ಕೂಡಿಗೆ, ಜೂ. ೨೨: ಕುಶಾಲನಗರ ತಾಲೂಕು ವ್ಯಾಪ್ತಿಯ ಅರೆ ಮಲೆನಾಡು ಪ್ರದೇಶಗಳಾದ ಶಿರಂಗಾಲ, ಹೆಬ್ಬಾಲೆ, ತೊರೆನೂರು, ಸಿದ್ದಲಿಂಗಪುರ, ಅಳುವಾರ, ಸೀಗೆಹೊಸೂರು, ಚಿಕ್ಕತ್ತೂರು, ಬಸವನತ್ತೂರು ವ್ಯಾಪ್ತಿಯಲ್ಲಿ ಹೆಚ್ಚು ಮುಸುಕಿನ ಜೋಳದ ಬೆಳೆಯನ್ನು ಬೆಳೆಯಲಾಗಿದೆ. ಈ ವ್ಯಾಪ್ತಿಯಲ್ಲಿ ಈಗಾಗಲೇ ಸಾವಿರಾರು ಎಕರೆಗಳಷ್ಟು ಪ್ರದೇಶದಲ್ಲಿ ಜೋಳದ ಬಿತ್ತನೆ ಮಾಡಲಾಗಿದೆ. ಅನೇಕ ರೈತರು ವಿವಿಧ ಕಂಪೆನಿಯ ಜೋಳದ ಹೈಬ್ರೀಡ್ ತಳಿಯ ಬಿತ್ತನೆ ಬೀಜಗಳನ್ನು ಬಿತ್ತನೆ ಮಾಡಿದ್ದಾರೆ. ಈಗಾಗಲೇ ಬಿತ್ತನೆ ಮಾಡಿ ಒಂದು ತಿಂಗಳುಗಳು ಕಳೆದ ಜೋಳ ಬೆಳೆ ಒಂದು ಅಡಿಗಳಷ್ಟು ಬೆಳೆದಿದೆ. ಆದರೆ ಸೈನಿಕ ಹುಳುಗಳ ಕಾಟ ಮತ್ತು ಕಡ್ಡಿಹುಳುಗಳ ಕಾಟದಿಂದ ನಾಶವಾಗುವತ್ತ ತಲುಪಿದೆ.

ರೈತರ ಜಮೀನುಗಳಿಗೆ ಕುಶಾಲನಗರದ ರೈತ ಸಂಪರ್ಕ ಕೇಂದ್ರದ ಅಧಿಕಾರಿ ಅರುಣ ಭೇಟಿ ನೀಡಿ ಪರಿಶೀಲನೆ ನಡೆಸಿ ಜಮೀನಿಗೆ ಅನುಗುಣವಾಗಿ ಇಂತಿಷ್ಟು ಪ್ರಮಾಣದಲ್ಲಿ ರೋಗ ನಿರೋಧಕ ಔಷಧಿಯನ್ನು ಸಿಂಪಡಣೆ ಮಾಡಲು ರೈತರುಗಳಿಗೆ ಮಾಹಿತಿ ನೀಡಿದ್ದಾರೆ.