ಮಡಿಕೇರಿ, ಜೂ. ೨೨: ಕೊಡಗು ಜಿಲ್ಲೆಯಲ್ಲಿ ಕಳೆದ ೨೪ ಗಂಟೆ ಅವಧಿಯಲ್ಲಿ ಸರಾಸರಿ ೦.೧೮ ಇಂಚು ಮಳೆಯಾಗಿದೆ. ಮಡಿಕೇರಿ ಕಸಬಾ ೦.೨೮ ಇಂಚು, ನಾಪೋಕ್ಲು ೦.೧೭ ಇಂಚು, ಸಂಪಾಜೆ ೦.೩೧ ಇಂಚು, ಭಾಗಮಂಡಲ ೦.೫೫ ಇಂಚು, ಮಡಿಕೇರಿ ತಾಲೂಕು ಸರಾಸರಿ ೦.೩೩ ಇಂಚು ಮಳೆಯಾಗಿದೆ.

ವೀರಾಜಪೇಟೆ ಕಸಬಾ ೦.೨೦ ಇಂಚು, ಶ್ರೀಮಂಗಲ ೦.೦೭ ಇಂಚು, ಪೊನ್ನಂಪೇಟೆ ೦.೪೭ ಇಂಚು, ಬಾಳೆಲೆ ೦.೦೩ ಇಂಚು, ವೀರಾಜಪೇಟೆ ತಾಲೂಕು ಸರಾಸರಿ ೦.೧೩ ಇಂಚು ಮಳೆಯಾಗಿದೆ. ಹುದಿಕೇರಿ ಹಾಗೂ ಅಮ್ಮತ್ತಿಯಲ್ಲಿ ಮಳೆಯಾದ ಬಗ್ಗೆ ವರದಿಯಾಗಿಲ್ಲ. ಸೋಮವಾರಪೇಟೆ ಕಸಬಾ ೦.೦೧ ಇಂಚು, ಶಾಂತಳ್ಳಿ ೦.೪೪ ಇಂಚು, ಸುಂಟಿಕೊಪ್ಪ ೦.೦೩ ಇಂಚು, ಕುಶಾಲನಗರ, ಕೊಡ್ಲಿಪೇಟೆ, ಶನಿವಾರಸಂತೆಯಲ್ಲಿ ಮಳೆಯಾದ ಬಗ್ಗೆ ವರದಿಯಾಗಿಲ್ಲ. ಸೋಮವಾರಪೇಟೆ ತಾಲೂಕು ಸರಾಸರಿ ೦.೦೯ ಇಂಚು ಮಳೆಯಾಗಿದೆ.