಹಿದೀನ್ ಎಂಬ ಉಗ್ರನಿಗೆ ಐಸಿಸ್ನ ವಿದೇಶೀ ಹ್ಯಾಂಡ್ಲರ್ನೊAದಿಗೆ ಮಾತನಾಡಲು ಎನ್ಕ್ರಿಪ್ಟ್ (ಗೂಢಲಿಪಿ) ಮಾಡಿಕೊಂಡು ಸಂವಹನ ನಡೆಸಲು ತಿಳಿಸಿಕೊಟ್ಟಿದ್ದ. ಇದಲ್ಲದೆ ಈ ಉಗ್ರರು ಅನೇಕ ಪಿತೂರಿ ಸಭೆಗಳನ್ನು ನಡೆಸಿದ್ದು ವಿಧ್ವಂಸಕ ಕೃತ್ಯ ನಡೆಸಲು ಸೂಕ್ತ ಅವಕಾಶಕ್ಕಾಗಿ ಕಾಯುತ್ತಿದ್ದರು, ಒಂದು ವೇಳೆ ಇವರನ್ನು ಬಂಧಿಸದಿದ್ದರೆ ವಿಧ್ವಂಸಕ ಕೃತ್ಯ ನಡೆಸುತ್ತಿದ್ದರು ಎಂದೂ ಚಾರ್ಜ್ ಶೀಟ್ ಉಲ್ಲೇಖಿಸಿದೆ. ಈ ವಿದೇಶೀ ಹ್ಯಾಂಡ್ಲರ್ ಪಾಕಿಸ್ತಾನ ಅಥವಾ ಅಫ್ಘಾನಿಸ್ತಾನದಿಂದ ಇವರನ್ನು ಸಂಪರ್ಕಿಸುತಿದ್ದ ಎಂದು ಎನ್ಐಎ ಅಧಿಕಾರಿಗಳು ಶಂಕಿಸಿದ್ದಾರೆ.