*ಸಿದ್ದಾಪುರ, ಜೂ. ೨೨: ಕೇವಲ ೪ ತಿಂಗಳ ಹಿಂದೆಯಷ್ಟೇ ಅಭಿವೃದ್ಧಿಯಾಗಿದ್ದ ತ್ಯಾಗತ್ತೂರು ಗ್ರಾಮದ ರಸ್ತೆ ಟಿಂಬರ್ ಸಾಗಾಣಿಕೆ ಯಿಂದ ಹದಗೆಟ್ಟಿದೆ ಎಂದು ಗ್ರಾಮಸ್ಥರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಟಿಂಬರ್ ವ್ಯಾಪಾರಿಯೊಬ್ಬರು ಜಿಲ್ಲಾಡಳಿತದ ನಿಯಮ ಉಲ್ಲಂಘಿಸಿ ಟಿಂಬರ್ ಸಾಗಾಟ ಮಾಡುತ್ತಿದ್ದಾರೆ. ಮಳೆಗಾಲವಾಗಿರುವುದರಿಂದ ಹೊಸ ರಸ್ತೆ ಹಾಳಾಗುತ್ತಿದೆ ಎಂದು ಗ್ರಾಮಸ್ಥರು ಮನವರಿಕೆ ಮಾಡಿದರೂ ವ್ಯಾಪಾರಿ ಕೇಳುತ್ತಿಲ್ಲವೆಂದು ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದರು. ಇಂದು ಕೂಡ ಟಿಂಬರ್ ಸಾಗಾಟವಾಗುತ್ತಿದ್ದುದ್ದನ್ನು ಜಿಲ್ಲಾಡಳಿತದ ನಿಯಮ ಉಲ್ಲಂಘಿಸಿ ಟಿಂಬರ್ ಸಾಗಾಟ ಮಾಡುತ್ತಿದ್ದಾರೆ. ಮಳೆಗಾಲವಾಗಿರುವುದರಿಂದ ಹೊಸ ರಸ್ತೆ ಹಾಳಾಗುತ್ತಿದೆ ಎಂದು ಗ್ರಾಮಸ್ಥರು ಮನವರಿಕೆ ಮಾಡಿದರೂ ವ್ಯಾಪಾರಿ ಕೇಳುತ್ತಿಲ್ಲವೆಂದು ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದರು. ಇಂದು ಕೂಡ ಟಿಂಬರ್ ಸಾಗಾಟವಾಗುತ್ತಿದ್ದುದ್ದನ್ನು ಗಮನಿಸಿದ ಗ್ರಾಮಸ್ಥರು ಮೂರು ಲಾರಿಗೆ ತಡೆಯೊಡ್ಡಿದರು. ರಸ್ತೆ ದುರಸ್ತಿ ಪಡಿಸಿಕೊಟ್ಟು ನಂತರ ಲಾರಿ ತೆಗೆದುಕೊಂಡು ಹೋಗಿ ಎಂದು ಒತ್ತಾಯಿಸಿದರು.

ಗ್ರಾ.ಪಂ ಸದಸ್ಯ ಮನುಮಹೇಶ್, ಪ್ರಮುಖರಾದ ಮುಂಡ್ರಮನೆ ಜಯಂತ್, ಸುದೇಶ್, ಚಕ್ರವರ್ತಿ, ವಿನೋದ್, ಪ್ರತಾಪ್ ಮತ್ತಿತರರು ಹಾಜರಿದ್ದು, ಟಿಂಬರ್ ಸಾಗಾಟದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.