ಕೂಡಿಗೆ, ಜೂ. ೨೪: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬ್ಯಾಡಗೊಟ್ಟ ಗ್ರಾಮದಲ್ಲಿರುವ ದಿಡ್ಡಳ್ಳಿ ಪುನರ್ವಸತಿ ಕೇಂದ್ರದಲ್ಲಿ ೩೫೪ ಕುಟುಂಬದವರು ವಾಸಿಸುತ್ತಿದ್ದಾರೆ. ಸರಕಾರದ ಅರೋಗ್ಯ ಇಲಾಖೆಯ ನಿಯಮದಡಿ ಹಾಡಿಯ ಕೇಂದ್ರದಲ್ಲಿ ಗಂಟಲು ದ್ರವ ತಪಾಸಣೆ ಮತ್ತು ಲಸಿಕೆ ಹಾಕುವ ಕಾರ್ಯಕ್ರಮವನ್ನು ಹೆಬ್ಬಾಲೆ ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ಹಮಿ ್ಮಕೊಳ್ಳಲಾಗಿತ್ತು. ಆದರೆ ಪುನರ್ವಸತಿ ಕೇಂದ್ರದ ಅನೇಕರು ತಮ್ಮ ಮನೆಗಳಿಗೆ ಬೀಗ ಹಾಕಿಕೊಂಡು ಲಸಿಕೆಯನ್ನು ಪಡೆಯದೆ ಹೊರ ಹೋಗಿರುವ ಪ್ರಸಂಗ ಎದುರಾಗಿದೆ.

ಬ್ಯಾಡಗೊಟ್ಟ ಗ್ರಾಮದಲ್ಲಿ ಲಸಿಕೆ ಹಾಕುವ ದಿನವನ್ನು ಗ್ರಾಮ ಪಂಚಾಯಿತಿ ಮತ್ತು ಆರೋಗ್ಯ ಇಲಾಖೆಯ ವತಿಯಿಂದ ನಿಗದಿ ಮಾಡಲಾಗಿತ್ತು. ಅಂತೆಯೇ ಈ ದಿನ ಕೇಂದ್ರದ ಸಮುದಾಯದ ಭವನದಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಈ ವಿಷಯ ತಿಳಿದ ಅನೇಕರು ತಮ್ಮ ಮನೆಗಳಿಗೆ ಬೀಗ ಹಾಕಿಕೊಂಡು ಹೊರ ಹೋಗಿರುವದು ಕಂಡು ಬಂದಿತು.

ಮನವಿ ಲೆಕ್ಕಕ್ಕಿಲ್ಲ

ಗ್ರಾಮ ಪಂಚಾಯಿತಿ ವಾರ್ಡ್ನ ಸದಸ್ಯ ಟಿ.ಪಿ.ಹಮೀದ್ ಮತ್ತು ಹೆಬ್ಬಾಲೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಭರತ್, ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಕೇಂದ್ರದಲ್ಲಿರುವ

(ಮೊದಲ ಪುಟದಿಂದ) ಮನೆ ಮನೆಗೆ ತೆರಳಿ ಲಸಿಕೆಯನ್ನು ಹಾಕಿಸಿಕೊಳ್ಳಲು ಮನವಿ ಮಾಡಲು ಹೋದರೂ ಕೂಡ ಕೆಲವರು ಮನೆ ಬೀಗ ಹಾಕಿಕೊಂಡು ಹೋಗುತ್ತಿರುವುದು ಕಂಡುಬAದಿತು.

ಈ ಕೇಂದ್ರದಲ್ಲಿ ೧೮ ವಯಸ್ಸಿನ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ಮತ್ತು ಗಂಟಲು ದ್ರವ ತಪಾಸಣೆ ಮಾಡಿಕೊಳ್ಳಲು ಆರೋಗ್ಯ ಕೇಂದ್ರದ ವತಿಯಿಂದ ಸಿದ್ಧತೆ ಮಾಡಿಕೊಳ್ಳಲಾಗಿತ್ತು.

ಬ್ಯಾಡಗೊಟ್ಟ ಲಸಿಕಾ ಕೇಂದ್ರದಲ್ಲಿ ದಿಡ್ಡಳ್ಳಿ ಪುನರ್ವಸತಿ ಕೇಂದ್ರ ಕೇವಲ ೩೮ ಮಂದಿ ಮಾತ್ರ ಲಸಿಕೆಯನ್ನು ಪಡೆದಿದ್ದಾರೆ. ಉಳಿದವರು ಯಾರೂ ಸಹ ಮುಂದೆ ಬರಲಿಲ್ಲ. ಇನ್ನೂ ೪೮ ಮಂದಿ ಪಕ್ಕದ ಗ್ರಾಮಸ್ಥರು ಲಸಿಕೆ ಹಾಕಿಸಿಕೊಂಡಿದ್ದಾರೆ.

ಈ ಕೇಂದ್ರದಲ್ಲಿ ಇಂದು ೫೦ ಮಂದಿಯನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿ ಇದರಲ್ಲಿ ಒಬ್ಬರಿಗೆ ಕೋವಿಡ್ ಪಾಸಿಟಿವ್ ಬಂದಿರುತ್ತದೆ. ಅವರನ್ನು ಕೂಡಿಗೆ ಕೋವಿಡ್ ಸೆಂಟರ್‌ಗೆ ಕಳುಹಿಸಿ ಕೊಡಲಾಗಿದೆ ಎಂದು ವೈದ್ಯಾಧಿಕಾರಿ ಡಾ ಭರತ್ ತಿಳಿಸಿದರು.

ಪುನರ್ವಸತಿ ಕೇಂದ್ರದ ಗ್ರಾಮಸ್ಥರನ್ನು ಲಸಿಕೆ ಹಾಕಿಸಿಕೊಳ್ಳಲು ಮನವೊಲಿಸಲು ಗ್ರಾಮ ಪಂಚಾಯಿತಿ ಸದಸ್ಯ ಟಿ.ಪಿ. ಹಮೀದ್ ಮತ್ತು ಅಭಿವೃದ್ಧಿ ಅಧಿಕಾರಿ ಅಯಿಷಾ ಪ್ರಯತ್ನಿಸುವುದಾಗಿ ತಿಳಿಸಿದ್ದಾರೆ.

ಲಸಿಕೆ ನೀಡುವ ಮತ್ತು ದ್ರವ ತಪಾಸಣೆ ಕೇಂದ್ರದಲ್ಲಿ ಹೆಬ್ಬಾಲೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಭರತ್, ಕೂಡಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಗಳಾ ಪ್ರಕಾಶ್, ಉಪಾಧ್ಯಕ್ಷೆ ಮೋಹಿನಿ ತಮ್ಮಣೆಗೌಡ, ಹಿರಿಯ ಸದಸ್ಯ ಟಿ.ಪಿ.ಹಮೀದ್, ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ಅಧಿಕಾರಿ ಇಂದಿರಮ್ಮ, ಆರೋಗ್ಯ ಇಲಾಖೆಯ ಹಿರಿಯ ಮತ್ತು ಕಿರಿಯ ಸಹಾಯಕರು, ಅಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಕಾರ್ಯ ನಿರ್ವಹಿಸುತ್ತಿದ್ದಾರೆ. - ಕೆ.ಕೆ. ನಾಗರಾಜಶೆಟ್ಟಿ