ಮಡಿಕೇರಿ, ಜೂ. ೨೨: ಸುಂಟಿ ಕೊಪ್ಪ ಸಮೀಪದ ಗರಗಂದೂರಿನ ರಂಜನ್ ಅವರ ಪತ್ನಿ ರೂಪ (೩೦) ಅವರು ನಾಪತ್ತೆಯಾಗಿರುವುದಾಗಿ ರೂಪ ಅವರ ತಾಯಿ ಪ್ರೇಮ ಅವರು ಸುಂಟಿಕೊಪ್ಪ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಒಂದು ತಿಂಗಳ ಹಿಂದಿನಿAದ ರೂಪ ಅವರ ತಾಯಿ ಪ್ರೇಮ ಮಗಳು ಹಾಗೂ ಅಳಿಯನೊಂದಿಗೆ ವಾಸವಿದ್ದರು. ತಾ.೧೫ ರಂದು ತಾಯಿ ಪ್ರೇಮ ಹಾಗೂ ರೂಪ ಅವರ ನಡುವೆ ಜಗಳವಾಗಿದ್ದು, ರೂಪ ಅವರು ಮನೆಬಿಟ್ಟು ಹೋಗಿದ್ದಾರೆ. ರೂಪ ಅವರು ಪತ್ತೆಯಾದಲ್ಲಿ ಸುಂಟಿಕೊಪ್ಪ ಠಾಣೆ: ೦೮೨೭೬-೨೨೮೩೩೦ ಗೆ ಕರೆ ಮಾಡುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ. ಮನೆಬಿಟ್ಟು ಹೋದಾಗ ರೂಪ ಅವರು ಕೆಂಪು ಬಣ್ಣದ ಟಿ ಶರ್ಟ್ ಹಾಗೂ ಕಪ್ಪು ಬಣ್ಣದ ಪ್ಯಾಂಟ್ ಧರಿಸಿದ್ದರು.