ಮಡಿಕೇರಿ, ಜೂ. ೨೪: ಎಸ್‌ಎಸ್‌ಎಫ್ ಕೊಡಗು ಜಿಲ್ಲಾ ಘಟಕದ ವತಿಯಿಂದ ವಿಶ್ವ ಡ್ರಗ್ಸ್ ವಿರೋಧಿ ದಿನದ ಅಂಗವಾಗಿ ತಾ. ೨೬ ರಂದು ಡ್ರಗ್ಸ್ ವಿರುದ್ಧ ಜಾಗೃತಿ ಆಂದೋಲನ ಹಮ್ಮಿಕೊಳ್ಳಲಾಗಿದೆ.
ಬೆಳಿಗ್ಗೆ ೧೦ ಗಂಟೆಗೆ SSಈ ಏಔಆಂಉU ಥಿouಣube ಛಿhಚಿಟಿಟಿeಟನಲ್ಲಿ ಕಾರ್ಯಕ್ರಮ ನಡೆಯಲಿದ್ದು, ಎಸ್‌ಎಸ್‌ಎಫ್ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ. ಅಬ್ದುಲ್ ರಶೀದ್ ಝೈನಿ ಅಲ್‌ಕಾಮಿಲ್ ಕಕ್ಕಿಂಜೆ ಉದ್ಘಾಟಿಸುವರು. ಕರ್ನಾಟಕ ಮುಸ್ಲಿಂ ಜಮಾಅತ್ ಕಾರ್ಯದರ್ಶಿ ಮೌಲಾನ ಶಾಫಿ ಸದಿ ಮುಖ್ಯ ಭಾಷಣ ಮಾಡುವರು. ಸೋಮವಾರಪೇಟೆ ಆಸ್ಪತ್ರೆ ವೈದ್ಯಾಧಿಕಾರಿ ಡಾ .ಶಿವಪ್ರಸಾದ್, ಜನಾಂದೋಲನ ವೇದಿಕೆ ಹೋರಾಟಗಾರ ವಿ.ಪಿ. ಶಶಿಧರ್, ಶಕ್ತಿ ದಿನಪತ್ರಿಕೆ ಸಂಪಾದಕ ಜಿ. ಚಿದ್ವಿಲಾಸ್, ನೋಟರಿ ಕೆ.ಎಂ. ಕುಂಞ ಅಬ್ದುಲ್ಲ, ಪ್ರೆಸ್‌ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ, ಯಸಳೂರು ಠಾಣಾಧಿಕಾರಿ ಎಸ್. ಮಂಜುನಾಥ್, ಎಸ್‌ಎಸ್‌ಎಫ್ ರಾಷ್ಟಿçÃಯ ನಾಯಕ ಯಾಕೂಬ್ ಮಾಸ್ಟರ್ ಕೊಳಕೇರಿ ಅವರುಗಳು ಸಂದೇಶ ಭಾಷಣ ಮಾಡಲಿದ್ದಾರೆ.