ಮಡಿಕೇರಿ, ಜೂ. ೨೪: ೧೧ ವರ್ಷದ ಬಾಲಕಿ ಸ್ನಾನದ ಗೃಹದಲ್ಲಿ ಕಾಲು ಜಾರಿ ಬಿದ್ದು ಮೃತಪಟ್ಟ ಘಟನೆ ಟಿ-ಶೆಟ್ಟಿಗೇರಿಯಲ್ಲಿ ನಡೆದಿದೆ. ಗೋಣಿಕೊಪ್ಪಲು ಖಾಸಗಿ ಶಾಲೆಯ ವಿದ್ಯಾರ್ಥಿನಿ ಯಶಿಕಾ ಕಳೆದ ಒಂದು ವಾರದಿಂದ ಟಿ-ಶೆಟ್ಟಿಗೇರಿಯ ತನ್ನ ಸಂಬAಧಿಕರ ಮನೆಯಲ್ಲಿ ವಾಸಿಸುತ್ತಿದ್ದಳು. ಬಾಲಕಿಯ ತಂದೆ ದಿಲೀಪ್ ಅವರಿಗೆ ಕೋವಿಡ್ ದೃಢಪಟ್ಟಿದ್ದ ಕಾರಣ ಯಶಿಕಾ ಸಂಬAಧಿಕರ ಮನೆಗೆ ಬಂದಿದ್ದಳು. ಇಲ್ಲಿ ಬುಧವಾರ ಸ್ನಾನಕ್ಕೆ ಹೋದವಳು ಬಹಳ ಹೊತ್ತಾದರೂ ಹೊರಗೆ ಬರದಿದ್ದರಿಂದ ಸಂಶಯಗೊAಡ ಸಂಬAಧಿಕರು ಬಾಗಿಲಿನ ಬೀಗವನ್ನು ಒಡೆದು ಬಾಗಿಲನ್ನು ತೆರೆದು ನೋಡಿದಾಗ ಯಶಿಕಾ ರಕ್ತದ ಕೊಳದಲ್ಲಿ ಬಿದ್ದಿದ್ದಳು. ಕಿವಿ ಹಾಗೂ ತಲೆಭಾಗಕ್ಕೆ ತೀವ್ರವಾಗಿ ಪೆಟ್ಟಾಗಿತ್ತು. ತಕ್ಷಣವೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಮೃತಪಟ್ಟಿದ್ದಾರೆ. ಯಶಿಕಾ, ದಿಲೀಪ್ ಹಾಗೂ ಪ್ರೇಮ ದಂಪತಿಯ ಏಕೈಕ ಪುತ್ರಿಯಾಗಿದ್ದಳು.