ಸುಂಟಿಕೊಪ್ಪ, ಜೂ. ೨೪: ಸುಂಟಿಕೊಪ್ಪದಲ್ಲಿ ಮಾನಸಿಕ ಅಸ್ವಸ್ಥನ ಉಪಟಳ ಮೀತಿ ಮೀರಿದ್ದು, ಆಯುಧವನ್ನು ಹಿಡಿದು ಜನರಲ್ಲಿ ಭಯಾನಕ ವಾತಾವರಣ ಸೃಷ್ಟಿಸಿ ಸಿಕ್ಕಿದವರ ಮೇಲೆ ಹಲ್ಲೆ ನಡೆಸುತ್ತಿದ್ದು ಈತನನ್ನು ಗ್ರಾಮ ಪಂಚಾಯಿತಿಯವರು ಮಾನಸಿಕ ಆಸ್ಪತ್ರೆಗೆ ದಾಖಲಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಜನತಾ ಕಾಲೋನಿ ನಿವಾಸಿಯೋರ್ವ ಮಾನಸಿಕ ಆಸ್ವಸ್ಥನಾಗಿದ್ದು, ಮನಸ್ಸು ಬಂದಾಗ ಸಿಕ್ಕಿದ ಕೂಲಿ ಕೆಲಸವನ್ನು ನಿರ್ವಹಿಸುವ ಈತ ಕೆಲವೊಮ್ಮೆ ಮಾರುಕಟ್ಟೆ ಆವರಣದಲ್ಲಿ ತಲವಾರು ಹಿಡಿದುಕೊಂಡು ರಂಪಾಟ ಮಾಡುತ್ತಿರುತ್ತಾನೆ.
ತಾ. ೨೧ ರಂದು ಜನತಾ ಕಾಲೋನಿ ನಿವಾಸಿ ಪ್ರಶಾಂತ್ ಎಂಬವನ ಮೇಲೆ ಬಾಟಲಿಯಿಂದ ಹಲ್ಲೆ ನಡೆಸಿ ಗಂಭೀರ ಸ್ವರೂಪದ ಗಾಯವನ್ನುಂಟು ಮಾಡಿದ್ದಾನೆ. ಸಮಾಜದ ಸ್ವಾಸ್ಥö್ಯ ಕೆಡಿಸುತ್ತಾ ಜನರಲ್ಲಿ ಭಯದ ವಾತಾವರಣ ಹುಟ್ಟಿಸುತ್ತಿರುವ ಈತನನ್ನು ಮಾನಸಿಕ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಒದಗಿಸಬೇಕೆಂದು ಗ್ರಾಮ ಪಂಚಾಯಿತಿಯವರು ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.