ಮಡಿಕೇರಿ ಜೂ.೨೨ : ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಒಗ್ಗಟ್ಟಿನಿಂದ ಕಾರ್ಯ ನಿರ್ವಹಿಸುವ ಮೂಲಕ ಕೋವಿಡ್ ಸಂದಿಗ್ಧ ಪರಿಸ್ಥಿತಿಯನ್ನು ಎದುರಿಸಬೇಕೆಂದು ವಿಧಾನ ಪರಿಷತ್ ಸದಸ್ಯೆ ಶಾಂತೆಯAಡ ವೀಣಾಅಚ್ಚಯ್ಯ ಕರೆ ನೀಡಿದ್ದಾರೆ.

ಮದೆ, ಸಂಪಾಜೆ, ಚೆಂಬು ಮತ್ತು ಪೆರಾಜೆ ಗ್ರಾ.ಪಂ. ಗಳಿಗೆ ಭೇಟಿ ನೀಡಿದ ಅವರು ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಅಧಿಕಾರಿಗಳಿಂದ ಕೋವಿಡ್ ನಿರ್ವಹಣೆ ಕುರಿತು ಮಾಹಿತಿ ಪಡೆದರು.

ನಂತರ ಮಾತನಾಡಿದ ವೀಣಾಅಚ್ಚಯ್ಯ ಗ್ರಾಮೀಣ ಭಾಗದಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಕಾರ್ಯ ನಿರ್ವಹಿಸಿ ಕೋವಿಡ್ ಎರಡನೇ ಅಲೆಯನ್ನು ಎದುರಿಸಿದ್ದಾರೆ. ಇದೇ ಮಾದರಿಯಲ್ಲಿ ಮೂರನೇ ಅಲೆಯ ವಿರುದ್ಧವೂ ಹೋರಾಡಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕೆಂದರು.

ಜಿಲ್ಲೆಯ ಜನಪ್ರತಿನಿಧಿಗಳು ಪಕ್ಷಾತೀತವಾಗಿ ಸೋಂಕಿನ ನಿಯಂತ್ರಣಕ್ಕೆ ಶ್ರಮಿಸುತ್ತಿದ್ದಾರೆ, ಅಧಿಕಾರಿಗಳು ಕೂಡ ರಾತ್ರಿ ಹಗಲೆನ್ನದೆ ದುಡಿಯುತ್ತಿದ್ದಾರೆ. ಎಲ್ಲರ ಪ್ರಯತ್ನದ ಫಲವಾಗಿ ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿದೆ. ಮುಂದಿನ ದಿನಗಳಲ್ಲಿ ಇದೇ ಒಗ್ಗಟ್ಟು ಮುಂದುವರೆಯಬೇಕು. ಬಹುತೇಕ ಗ್ರಾ.ಪಂ ಗಳಲ್ಲಿ ಮಹಿಳೆಯರೇ ಅಧ್ಯಕ್ಷ, ಉಪಾಧ್ಯಕ್ಷರಾಗಿದ್ದು, ಈ ಸಂಕಷ್ಟದ ಪರಿಸ್ಥಿತಿಯನ್ನು ಯಶಸ್ವಿಯಾಗಿ ನಿಭಾಯಿಸಿರುವ ಬಗ್ಗೆ ಹೆಮ್ಮೆ ಇದೆ ಎಂದರು.

ಕೋವಿಡ್ ಬೆನ್ನಲ್ಲೇ ಅತಿವೃಷ್ಟಿಯ ಆತಂಕವೂ ಇದ್ದು, ಮಹಾಮಳೆಯ ಪರಿಸ್ಥಿತಿಯನ್ನು ಎದುರಿಸಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕೆಂದು ಗ್ರಾ.ಪಂ ಪ್ರತಿನಿಧಿಗಳಿಗೆ ಹಾಗೂ ಅಧಿಕಾರಿಗಳಿಗೆ ವೀಣಾಅಚ್ಚಯ್ಯ ಸೂಚನೆ ನೀಡಿದರು.

ರಸ್ತೆ ಉದ್ಘಾಟನೆ : ಪೆರಾಜೆ ಗ್ರಾ.ಪಂ ವ್ಯಾಪ್ತಿಯಲ್ಲಿ ವಿಧಾನ ಪರಿಷತ್ ಸದಸ್ಯರ ಅನುದಾನ ರೂ. ೫ ಲಕ್ಷಗಳಲ್ಲಿ ನಿರ್ಮಾಣಗೊಂಡಿರುವ ಕಾಂಕ್ರಿಟ್ ರಸ್ತೆಯನ್ನು ವೀಣಾಅಚ್ಚಯ್ಯ ಉದ್ಘಾಟಿಸಿದರು.

ಸ್ಥಳೀಯ ಕಾಂಗ್ರೆಸ್ ಮುಖಂಡ ಪಿ.ಎನ್.ಅಬೂಬಕರ್, ಪ್ರಮುಖರಾದ ಕೊಲ್ಯದ ಗಿರೀಶ್, ವಿಧಾನ ಪರಿಷತ್ ಸದಸ್ಯರ ಆಪ್ತ ಕಾರ್ಯದರ್ಶಿ ಬೊಳ್ಳಜಿರ ಬಿ. ಅಯ್ಯಪ್ಪ ಮತ್ತಿತರರು ಹಾಜರಿದ್ದರು.

ಮದೆ ಗ್ರಾ.ಪಂ ವ್ಯಾಪ್ತಿಯ ಅನಾಥ ಮಹಿಳೆಯೊಬ್ಬರಿಗೆ ವೀಣಾಅಚ್ಚಯ್ಯ ಅವರು ಆಹಾರ ಸಾಮಗ್ರಿಗಳ ಕಿಟ್ ವಿತರಿಸಿದರು. ಮಹಿಳೆಯ ಪರವಾಗಿ ಗ್ರಾ.ಪಂ. ಉಪಾಧ್ಯಕ್ಷೆ ಪಿ.ಎ. ಚಂದ್ರಾವತಿ ಕಿಟ್ ಪಡೆದರು.

ವಿವಿಧ ಗ್ರಾ.ಪಂ ಭೇಟಿ ಸಂದರ್ಭ ಪ್ರಮುಖರಾದ ಸುರೇಶ್ ಪೆರುಮುಂಡ, ಭೂದೇವಿ, ಜಯರಾಮ್ ಪೇರುಮುಂಡ, ಭೋಜಪ್ಪ ಗೌಡ, ಕಾಚೇಲು ಚಂದ್ರಶೇಖರ, ಶಿಯಾಬ್, ಹರಿಪ್ರಸಾದ್ ಪೆರಾಜೆ, ಕುಸುಮ ಯೋಗೇಶ್, ಶಶಿಕಲಾ, ಕಮಲ, ಕೇಶವ, ಗಿರೀಶ್ ಹೊಸೂರು, ಆದಮ್, ರವಿರಾಜ್ ಹೊಸೂರು, ಸುರೇಶ್ ಪಿ.ಎಲ್, ಸೂರಜ್ ಹೊಸೂರು, ಉಮೇಶ್ ನೀಡುಬೆ, ಭರತ ಕೆದಂಬಾಡಿ, ಗಣಪಯ್ಯ ಗುಂಡಿಮಜೆಲು, ನವೀನ ರಾಮಕಜೆ, ಕೊಂಪುಳಿ ಮೋಹನ, ಭಾರತಿ, ದಿವ್ಯ ಸುಕುಮಾರ್ ಮತ್ತಿತರರು ಹಾಜರಿದ್ದರು.