ಸಿದ್ದಾಪುರ/ಕಡಂಗ, ಜೂ. ೨೨: ರಾಜ್ಯ ಸರ್ಕಾರ ವಿದ್ಯುತ್ ದರವನ್ನು ಏರಿಕೆ ಮಾಡಿರುವುದನ್ನು ಖಂಡಿಸಿ ನೆಲ್ಯಹುದಿಕೇರಿ ಡಿ.ವೈ.ಎಫ್.ಐ. ಸಂಘಟನೆ ವತಿಯಿಂದ ನೆಲ್ಯಹುದಿಕೇರಿ ಚೆಸ್ಕಾಂ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು. ಈ ಸಂದರ್ಭ ಮಾತನಾಡಿದ ಗ್ರಾ.ಪಂ. ಸದಸ್ಯ ಮೋಣಪ್ಪ ಲಾಕ್‌ಡೌನ್ ಸಂದರ್ಭ ಜನಸಾಮಾನ್ಯರು ಕೆಲಸವಿಲ್ಲದೇ ಸಂಕಷ್ಟದಲ್ಲಿರುವ ಸಂದರ್ಭ ಏಕಾಏಕಿ ವಿದ್ಯುತ್ ದರವನ್ನು ಏರಿಕೆ ಮಾಡಿರುವುದು ಖಂಡನೀಯ ಎಂದು ದೂರಿದರು.

ಕೇಂದ್ರ ಸರಕಾರದ ಪೆಟ್ರೋಲ್- ಡೀಸೆಲ್ ಬೆಲೆ ಏರಿಕೆಯಿಂದ ಬಡವರು ಸಮಸ್ಯೆಗೆ ಸಿಲುಕಿಕೊಂಡಿದ್ದಾರೆAದು ಆರೋಪಿಸಿದರು. ಪ್ರತಿಭಟನೆಯಲ್ಲಿ ಡಿ.ವೈ.ಎಫ್.ಐ. ಸಂಘಟನೆಯ ಪದಾಧಿಕಾರಿಗಳಾದ ರಾಜನ್, ಸೌಕತ್, ರಾಶೀದ್, ಸನಿಲ್, ಶಿಯಾಬ್ ಹಾಜರಿದ್ದರು.

ಕುಂಜಿಲ, ಪಡಿಯಾನಿ, ಕೊಂಡAಗೇರಿ, ಗುಂಡಿಗೆರೆ, ಗುಡ್ಡಗದ್ದೆ, ಸಿದ್ದಾಪುರ, ಕಲ್ಲುಬಾಣೆಗಳಲ್ಲೂ ವಿದ್ಯುತ್ ದರ ಏರಿಕೆ ವಿರೋಧಿಸಿ ಪ್ರತಿಭಟನೆ ನಡೆಯಿತು.

*ಸಿದ್ದಾಪುರ : ವಿದ್ಯುತ್ ಶುಲ್ಕ ಏರಿಕೆಯ ಕ್ರಮವನ್ನು ವಿರೋಧಿಸಿ ಡಿವೈಎಫ್‌ಐ ಸಂಘಟನೆ ಗುಹ್ಯ, ಕೂಡುಗದ್ದೆಯಲ್ಲಿ ಪ್ರತಿಭಟನೆ ನಡೆಸಿತು. ರಾತ್ರಿ ವೇಳೆ ಮೊಂಬತ್ತಿ ಬೆಳಗಿ ಅಸಮಾಧಾನ ವ್ಯಕ್ತಪಡಿಸಿದ ಸಂಘಟನೆಯ ಪ್ರಮುಖರು ಜನಸಾಮಾನ್ಯರ ಕಷ್ಟವನ್ನು ಅರಿಯದೆ ಸರ್ಕಾರ ಏಕಾಏಕಿ ಶುಲ್ಕ ಏರಿಕೆ ಮಾಡಿದೆ ಎಂದು ಟೀಕಿಸಿದರು.

ಕೋವಿಡ್ ಲಾಕ್‌ಡೌನ್ ನಿಂದ ಜನರು ಸಂಕಷ್ಟಕ್ಕೆ ಸಿಲುಕಿದ್ದು, ಮೂರು ತಿಂಗಳ ವಿದ್ಯುತ್ ಶುಲ್ಕವನ್ನು ಮನ್ನಾ ಮಾಡಬೇಕೆಂದು ಆಗ್ರಹಿಸಿದರು.

ಗುಹ್ಯ, ಕೂಡುಗದ್ದೆ ಘಟಕದ ಅಧ್ಯಕ್ಷ ಜಾಫರ್, ಸದಸ್ಯರುಗಳಾದ ಅನುಷ್, ಪೀಟರ್, ಕೃಷ್ಣ, ರಿಯಾಜ್ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.